ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು. [ಅಥ್ಯಾ ೪. ಮೇಲೆ ಅವುಗಳನ್ನು ನಮಗೆ ತಿಳಿಸತಕ್ಕ ಬೇರೆ ಮಹಾತ್ಮರು ಯಾರುಂಟು?” ಎಂದನು. ಇದನ್ನು ಕೇಳಿ ಸೂತನ ಅಂತ್ಯಂತ ಸಂತುಷ್ಟನಾಗಿ,ಶ್ರನಕಾ!ಹೇ ಭುವೆನುಕೇಳು!ಮೂರನೆಯ ಯುಗವಾದದ್ವಾಪರದ ಕೊನೆಯಲ್ಲಿ,ಸತ್ಯವತೀದೇ ವಿಯಲ್ಲಿ ಭಗವದಂಶದಿಂದ ವ್ಯಾಸಮಹಾಮುನಿಯು ಜನಿಸಿದನು. ಆ ಮಹರ್ಷಿ ಯು ಒಂದಾನೊಂದು ದಿನದ ಪ್ರಾತಃಕಾಲದಲ್ಲಿ, ಸರಸ್ವತೀನದಿಯಲ್ಲಿ ಸ್ನಾನ ಮಾಡಿ,ಸೂರನಿಗೆ ಅರ್ಭ್ಯವನ್ನು ಕೊಟ್ಟು, ನಿರ್ಜನವಾದ ಪ್ರದೇಶದಲ್ಲಿ ಏಕಾ ಕಿಯಾಗಿ ಕುಳಿತಿದ್ದನು.ಆಗಲೇಸೂರ್ಯೋದಯವಾಗುತಿತ್ತು.ಸಕಲವೇದಗಳ ಸಾರವನ್ನೂ ತಿಳಿದವನಾಗಿಯೂ, ಪ್ರಕೃತಿಪುರುಷಾಧಿಪರಾಪರತತ್ವಸ್ವರೂ ಪವನ್ನು ಬಲ್ಲವನಾಗಿಯೂ ಇದ್ದ.ಆ ವ್ಯಾಸಮುನಿಯು, ಆ ನದೀತೀರದಲ್ಲಿ ಹೀಗೆ ಏಕಾಕಿಯಾಗಿ ಕುಳಿತು, ಧ್ಯಾನದೃಷ್ಟಿಯಿಂದ ಯೋಚಿಸತೊಡಗಿದನು.ಯಾ ರಿಗೂ ತಿಳಿಯದಂತೆ ವೇಗದಿಂದೋಡುತ್ತಿರುವ ಕಾಲಗತಿಯಿಂದ ಭೂಲೋಕ ದಲ್ಲಿ ಯುಗಧರ್ಮಗಳು ಭೇದಿಸುತ್ತಿರುವುದನ್ನೂ , ಈ ಧರ್ಮಗಳಹಾನಿವೃದ್ಧಿ ರೂಪವಾದ ವ್ಯತ್ಯಾಸದಿಂದ, ಪಂಚಭೂತ ಪರಿಣಾಮರೂಪಗಳಾದ ದೇವಾ ದಿಶರೀರಗಳಲ್ಲಿಯೂ, ತತ್ಸಂಬಂಧವುಳ್ಳ ಜೀವಗಳಲ್ಲಿಯೂ ಕ್ರಮಕ್ರಮವಾಗಿ ಶಕ್ತಿಯು ಕುಂದುತ್ತ ಬರುವುದನ್ನೂ ಚಿಂತಿಸಿದನು. ಕಾಲದೋಷದಿಂದ ಜನರಿಗೆ ತಮ್ಮ ತಮ್ಮ ವರ್ಣಾಶ್ರಮಧರ್ಮಗಳಲ್ಲಿ ಶ್ರದ್ಧೆ ಹುಟ್ಟುವುದೇಕಡಿಮೆ! ಒಂದುವೇಳೆ ಶ್ರದ್ಧೆಯು ಹುಟ್ಟಿದರೂ ಆಯಾಕರ್ಮಗಳನ್ನು ಕ್ರಮವಾಗಿನಡೆ ಸುವುದಕ್ಕೆ ತಕ್ಕಷ್ಟು, ದೇಹಬಲವಿಲ್ಲದೆ ದರ್ಬಲರಾಗಿರುವರು. ಬಲವಿದ್ದವರು ಬುದ್ಧಿಹೀನರಾಗಿರುವರು. ಒಂದುವೇಳೆ ಈ ಸೌಕಯ್ಯಗಳೆಲ್ಲವೂ ಸಂಪೂರ್ಣವಾ ಗಿದ್ದರೂ, ಅಂತವರು ಅಲ್ಪಾಯುಸ್ಸಿನಲ್ಲಿಯೇ ಸಾಯುವರು.ಹೀಗೆ ಕಾಲಗತಿ ಯಿಂದ ಜನರೆಲ್ಲರೂ ಭಾಗ್ಯಹೀನರಾಗಿರುವುದನ್ನು ಕಂಡು ವ್ಯಾಸಮಹಾಮುನಿ ಯು, ಅಂತವರಿಗೆ ಯಾವವಿಧದಿಂದ ಕ್ಷೇಮವನ್ನುಂಟುಮಾಡಬಹುದೆಂದು ಯೋಗಪರಿಶುದ್ಧವಾದ ತನ್ನ ಧ್ಯಾನದೃಷ್ಟಿಯಿಂದಲೇ ಚೆನ್ನಾಗಿ ಆಲೆ ಚಿಸಿದನು. ಹೀಗೆ ಯೋಚಿಸಿ, ಲೋಕದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರೆಂಬ ಮೂರು ವರ್ಣದವರಿಗೂ ಶ್ರೇಯಸ್ಸನ್ನುಂಟುಮಾಡಬೇಕಾದರೆ, ವೇದಗಳ ಪೂರ್ವಭಾಗದಲ್ಲಿರುವ ಚಾತುರ್ಹೋತ್ರಮಂತ್ರಗಳಿಂದ ಪ್ರಕಾಶಿತವಾದ