ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ- ೪.] ಪ್ರಥಮಸ್ಕಂಧವು. ಶಿಸಿದರೂ ಕೂಡ, ಆ ಸ್ಥಳಗಳಲ್ಲಿ ಹಸುಗಳನ್ನು ಹಾಲುಕರೆಯುವಷ್ಟು ಕಾಲದವರೆಗೆ ನಿಲ್ಲುತಿದ್ದನೇಹೊರತು, ಅದಕ್ಕೆ ಮೇಲೆ ನಿಲ್ಲತಕ್ಕವನಲ್ಲ.ಇಂತಹ ಶುಕನು ಈ ಭಾಗವತಸಂಹಿತೆಯೆಲ್ಲವನ್ನೂ ಪರೀಕ್ಷಿಗೆ ಉಪದೇಶಿಸಿ ಮುಗಿ ಸುವವರೆಗೆ ಅಲ್ಲಿ ನಿಲ್ಲುವುದಕ್ಕೆ ಹೇಗೆ ಸಮ್ಮತಿಸಿದನು? ಎಲೈಸೂತನೆ!ಅಭಿಮ ನ್ಯುಪುತ್ರನಾದ ಆ ಪರಿಕ್ಷಿ ವಾಜನನ್ನು ಭಾಗವತೋತ್ತಮನೆಂದು ಹೇಳುವ ರು. ಆತನ ಉತ್ಪತ್ತಿಯೂ, ಆತನ ಕಾರ್ಯಗಳೂ ಮಹಾದ್ಭುತಗಳೆಂದೂ ಕೇಳಿ ರುವೆವು. ಆದುದರಿಂದ ಅವೆಲ್ಲವನ್ನೂ ನೀನು ನಮಗೆ ವಿವರವಾಗಿ ತಿಳಿಸಬೇಕು. ಪಾಂಡುವಂಶಕ್ಕೆ ಗೌರವವನ್ನು ತರತಕ್ಕವನಾಗಿ, ಚಕ್ರವರ್ತಿಪದವಿಯಲ್ಲಿದ್ದ ಆರಾಜನು ತನ್ನ ರಾಜ್ಯಸಂಪತ್ತನ್ನೂ ಬಿಟ್ಟು,ಗಂಗಾತೀರದಲ್ಲಿಪ್ರಾಯೋಪವೇ ಶದಿಂದ ಪ್ರಾಣತ್ಯಾಗಮಾಡಲು ಪ್ರಯತ್ನಿಸಿದುದಕ್ಕೆ ಕಾರಣವೇನು?ಇದಲ್ಲದೆ ಶತ್ರುರಾಜರೆಲ್ಲರೂ ತಮ್ಮ ಕ್ಷೇಮಕ್ಕಾಗಿ ತಾವಾಗಿಯೇ ಬಂದು ಅಪರಿಮಿತವಾ ದ ಧನವನ್ನು ತಂದು ಅವನ ಪಾದಗಳಲ್ಲಿರಿಸಿ ನಮಸ್ಕರಿಸುತ್ತಿದ್ದರಲ್ಲವೆ?ಆಂತಹ ಸಿರಸಾಮ್ರಾಜ್ಯವುಳ್ಳ ಆ ಪರೀಕ್ಷಿಗೆ ಅಷ್ಟೊಂದು ವಿರಕ್ತಿಯು ಹುಟ್ಟಿದು ದೇಕೆ? ಆಹಾ! ಇನ್ನೂ ಸಣ್ಣ ವಯಸ್ಸುಳ್ಳ ಆ ರಾಜನು, ತನ್ನ ರಾಜ್ಯಲಕ್ಷ್ಮಿ ಯೊಡನೆ ಪ್ರಾಣಿಗಳನ್ನೂ ಬಿಡುವುದಕ್ಕೆ ನಿಶ್ಚಯಿಸಿದನಲ್ಲವೆ? ಭಗವದ್ಭಕ್ತರು ಲೋಕವ್ಯಾಪಾರಗಳಲ್ಲಿ ಕೇವಲ ವಿರಕ್ತರಾಗಿ, ಪುಣ್ಯಶ್ಲೋಕನಾದ ಆ ಪರ ಮಾತ್ಮನೊಬ್ಬನನ್ನೇ ನಂಬಿದ್ದರೂ,ಸ್ವಪ್ರಯೋಜನಕ್ಕಾಗಿಯೇ ತಾವು ಬದು ಕಿರತಕ್ಕವರಲ್ಲ! ಸಮಸ್ತಲೋಕಕ್ಕೂ ಶ್ರೇಯಸ್ಸನ್ನೂ,ಶುಭವನ್ನೂ ,ಸಂಪತ್ಯ ನ್ಯೂ , ಆ ಸಂಪತ್ತಿಗೆ ಮೇಲೆಮೇಲೆ ಆಭ್ಯುದಯವನ್ನೂ ಕೂಡಿಸುವುದಕ್ಕಾಗಿ ಯೇ ಜೀವಿಸಿರುವುದುಂಟು. ಹೀಗಿರುವಾಗ ಈ ಪರೀಕ್ಷಿದ್ರಾಜನುಮಾತ್ರ ತ ೩ಂದ ನಡೆಯಬೇಕಾದ ಲೋಕೋಪಕಾರವನ್ನೂ ಲಕ್ಷಿಸದೆ, ದೇಹವನ್ನು ಬಿ ಡುವುದಕ್ಕೆ ಯತ್ನಿಸಿದುದೇಕೆ? ಎಲೈಮಹಾತ್ಮನೆ! ಈ ವಿಷಯಗಳೆಲ್ಲವನ್ನೂ ನ ಮಗೆ ಚೆನ್ನಾಗಿ ವಿವರಿಸಬೇಕು. ಇನ್ನೂ ನಮ್ಮ ಅಜ್ಞತೆಯಿಂದ ನಾವು ಕೆಲಕೆ ಲವು ವಿಷಯಗಳನ್ನು ಪ್ರಶ್ನೆ ಮಾಡದೆ ಬಿಟ್ಟಿದ್ದರೂ,ಅವುಗಳನ್ನು ನೀನಾಗಿಯೇ ವಿವರಿಸಿ ಹೇಳಬೇಕು. ವೇದವಾಕ್ಯಗಳುಹೊರತು ಇತರಪುರಾಣೇತಿಹಾಸಗಳೆಲ್ಲ ವೂ ನಿನಗೆ ಮುಖಸ್ಯವಾಗಿರುವುವು- ನೀನೇ ನಮಗೆ ಅವುಗಳನ್ನು ತಿಳಿಸದಿದ್ದ