ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೩.] ಪ್ರಥಮಸ್ಕಂಧವು. ಮೊಹಿನೀರೂಪದಿಂದ ರಾಕ್ಷಸರನ್ನು ಮೋಹಗೊಳಿಸಿ, ದೇವತೆಗಳಿಗೆ ಅಮೃತ ವನ್ನು ಕುಡಿಸಿದನು. ಹದಿನಾಲ್ಕನೆಯ ಅವತಾರದಲ್ಲಿ ನರಸಿಂಹರೂಪವನ್ನು ಧರಿಸಿ,ಚಾಪೆನೇಯುವವನು ಹೊಡಕೆಗಳನ್ನು ಸೀಳುವಂತೆ, ತನ್ನ ಉಗುರುಗಳಿಂದ ಲೇ ಹಿರಣ್ಯಕಶಿಪುವೆಂಬ ಬಲಿಷ್ಟನಾದ ರಾಕ್ಷಸನ ಎದೆಯನ್ನು ಸೀಳಿದನುಹದಿ ನೈದನೆಯ ಅವತಾರದಲ್ಲಿ ಅದಿತಿಕಶ್ಯಪರ ಗರ್ಭದಲ್ಲಿ ವಾಮನಮೂರ್ತಿಯಾಗಿ ಜನಿಸಿ,ಬಲಿಚಕ್ರವರ್ತಿಯ ಯಾಗಶಾಲೆಗೆಹೋಗಿ,ಮರಡಿಯನೆಲವನ್ನು ಯಾ ಚಿಸುವ ನೆವದಿಂದ, ಅರಾಕ್ಷಸನಿಂದಪಹೃತವಾದ ತ್ರೈಲೋಕ್ಯವನ್ನು ಹಿಂತಿ ರುಗಿ ದೇವೇಂದ್ರನಿಗೆ ಕೊಡಿಸಿದನು. ಆದರಿಂದಾಚೆಗೆ ಹದಿನಾರನೆಯ ಆವ ತಾರದಲ್ಲಿ ಪರಶುರಾಮರೂಪದಿಂದ ಬ್ರಹ್ಮದ್ವೇಷಿಗಳಾದ ಕ್ಷತ್ರಿಯರನ್ನು ಇಪ್ಪತೊಂದಾವರ್ತಿ ಸಂಹರಿಸಿ, ಭೂಮಿಯಲ್ಲಿ ಕ್ಷತ್ರಿಯಬೇಜವೇ ಇಲ್ಲದಂ ತೆ ಮಾಡಿದನು. ಅದರಿಂದಾಚೆಗೆ ಹನೇಳನೆಯ ಅವತಾರದಲ್ಲಿ ಸತ್ಯವತೀದೇ ವಿಯಲ್ಲಿ ವೇದವ್ಯಾಸನಾಗಿ ಹುಟ್ಟಿ, ವೇದಾರ್ಥಗಳ ತತ್ತ್ವವನ್ನು ತಿಳಿಯದೆ ಮಂದಮತಿಗಳಾದ ಜನರನ್ನು ದ್ವೇರಿಸುವುದಕ್ಕಾಗಿ, ವೇದವೆಂಬ ವೃಕ್ಷವನ್ನು ಮಕ್ಕು, ಯಜುಸ್ಸು, ಸಾಮ, ಅಥಣಗಳೆಂಬ ಶಾಖೆಗಳಾಗಿ ವಿಭಾಗಿ ಸಿದನು. ಅದರಿಂದಾಚೆಗೆ ಹದಿನೆಂಟನೆಯ ಅವತಾರದಲ್ಲಿ ದೇವತೆಗಳ ಕಾರ್ಥವಾಗಿ ರಾಮನೆಂಬ ಹೆಸರಿನಿಂದ ದಶರಥಪುತ್ರನಾಗಿ ಹುಟ್ಟಿ, ಸಮುದ್ರಸೇತುಬಂಧನವೇ ಮೊದಲಾದ ಅಸಾಧ್ಯ ಕಾವ್ಯಗಳನ್ನು ನಡೆಸಿ ದನು. ಅದರಿಂದಾಚೆಗೆ ಯದುವಂಶದ ಬಲರಾಮಕೃಷ್ಣರೆಂಬ ಹೆಸರಿ ನಿಂದ ಎರಡವತಾರಗಳನ್ನೆತ್ತಿ ಭೂಭಾರವನ್ನು ಸಂಹರಿಸಿದನು. ಹೀ ಗೆ ಆ ಭಗವಂತನು ಇಪ್ಪತವತಾರಗಳನ್ನೆತ್ತಿದನು. ಇನ್ನು ಮುಂದೆಯೂ ಆತನು ಈ ಕಲಿಯುಗದಲ್ಲಿ ಕ್ರಮಕ್ರಮವಾಗಿ ಹೆಚ್ಚಿಬರುತ್ತಿರುವ ದು ಮಾರ್ಗರನ್ನು ಮೋಹಗೊಳಿಸುವುದಕ್ಕಾಗಿ,ಕೀಕಟದೇಶದಲ್ಲಿ (ಮಧ್ಯಗಯಾ ಪ್ರದೇಶದಲ್ಲಿ ಬುದ್ಧನೆಂಬ ಹೆಸರಿನಿಂದ ಜಿನಪುತ್ರನಾಗಿ ಹುಟ್ಟುವನು. ಇದೇ ಆತನ ಇಪ್ಪತ್ತೊಂದನೆಯ ಆವತಾರವು. ಅದರಿಂದಾಚೆಗೆ ಜಗತ್ಪತಿಯಾದ ಆ ಭಗವಂತನು,ಕಲಿಕಾಲವುಮುಗಿದು ಕೃತಯುಗವು ಆರಂಭಿಸುವುದಕ್ಕೆ ದಲು ಈ ಎರಡುಯುಗಗಳ ಸಂಧಿಕಾಲಗಳಲ್ಲಿ, ಕ್ಷತ್ರಿಯರೆಲ್ಲರೂ ಚೋರ