ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೩ ಅಧ್ಯಾ, ೨.] ಪ್ರಥಮಸ್ಕಂಧವು. ವಾಗಿ ಪ್ರಕೃತಿಮಯವಾದ ದೇಹದಲ್ಲಿ ಪ್ರವೇತಿಸಿ, ರೂಪಭೇದವನ್ನು ಕಾಣಿ ಸುವನು. ಹೀಗೆ ಪರಮಾತ್ಮನು ಚಿದಚಿತ್ತುಗಳ ಮೂಲಕವಾಗಿ ನಾಮರೂಪ ಭೇದಗಳನ್ನೂ, ಜೀವಾತ್ಮನ ಮೂಲಕವಾಗಿ ಸುಖದುಃಖಾದ್ಯನುಭವಗಳನ್ನೂ ಹೊಂದುವಂತೆ ತೋರಿದರೂ, ಆ ನಾಮರೂಪಭೇದಗಳೆಲ್ಲವೂ ಆಯಾಶರೀ ರಗಳಲ್ಲಿ ಮಾತ್ರವೇ ಪಠ್ಯವಸಾನಹೊಂದುವುವು. ಸುಖದುಃಖಾದ್ಯನುಭವಗ , ಪುಣ್ಯಪಾಪಕರ್ಮಗಳೂ, ಜೀವನಲ್ಲಿಮಾತ್ರವೇ ಪ್ರವಸಿತವಾಗುವು ವು. ಇಷ್ಟೆಹೊರತು, ಅಂತರಾತ್ಮನಾದ ಆ ಭಗವಂತನಿಗೆ ಇವುಗಳ ಸಂಬಂಧ ವೇನೂ ಇರುವುತ್ತಿಲ್ಲ. ಹೀಗೆ ಭಗವಂತನು, ಸತ್ಕಾಯಗುಣಮಯಗಳೆನಿಸಿಕೊಂಡ ವೃಥಿವ್ಯಾಮ ಪಂಚಭೂತಗಳು. ಗಂಧಾಸೂಕಗಳು, ಜ್ಞಾನೇಂದ್ರಿಯಕ ರ್ಮೇಂದ್ರಿಯಗಳು, ಅಂತಃಕರಣ, ಇವೇ ಮೊದಲಾದ ಪದಾರ್ಥಗಳನ್ನು ಕೂ ಡಿಸಿ, ತನ್ನಿಂದಲೇ ರ್ಸಿ ಲ್ಪಟ್ಟ ದೇವಾದಿಶರೀರಗಳಲ್ಲಿ ಜೀವಶ೫ರಿಯಾಗಿ ಪ್ರವೇತಿಸಿ, ಆ ಜೀವ ಬ್ಯಾರದಿಂದಲೇ ರೂಪರಸಗಂಧಾದಿವಿಷಯಗಳನ್ನನುಭ ಏಸುವನು. ಆ ಜೀವನ ಮೂಲಕವಾಗಿಯೇ ಪಾಪಪುಣ್ಯಗಳೂ ನಡೆಸುತ್ತಿರು ವನು. ಹೀಗೆ ಸತ್ಯೇಶ್ವರನು ತಾನೋಬ್ಬನಾಗಿದ್ದರೂ, ಚಿದಚಿದ್ರೂಪವಾದ ಆ ಶರೀರಸಂಬಂಧದಿಂದಲೇ ನಾಮರೂಪಭೇದಗಳನ್ನೂ , ಸುಖದುಃಖಾದಿ ಭೋಗಗಳನ್ನೂ, ಕರ್ತೃತ್ವವನ್ನೂ ಹೊಂದಿದಂತೆ ಕಾಣುವನೇಹೊರತು, ವಾಸ್ತವದಲ್ಲಿ ಅವನಿಗೆ ಅವುಗಳೊಡನೆ ಯಾವ ವಿಧದಲ್ಲಿಯೂ ಸಂಬಂಧವಿಲ್ಲ. ನಾಮರೂಪಭೇದಗಳೆಲ್ಲವೂ ಪ್ರಕೃತಿಸಂಬಧವಾದುವು. ಕರ್ತೃತ್ಯಾದಿಗಳೆಲ್ಲ ವೂ ಜೀವಾತ್ಮ ಸಂಬಂಧವಾದುವು. ಹೀಗೆ ಲೋಕಸೃಷ್ಟಿಗೆ ಕಾರಣನಾದ ಸತ್ಯೇಶ್ವರನು, ಸಾಧುಜನಗಳಲ್ಲಿ ಕರುಣೆಯುಳ್ಳವನಾಗಿ, ಕರ್ಮವಶರಾದ ಚೇತನರನ್ನು ದರಿಸುವುದಕ್ಕಾಗಿಯೇ ಸತ್ವಗುಣವನ್ನವಲಂಬಿಸಿ, ದೇವರ "ನುಷ್ಠಾದಿರೂಪಗಳಾದ ಆಕಾರಭೇದಗಳನ್ನು ತನ್ನ ಲೀಲೆಯಿಂದಲೇ ಪರಿ ಗ್ರಹಿಸಿ ಲೋಕಗಳನ್ನು ರಕ್ಷಿಸುತ್ತಿರುವನು. ಇದು ಎರಡನೆಯ ಅಧ್ಯಾಯವು.