ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮) ಶ್ರೀಮದ್ಭಾಗವತವು. [ಅಧ್ಯಾ, ೩ ಪ್ರಪಂಚಕ್ಕಿಂತಲೂ ವಿಲಕ್ಷಣವೆನಿಸುವುದು. ಅದನ್ನು ಬಾಹ್ಯಂದ್ರಿಯಗಳಿಂ ದ ನೋಡುವುದೂ ಸಾಧ್ಯವಲ್ಲ.ಅದು ಪ್ರಕೃತಿಯಂತೆ ಕಾಠ್ಯದಶೆಯಲ್ಲಿಗುಣವಿ ಭಾಗಗಳಿಂದ ಸ್ಫೂಲತ್ವವನ್ನು ಹೊಂದಿ ಕಣ್ಣಿಗೆಗೋಚರಿಸತಕ್ಕುದಲ್ಲ ಅಥವಾ ಕಾರಣಾವಸ್ಥೆಯಲ್ಲಿರುವ ಪ್ರಕೃತಿಸ್ವರೂಪದಂತೆ ಶಾಸ್ತ್ರಗಳಿಂದ ಶ್ರುತವಾಗ ತಕ್ಕುದೂ ಅಲ್ಲ. ಹೀಗೆ ಕಂಡುಕೇಳಿ ತಿಳಿಯುವುದಕ್ಕೆ ಸಾಧ್ಯವಾದುದರಿಂದ ಅದೊಂದು ವಿಲಕ್ಷಣವಾದ ತತ್ವವೆನಿಸುವುದು.ಇದೇ ಜೀವವು. ಆ ಜೀವಸಿಗೆ ಪ್ರಕೃತಿಸಂಬಂಧದಿಂದ ಜನನಮರಣಗಳು ನಡೆಯುತ್ತಲೇ ಇರುವುವು. “ಹಾ ಗಿದ್ದರೆ ಆ ಜೀವನಿಗೆ ಪುನರ್ಜನ್ಮವನ್ನು ಂಟುಮಾಡತಕ್ಕ ಮಾಯಾಸಂಬಂಧವು ತೀರುವುದೆಂದಿಗೆ? ಈ ವಿಧವಾದ ಪುನರ್ಜನ್ಮಾದಿಗಳಿಂತ ಮುಕ್ತನಾದಜೀವನ ಸ್ವರೂಪವೆಂತದು?"ಎಂದು ನೀವು ಕೇಳಬಹುದು ಅಚಿತಿಗೆ ಸಂಬಧಪಟ್ಟ ಈ ಉತ್ಪತ್ತಿ ವಿನಾಶಗಳೆಲ್ಲವೂ ಆತ್ಮನಲ್ಲಿ ಅಜ್ಞಾನದಿಂದಲೇ ಆರೋಪಿಸಲ್ಪಡುವು ವು. ಆ ಜೀವನಿಗೆ ತನ್ನನ್ನು ಶರೀರವ ಧರಿಸಿರುವ ಪರಮಾತ್ಮನನ್ನು ಕುರಿತು ನಿಜವಾದ ಜ್ಞಾನವು ಯಾವಾಗ ಹುಟ್ಟುವುದೋ, ಅಲ್ಲಿಂದಾಚೆಗೆ ಉತ್ಪತ್ತಿ ವಿನಾಶಗಳ ನಿವರ್ತಿಸುವುವು. ಅಲ್ಲಿಂದಾಚೆಗೆ ಪುನರ್ಜನ್ಮವೂಸಿವ್ಯ ತವಾಗುವುದು ಇಂತಹಜ್ಞಾನದಿಂದ ಉತ್ಪತ್ತಿ ವಿನಾಶಗಳನ್ನು ನೀಗಿ ಪ್ರಕೃತಿ ಸಂಬಂಧವನ್ನೂ ತ್ಯಜಿಸಿದ ಕೇವಲಶುದ್ಧಾತ್ಮಸ್ವರೂಪಜ್ಞಾನವೇ ಮುಕ್ಯ ಜೀವಸ್ವರೂಪವೆನಿಸುವುದು. ಮತ್ತು ಮಹದಾದಿಕಾರ್ಯಗಳಿಂದ ವಿಸ್ತರಿಸಿ ದ ಮಾಯೆಯೂ, ಆ ಮಾಯಾಮಲಕವಾಗಿ ದೇಹಾತ್ಮಾಭಿಮಾನರೂಪ ವಾದ ಬುಟ್ಟಿಯೂ ನೀಗಿದ ಕ್ಷಣವೇ, ಜೀವನು ಸತ್ಯಸಂಕಲ್ಪಾಡಿಗುಣಗಳುಳ್ಳ ವನಾಗಿ, ಬ್ರಹ್ಮಾನಂದಸುಖವನ್ನನುಭವಿಸುತ್ತ, ಪರಮಪದವಾಸಿಗಳಿಂದ ಗೌರವಿಸಲ್ಪಡುವನು.ಎಲೈ ಮಹರ್ಷಿಗಳೇ!ಜೀವಸ್ವರೂಪವನ್ನು ಕೇಳಿದುಧಾ ಯಿತಷ್ಟೆ?ಇನ್ನು ನಿಮಗೆ ಆ ಭಗವದವತಾರಗಳಿಗೂ, ಈ ಜೀವಾತ್ಮನು ಅವ ಲಂಬಿಸುತ್ತಿರುವ ಜನ್ಮಗಳಿಗೂ ಭೇದವನ್ನು ತಿಳಿಸುವೆನು ಕೇಳಿರಿ? ಜೀವನು ಕರ್ಮಾಧೀನನಾಗಿ ಜನ್ಮಗಳನ್ನೆತ್ತುವನು. ಪುಣ್ಯಪಾಪಕಾಧ್ಯಗಳನ್ನು ನಡೆ ಸುತ್ತಿರುವನು. ಭಗವಂತನಾದರೋ ಹಾಗಿಲ್ಲವು. ಆತನು ತನ್ನ ಸಂಕಲ್ಪಮಾ ತ್ರದಿಂದಲೇ ಲೀಲಾರ್ಥವಾಗಿ ಜನ್ಮಗಳನ್ನೆತ್ತುವನು. ಆತನಿಗೆ ಜೀವನಂತೆ