ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೩.} ಪ್ರಥಮಸ್ಕಂಧವು. ಜ್ಞಾನಾತ್ಮಕನಾಗಿಯೂ, ಅವ್ಯಕ್ತ ಸ್ವರೂಪನಾಗಿಯೂ ಇರುವ ಆ ಭಗವಂ ತನ ಮಾಯಾಗುಣಪರಿಣಾಮಗಳಾದ ಮಹದಾದಿಗಳಿಂದ ರಚಿತವಾಗಿ ಕಾ ಣುವ ಈ ಜಗತ್ತೆಲ್ಲವೂ ಆತನ ರೂಪವಲ್ಲದೆ ಬೇರೆಯಲ್ಲ. ಈ ಸಮಸ್ತ ಪ್ರಪಂ `ಚಕ್ಕೂ ಆತನೇ ಆತ್ಮರೂಪದಿಂದ ಆಧಾರನಾಗಿರುವನು, ಆ ಆತ್ಮನಿಗೆಇದೇ ಶರೀರದಂತಿರುವುದು! ಹೀಗೆ ಈ ಪ್ರಪಂಚದಲ್ಲಿರುವ ದೇವಮನುಷ್ಯಾದಿಶರೀರ ಗಳೆಲ್ಲವೂ ಭಗವಂತನ ರೂಪವೆಂಬುದನ್ನು ತಿಳಿಯದ ಕೆಲವು ಮೂಢಾತ್ಮರು ಹೊರಗೆ ಕಾಣುವ ತಮ್ಮ ದೇಹವನ್ನು ನೋಡಿಕೊಂಡು ನಾನು ದೇವನು ” “ನಾನು ಮನುಷ್ಯನು”ಎಂದು ಅಹಂಕಾರ ಮಮಕಾರಗಳಿಂದ ಭ್ರಮಿಸುವ ರು. ನಿಜಸ್ಥಿತಿಯನ್ನು ತಿಳಿಯದವರು ಮೇಘಗಳನ್ನು ನೋಡಿ ಅದನ್ನೇ ಆಕಾಶ ವೆಂದೂ, ಮೇಲಕ್ಕೇಳುವ ನೆಲದ ಧೂಳನ್ನು ನೋಡಿ ಆದನ್ನೇ ಗಾಳಿಯೆಂದೂ ಭವಿಸುವಂತೆ, ಆತ್ಮ ತತ್ವವನ್ನು ತಿಳಿಯದವರು, ಜೀವಾತ್ಮನಲ್ಲಿ ದೃಶ್ಯವಾದ ಶರೀರಗುಣವನ್ನಾ ರೂಪಿಸಿ ಭ ಮಿಸರು. ಹಾಗಿದ್ದರೆ ಜೀವಸ್ವರೂಪವೆಂತ ದು?” ಎಂದು ಕೇಳುವಿರಾ? ಆ ಜೀವವೆಂಬುದು ಅಚಿದಾತ್ಮಕವಾದ ಈದೃಶ್ಯ ರವೂಕೂಡ ಅವಿದ್ಯೆಯಿಂದಲೇ ಆರೋಪಿತವಾಗಿರುವುದು.ಯಾವಾಗ ಮನುಷ್ಯನು ಈ ಸೂಲಸೂಕ್ಷಶರೀರಗಳೆರಡೂ ಅವಿದ್ಯೆಯಿಂದ ಆತ್ಮನಲ್ಲಿ ಕಲ್ಪಿತವೆಂದು ತಿಳಿದುಕೊ ಳ್ಳುವನೋ, ಆಗಲೇ ಜ್ಞಾನರೂಪವಾದ ಪರಮಾತ್ಮ ದರ್ಶನವುಂಟಾಗುವುದು, ಕಟ್ಟಿಗೆ ಯಿಲ್ಲದಿದ್ದಾಗ ಅಗ್ನಿಯು ತನಗೆ ತಾನೇ ನಂದಿಹೋಗುವಂತೆ ಅವಿದ್ಯೆಯ ಸಂಬಂಧವು ಬಿಟ್ಟು ಹೋದೊಡನೆ ಜೀವನು ಬ್ರಹ್ಮದಲ್ಲಿ ಲಯಿಸುವನು. (ಶ್ರೀಧರೀಯವು.) ದೈತಾರ್ಥವೇನೆಂದರೆ:- ಈ ಕಾಣುವ ಜಡಪ್ರಪಂಚವೆಲ್ಲವೂ ಜ್ಞಾನಸ್ವರೂಪ ನಾದ ಆ ಪರಮಾತ್ಮನಿಗೆ ಪ್ರತಿಮಾಸ್ಥಾನವಾದುದು. ಇದನ್ನು ಭಗವಂತನ ಸಾಕ್ಷಾ ರೂಪವೆಂದು ಕಲ್ಪಿಸುವುದು, ಮೇಘದಲ್ಲಿ ಆಕಾಶಬುಟ್ಟಿಯಂತೆ ಕೇವಲಭ್ರಮವು, ವಿ ವೇಕವಿಲ್ಲದವರು ಹೀಗೆ ಆರೋಪಿಸುವರು. ಭಗವಂತನ ಪರಸ್ವರೂಪಕ್ಕಿಂತಲೂ, ಪ್ರ ತಿಮಾಸ್ವರೂಪವಾದ ಈ ಜಡಪ್ರಪಂಚಕ್ಕಿಂತಲೂ ಬೇರೆಯಾದ ಮತ್ತೊಂದು ವಸು ವುಂಟು, ಅದೇ ಜೀವನು ಈ ಜೀವನು ತನಗೆ ಸ್ವಾಮಿಯಾದ ಆ ಪರಮಾತ್ಮನ ಸ್ವ ರೂಪವನ್ನು ಸಾಕ್ಷಾತ್ಕರಿಸಲಾರದಿರುವವರೆಗೂ ಪುನಃ ಪುನಃ ಜನನಮರಣಗಳಿಗೆ ಈ ಸಾಗುತ್ತಿರುವನು (ವಿಜಯಧ್ವಜವಾಖ್ಯಾನವು.)