ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, ೧೦] ಏದತಕ್ಕಂಧವು. ಕಿರುಗೆಜ್ಜೆಗಳ ಗಲ್ಲ ಲಧ್ವನಿಯಿಂದ ಕೂಡಿದ ಕಾಮಗಮನವುಳ್ಳ ವಿಮಾನ ದಲ್ಲಿ ಕುಳಿತು, ದೇವಸಿಯರ ವಿಹಾರಸ್ಥಾನಗಳಾದ ಉದ್ಯಾನಗಳಲ್ಲಿಯೂ, ಮೇರುಪರತದ ತಪ್ಪಲುಗಳಲ್ಲಿಯೂ ಯಥೇಚ್ಛವಾಗಿ ವಿಹರಿಸುತ್ತಿರುವನು. ಹೀಗೆ ಆನಂದಸಾಗರದಲ್ಲಿ ಮುಳುಗಿರುವುದರಿಂದ, ಮುಂದೆ ತನ್ನ ಪುಣ್ಯ ಕ್ಷಯವಾದಮೇಲೆ ತಾನು ತಿರುಗಿ ಕೆಳಗೆ ಬಿಳಬೇಕಾಗುವುದೆಂಬುದನ್ನೂ ತಿಳಿಯಲಾರದೆ, ತನ್ನ ಪುಣ್ಯಕ್ಷಯವಾಗುವವರೆಗೂ ಹಾಗೆಯೇ ಸಂತೋಷ ಪರವಶನಾಗಿರುವನು. ಕೊನೆಗೆ ತಾನು ಗಳಿಸಿದ ಫಣ್ಯಫವು ತೀರಿದೊಡನೆ, ತಾನು ಆ ದಿವ್ಯಭೋಗಗಳನ್ನು ಬಿಟ್ಟು ಬರಲಾರವಿದ್ದರೂ, ಕಾಲದಿಂದೆಳೆ ಯಲ್ಪಟ್ಟು, ಅಲ್ಲಿಂದ ಕದಲಿ ಕಳಗೆ ಬಿಳುವನು. ಉದ್ಯವಾ ! ಈ ಅಲ್ಪ ಕಾಲ ಸುಖದಿಂದ ಯಾವ ಪುರುಷಾರವನ್ನು ಪಡೆದಂತಾಯಿತು ನೋಡು ! ಸತ್ತರಗಳನ್ನು ನಡೆಸಿದವರ ಅವಸ್ಥೆಯೇ ಹೀಗಿರುವಾಗ, ಇನ್ನು ಪಾಪಕರ ಗಳ ಫಲವನ್ನು ಹೇಳಬೇಕಾದುದೇನು ? ಅಸಜ್ಜನರ ಸಹವಾಸದಲ್ಲಿ ಬಿದ್ದು, ಅಧರಗಳನ್ನಾಚರಿಸುವವನೂ, ಇಂದ್ರಿಯಗಳನ್ನು ಜಯಿಸಲಾರದೆ ಶಬ್ದಾದಿ ಭೋಗಗಳಲ್ಲಿಯೇ ಆಸಕ್ತನಾದವನೂ, ಕೃಷಣನೂ, ಲುಬ್ಧನೂ, ಸ್ತ್ರೀಲೋ ಲನೂ, ಪ್ರಾಣಿಹಿಂಸಕನೂ, ಶಾಸ್ತ್ರವಿಧಿಗೆ ವಿರುದ್ಧವಾಗಿ ಪಶವನವನ್ನು ಮಾಡತಕ್ಕವನೂ, ಧನಾದಲೋಭದಿಂದ ಭೂತಪ್ರೇತಾದಿಗಳನ್ನು ಪೂಜಿಸ ತಕ್ಕವನೂ, ತನ್ನ ದುಷ್ಕರಗಳಿಗೆ ಫಲವಾಗಿ ಅನೇಕನರಕಗಳಲ್ಲಿ ಬಿದ್ದು , ಕೊನೆಗೆ ಮಹಾತಮಸ್ಸಿನಿಂದ ತುಂಬಿದ ಸ್ಥಾವರಜನ್ಮವನ್ನು ಹೊಂದುವನು. ಆದುದರಿಂದ ಓ ಉದ್ಯವಾ! ಸತ್ತರಗಳಾಗಲಿ, ದುಷ್ಕಳಾಗಲಿ, ಹೇಗಿ ದರೂ ಅವು ಕೊನೆಗೆ ದುಃಖವನ್ನೇ ತಂದಿಡುವವ. ದುರ್ಲಭವಾದ ಮನುಷ್ಯ ಜನ್ಮವನ್ನೆತ್ತಿಯೂ, ಕರೆಗಳನ್ನಾಚ:ಸುವುದರಿಂದ, ಆ ಕಮ್ಮ ಫಲವನ್ನನುಭವಿಸುವುದಕ್ಕಾಗಿ ಮುಂದೆ ಬೇರೊಂದು ಜನ್ಮವನ್ನೆತ್ತದೆ ತೀರದು. ಹೀಗಿರುವುದರಿಂದ ಮರಣಶೀಲವಾದ ಜನ್ಮವನ್ನು ಹೊಂದಕಕ್ಕನ ನಿಗೆ ಎಂದಿದ್ದರೂ ಸುಖವಿಲ್ಲ! ಪ್ರಳಯಾಂತವಾಗಿ ಬಹುಕಾಲದವರೆಗೆ ಜೀಪಿ ಸುವ ಲೋಕಪಾಲಕರಿಗಾಗಲಿ, ಅದಕ್ಕಿಂತಲೂ ಮೆಲೆ ಪರಾರ್ಧ ಕಾಲದವರೆಗೆ ಜೀವಿಸುವ ಚತುರುಖಬ್ರಹ್ಮನಿಗಾಗಲಿ, ಕಾಲರೂಪಿಯಾದ