ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

28 ಅಧ್ಯಾ, ೩.] ಪ್ರಥಮಸ್ಕಂಧವು. ಳೆಲ್ಲಕ್ಕೂ ಕಾರಣಭೂತವಾದುದು. ಇದೇ ಸಮಸ್ತಪ್ರಪಂಚಕ್ಕೂ ಬೀಜಭೂ ತವು. ಇದಕ್ಕೆ ಅಪಕ್ಷಯಾದಿವಿಕಾರಗಳೊಂದೂ ಇಲ್ಲವು. ಆದುದರಿಂದ ಇದು ಅಪ್ರಾಕೃತವೆನಿಸುವುದು. ಈ ಅನಿರುದ್ಧನಿಗೆ ಶರೀರಾಂಶವಾದ ಚಿದಚಿತ್ತ ಗಳ ಒಂದುಭಾಗದಿಂದ ದೇವರನುಷ್ಯಾದಿಗಳೆಲ್ಲವೂ ಉದ್ಭವಿಸಿದುವು. ಆ ದೇವನೇ ಮೊದಲು ಚತುರ್ಮುಖಶರೀರನಾಗಿ ಸನತ್ಕುಮಾರರೂಪದಿಂದವ ತರಿಸಿ, ನಿರ್ವಿಘ್ನು ವಾಗಿ ಬ್ರಹ್ಮಚಾರವನ್ನು ಸಲಿಸಿದನು. ಇದೇ ಮೊದಲನೆಯ ಅವತಾರವು. ಯಜ್ಞೆಶ್ವರನಾದ ಆ ಭಗವಂತನೇ ಲೋಕಾಭಿವೃದ್ಧಿಗಾಗಿ ಪ್ರಯತ್ನಿಸಿ, ಪಾತಾಳದಲ್ಲಿ ಹುದುಗಿಹೋಗಿದ್ದ ಭೂಮಿಯನ್ನು ದ್ಧರಿಸುವು ದಕ್ಕಾಗಿ ವರಾಹಶರೀರವನ್ನು ಧರಿಸಿದನು. ಇದು ಎರಡನೆಯ ಅವತಾರವು. ಭಗವಂತನ ಮೂರನೆಯ ಅವತಾರವು ಋಷಿಜನ್ಮವು. ಇದರಲ್ಲಿ ನಾರದರೂ ಪವನ್ನು ಹೊಂದಿ,* ನಿವೃತ್ತಿಧರ್ಮವುಳ್ಳವರು ಪ್ರವೃತ್ತಿಧರ್ಮಗಳನ್ನು ನಡೆಸ ಕೂಡದೆಂಬ ವಿಧಿಯನ್ನು ತೋರಿಸುವ ಪಾಂಚರಾತ್ರಶಾಸ್ತ್ರವನ್ನು ವಿವರಿಸಿದ ನು. ನಾಲ್ಕನೆಯ ಅವತಾರದಲ್ಲಿ ಧರ್ಮಪುರುಷನ ಭಾರೈಯಾದ ಮೂರ್ತಿದೇವಿ ಯಲ್ಲಿ.ನರನಾರಾಯಣರೂಪದಿಂದ ಹುಟ್ಟಿ ಶಮದಮಾಹಿಗುಣಗಳಿಂದ ಕೂಡಿ ದ ದುಶ್ಚರವಾದ ತಪಸ್ಸನ್ನು ನಡೆಸಿದನು. ಅದರಿಂದಾಚೆಗೆ ಕಪಿಲಾವತಾರವ ನೈತಿ, ಸಿದ್ಧರಿಗೆ ಅಧಿಪತಿಯಾಗಿ, ಕಾಲದೋಷದಿಂದ ಅಳಿಸಿಹೋಗಿದ್ದು ಬಾಗಿ ಸ್ವರೂಪಾವತಾರವು. ಭಗವಂತನಿಗೆ ಇವೆರಡೂ ಕರ್ಮಾಧೀನಗಳಲ್ಲವಾದುದರಿಂದ, ಅವತಾರವೆಂದು ಕರೆಯಲ್ಪಡುವುವು. ಇದಲ್ಲದೆ ಪೂರ್ಣಾವತಾರವೆಂದ, ಅಂಶಾವತಾರ ವೆಂದೂ ಬೇರೆ ಎರಡು ಬಗೆಯುಂಟು. ಪೂರ್ಣಾವತಾರವೆಂದರೆ ಭಗವಂತನು ಮಾಡು ಪರಿಪೂರ್ಣನಾಗಿ ತಾನೇ ತನ್ನ ಸ್ವರೂಪದಿಂದದತರಿಸುವುದು, ಅಂಶಾವತಾರವೆಂದರೆ, ತತ್ತಜ್ಜಿವಾಂತರಾತ್ಮನಾದ ಭಗವಂತನು, ಆಯಾ ಜೀವಾತ್ರ ಮೂಲಕವಾಗಿ ನಿಜವೀರಾದಿ ಗುಣಲೇಶವನ್ನು ಹೊರಪಡಿಸುವುದು, ಇವೆರಡರಲ್ಲಿ ವರಾಹ, ನಾರಾಯಣ, ಮತ್ತ್ವ, ಕೂರ್ಮ, ಮೋಹಿನೀ,ನೃಸಿಂಹ, ವಾಮನ, ರಾಮ ಕೃಷ್ಣಾವತಾರಗಳು ಪೂರ್ಣಾವತಾರಗ ಳೆಂದು ಆಯಾಪುರಾಣಗಳಿಂದ ತಿಳಿದು ಬರುವುದು.ಉಳಿದುವೆಲ್ಲವೂ ಅಂಶಾವತಾರಗಳು,

  • ನಿವೃತ್ತಿಧರ್ಮವೆಂದರೆ ಅವರವರು ನಡೆಸತತ್ಯ ಕರ್ಮಗಳನ್ನು ಫಲಾಭಿಲಾಷೆ ಯಿಲ್ಲದೆ ಕೇವಲಭಗವತ್ಪ್ರೀತ್ಯರ್ಥವಾಗಿ ನಡೆಸುವುದು, ಇದೇ ಮೊಕ್ಷಸಾಧಕವು. ಪ್ರವೃತ್ತಿಧರ್ಮವೆಂದರೆ ಇತರಫಲೋದ್ದೇಶದಿಂದ ನಡೆಸುವುದು,