ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು. [ಅಧ್ಯಾ, ೬, w+ ಭಗವಂತನ ಇಪ್ಪತ್ತೊಂದವತಾರಗಳು ++ ಎಲೈ ಶೌನಕಾದಿಮಹರ್ಷಿಗಳೆ ! ಪರಮಾತ್ಮನು ಮೊಟ್ಟಮೊದಲ ಲೀಲಾರ್ಥವಾಗಿ ಲೋಕವನ್ನು ಸೃಷ್ಟಿಸಬೇಕೆಂದಪೇಕ್ಷಿಸಿ, ಏಕಾದಶೇಂದ್ರಿ ಯಗಳುಳ್ಳುದಾಗಿಯೂ, ಪಂಚಭೂತಾತ್ಮಕವಾಗಿಯೂ, ಹದಿನಾರುಕಳೆಗಳು. ಳ್ಳುದಾಗಿಯೂ, ಮಹದಾದಿಸಮಷ್ಟಿತತ್ವ ಸಮೂಹವಾಗಿಯೂ, ಅಂಡಕಾ ರಣವಾಗಿಯೂ ಇರುವ*ಪುರುಷರೂಪವನ್ನು ಮೊದಲು ತಾನೇ ಗ್ರಹಿಸಿದನು. ಆತನು ಜಲಮಧ್ಯದಲ್ಲಿ ಯೋಗನಿದ್ರೆಯಿಂದಿರುವಾಗ, ಆತನ ನಾಭಿಯೆಂಬ ಮ ಡುವಿನಲ್ಲಿ ಹುಟ್ಟಿದ ಕಮಲದಿಂದ, ಮರಿಚಿ ಮೊದಲಾದ ಪ್ರಜಾಪತಿಗಳಿಗೆ ಪತಿಯಾದ ಬ್ರಹ್ಮನು ಹುಟ್ಟಿದನು. ಆತನಿಗೆ ಶರೀರಭೂತವಾದ ಪ್ರಕೃತಿಯ ಏಕದೇಶಪರಿಣಾಮಗಳಿಂದಲೇ ಈ ಸಮಸ್ತಲೋಕಗಳೂ ಏರ್ಪಟ್ಟಿರುವುವು. ಹೀಗೆ ಬ್ರಹ್ಮನಿಗೂ, ಸಮಸ್ತಲೋಕಗಳಿಗೂ ಕಾರಣನಾದ ಭಗವಂತನ ರೂಪವು, ಕೇವಲಸತ್ವಮಯವಾಗಿಯೂ, ಶುದ್ಧವಾಗಿಯೂ, ಸರೊತ್ತಮ ವಾಗಿಯೂ ಇರುವುದು. ಅದನ್ನೇ ಅನಿರುದ್ಯರೂಪವೆಂದು ಹೇಳುವರು. ಆ ರೂಪವನ್ನು ಸೂಕ್ಷ್ಮದೃಷ್ಟಿಯುಳ್ಳ ಯೋಗಿಗಳುಮಾತ್ರ ಉತ್ತಮಜ್ಞಾನ ವಿಶಿಷ್ಟವಾದ ತಮ್ಮ ಮನಸ್ಸಿನಿಂದ ನೋಡಬಲ್ಲರು. ಅನಿರುದ್ಯನಾಮಕವಾದ ಆ ರೂಪವು, ಸಾಮಾನ್ಯಪುರುಷಸ್ವರೂಪವಲ್ಲ! ಸಹಸ್ರಪಾದಗಳು! ಸಹಸ್ರ ಭುಜಗಳು!ಸಹಸ್ರಮುಖಗಳು! ಸಾವಿರತೊಡೆಗಳು!ಇವುಗಳಿಂದ ಮಹಾದ್ಭುತ ವಾಗಿ, ಸಹಸ್ರತಿರಸ್ಸುಗಳಿಂದಲೂ, ಸಹಸ್ರನೇತ್ರಗಳಿಂದಲೂ, ಸಾವಿರಕಿವಿಗ ಳಿಂದಲೂ, ಸಾವಿರಮೂಗುಗಳಿಂದಲೂ, ಸಹಸ್ರಕಿರೀಟ ಕುಂಡಲಗಳಿಂದಲೂ ಶೋಭಿಸುತ್ತಿರುವುದು. ಈ ಅನಿರುದ್ಯಸ್ವರೂಪವೇ ಮುಂದಿನ*ಅವತಾರಗ ಇದರಿಂದ ಭಗವಂತನಿಗೆ, ಶುದ್ಧ ಸತ್ಯಮಯವಾದ ಪರಸ್ವರೂಪವೊಂದು, ಚೇ ತನಮಿಶ್ರವಾಗಿ, ಪ್ರಕೃತಿವಿಕಾರಗಳಾದ ಮಹದಾದಿತ ಸಮೂಹದ ರೂಪವೊಂದು. ಹೀಗೆ ಎರಡುರೂಪವುಂಟೆಂದು ತಿಳಿಯಬೇಕು,

  • ಅವತಾರಗಳಲ್ಲಿ ಕೆಲವು ಭೇದಗಳುಂಟು. ಅನುಪ್ರವೇಶಾವತಾರವೆಂದೂ, ಸ ರೂಪಾವತಾರವೆಂದೂ ಮುಖ್ಯವಾಗಿ ಎರಡುಭೇದಗಳು, ದೇವಾದಿಶರೀರಗಳಲ್ಲಿ ಸೇರಿ ಅವತರಿಸುವುದು ಅನುಪ್ರವೇಶವೆನಿಸುವುದು, ನಿಜರೂಪದಿಂದಲೇ ಅವತರಿಸುವುದು