ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೪.] ಪ್ರಥಮಸ್ಕಂಧವು. ಣೆಯಿಂದ ಇದನ್ನು ಆ ರಾಜನಿಗೆ ಉಪದೇಶಿಸುತ್ತಿದ್ದನು. ಎಲೈ ಬ್ರಾಹ್ಮಣೋ ತಮರೆ! ಹೀಗೆ ಶುಕಮುನಿಯು ಪರೀಕ್ಷಿದ್ರಾಜನಿಗೆ ಇದನ್ನು ಪದೇಶಿಸುತ್ತಿರುವ ಸಮಯದಲ್ಲಿ, ನಾನೂ ಆಕಸ್ಮತ್ತಾಗಿ ಅಲ್ಲಿಗೆ ಹೋಗಿ, ಆ ಮಹರ್ಷಿಯ ಆನು ಗ್ರಹದಿಂದ ಆ ಸಚ್ಚರಿತ್ರವನ್ನು ಕೇಳಿದೆನು. ನಾನು ಅಲ್ಲಿ ಕೇಳಿದ ರೀತಿ ಯಲ್ಲಿ ನನಗೆ ತಿಳಿದಮಟ್ಟಿಗೆ ನಿಮಗೂ ಅದನ್ನು ತಿಳಿಸುವೆನು. ಭಗವಂತನಾದ ಕೃಷ್ಣನು ಧರ್ಮಜ್ಞಾನಾದಿಗಳೊಡನೆಸೇರಿ ನಿಜಲೋಕವನ್ನು ಕುರಿತು ಹೊರಳೊಡನೆಯೇ, ಇಲ್ಲಿ ಕಲಿಯು ಪ್ರಬಲವಾಗುತ್ತ ಬಂದುದರಿಂದ, ಕತ್ತಲೆ ಯಲ್ಲಿ ಕಣ್ಣು ಕಾಣದಂತೆ ಮನುಷ್ಯರಿಗೆ ಪ್ರಜ್ಞೆಯು ಕೆಟ್ಟು ಹೋಗುತ್ತ ಬಂ ಡಿತು ! ಸೂರೋದಯವಾದಮೇಲೆ ತಿರುಗಿ ದೃಷ್ಟಿಶಕ್ತಿಯುಂಟಾಗುವಂತೆ ಆ ಜನರಿಗೆ ತಿರುಗಿ ಪ್ರಜ್ಞೆಯನ್ನು ಹುಟ್ಟಿಸುವುದಕ್ಕಾಗಿಯೇ ಈ ಪುರಾಣವು ಹುಟ್ಟಿರುವುದೆಂದು ತಿಳಿಯಿರಿ!ಇದು ಮೂರನೆಯ ಅಧ್ಯಾಯವು. ವ್ಯಾಸಮಹರ್ಷಿಯು ಚಿಂತಾಕುಲನಾಗಿ ದು:ಖಿಸು ) ( ಶಿದ್ದಾಗ, ನಾರದನು ಆತನ ಬಳಿಗೆ ಬಂದುದು, ಸೂತನು ಹೀಗೆ ತತ್ತ್ವಗಳನ್ನು ತಿಳಿಸುತ್ತಿರಲು, ಯಜ್ಞದೀಕ್ಷಿತರಾಗಿ ಅಲ್ಲಿ ಸೇರಿದ್ದ ಮಷಿಗಳಲ್ಲಿ ವೃದ್ಧನಾಗಿಯೂ,ಮಹಾಜ್ಞಾನಿಯಾಗಿಯೂ ಋ ಗೋದಿಯಾಗಿಯೂ ಇದ್ದ ಶೌನಕನು, ಪರಮಸಂತೋಷದಿಂದ ಆತನನ್ನು ಬ ಹಳವಾಗಿ ಸ್ತುತಿಸುತ್ತಒ ಮಹಾತ್ಮಾಸೂತಾ!ನೀನು ಸಮಸ್ತ ತತ್ವಗಳನ್ನೂ ತಿಳಿದ ಮಹಾಭಾಗ್ಯವಂತನು. ಇಂತಹ ಸಚ್ಚರಿತ್ರೆಗಳನ್ನು ಇತರರಿಗೆ ಬೋಧಿ ಸುವುದರಲ್ಲಿ ನಿನ್ನನ್ನು ಮೀರಿದವನೊಬ್ಬನೂ ಇಲ್ಲವು!ಆದುದರಿಂದ ಶುಕಪ್ರೋ ಕ್ಯವಾದ ಆ ಭಾಗವತವೆಂಬ ಪುಣ್ಯಚರಿತ್ರೆಯನ್ನೆ ನಮಗೂ ತಿಳಿಸಬೇಕು. ಈ ಪುರಾಣವು ಯಾವ ಯುಗದಲ್ಲಿ,ಯಾವ ಸ್ಥಳದಲ್ಲಿ,ಯಾವ ಕಾರಣಕ್ಕಾಗಿ ಪ್ರವ ರ್ತಿಸಿತು ? ಕೃಷ್ಣದೈಪಾಯನಮಹರ್ಷಿಯು ಯಾರ ಪ್ರೇರಣೆಯಿಂದ ಈ ಭಾಗವತಸಂಹಿತೆಯನ್ನು ರಚಿಸಿದನು? ಆತನ ಪುತ್ರನಾದ ಶುಕಮುನಿಯಾದ - ಸಾಮಾನ್ಯನಲ್ಲ! ಯೋಗಿಶ್ರೇಷ್ಟನು! ಸಮದೃಷ್ಟಿಯುಳ್ಳವನು! ಯಾವ