ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೦೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


on ಶ್ರೀಮದ್ಭಾಗವತವು ಅಧ್ಯಾ ೧೧ ದ ಅನುಭವಿಸುವ ಶಬ್ದಾದಿವಿಷಯಗಳು ಅನುಕೂಲವಾಗಿದ್ದರೂ, ಪ್ರತಿ ಕೂಲವಾಗಿದ್ದರೂ, ವಿದ್ವಾಂಸನಾದವನು ಅದಕ್ಕಾಗಿ ತಾನು ಹರ್ಷ, ವಿಷಾದ ಮೊದಲಾದ ವಿಕಾರಗಳನ್ನು ಹೊಂದಲಾರನು. ತಾನೇ ಕರ್ತ ನೆಂದೂ, ಭೂಕನೆಂದೂ ತಿಳಿಯಲಾರನು. ಕುಬುದ್ಧಿಯುಳ್ಳವನು ತನ್ನ ಶರೀರವು ತುಗೆ ದೈವಾಧೀನವಾಗಿ ಬಂದಿರುವುದನ್ನೂ , ತನ್ನ ಪೂಕರಾನು ಸಾರವಾಗಿ ತಾನು ಅದರಲ್ಲಿ ಸೇರಿರುವುದನ್ನೂ ತಿಳಿಯಲಾರದೆ, ಆ ದೇಹ ವನೇ ಆತ್ಮವೆಂದು ತಿಳಿದು, ಆ ದೇಹದಲ್ಲಿ ಮಮತೆಯಿಂದಲೂ, ತಾನೇ ಕರ್ತನೆಂದೂ , ಭಕ್ಷ್ಯವೆಂದೂ ದುರಭಿ ಯಾನದಿಂದಲ, ತಾನಾಗಿಯೇ ಕಟ್ಟುಬಿಳುವನು. ಇಂತವರ ಸ್ಥಿತಿಯನ್ನು ನೋಡಿಯೇ ವಿದ್ವಾಂಸನು ವಿರಕ್ಕೆ ನಾಗಿ, ಸಿದ್ರೆ, ಆಹಾರ,ವಿಹಾರ, ಸ್ನಾನ, ಶಬ್ದ ರೂಪ ರಸ ಗಂಧಸ್ಪರ್ಶಾದಿ ವಿಷಯಾನುಭವಗಳು, ಇವೇ ಮೊದಲಾದ ಕಾಠ್ಯಗಳಲ್ಲಿ ಮಿತವಾಗಿ ವರ್ತಿ ಸುತ್ತ, ಆಯಾ ಕರ್ತೃತ್ಯಭೋಕ್ತಾದಿಗಳೆಲ್ಲವೂ ದೇಹೇಂದ್ರಿಯಾಗ ಳಿಗೆ ಸೇರಿದುವೆಂಬ ಭಾವವನ್ನಿಟ್ಟು, ಅವುಗಳಿಗೆ ಬದ್ಧನಾಗದೆ ಆಗಲೂ ಮುಕ್ಕನಂತೆಯೇ ಇರುವನು. ಆದರೆ ಎಷ್ಟೆ ವಿದ್ವಾಂಸನಾಗಿದ್ದರೂ ಕರಗಳನ್ನು ನಡೆಸುತ್ತ, ಅವುಗಳ ಫಲರೂಪವಾದ ಸುಖದುಃಖಗಳನ್ನೂ ಅನುಭವಿಸುತ್ತ, ದೇಹದಲ್ಲಿ ಸೇರಿರುವಾಗಲೂ, ಆ ಕರ್ತೃತ್ಯಾದಿಗಳು ದೇಹೇಂದ್ರಿಯಗಳಿಗೆ ಸೇರಿದುವೆಂದು ನೆನೆಸಿದಮಾತ್ರಕ್ಕೆ ತಾನು ವಿಕಾರ ರಹಿತನೆಂಬುದು ಹೇಗೆ ? ” ಎಂದು ಸೀನು ಶಂಕಿಸಬಾರದು. ಆಕಾಶವೂ, ಸೂರಪ್ರಭೆಯೂ, ವಾಯುವೂ ಎಲ್ಲಾ ವಸ್ತುಗಳಲ್ಲಿಯೂ ವ್ಯಾಪಿಸಿದ್ದರೂ ಅವುಗಳ ದೋಷಕ್ಕೀಡಾಗದಂತೆ, ವಿದ್ವಾಂಸನು ಪ್ರಕೃತಿಪುಣಾಮರೂಪ ವಾದ ದೇಹದಲ್ಲಿ ಸೇರಿದ್ದರೂ, ಅವನಿಗೆ ಆ ಅಭಿನಿವೇಶವಿಲ್ಲದಿದ್ದಾಗ, ಅದ ರಿಂದುಂಟಾಗುವ ವಿಕಾರಕ್ಕೊಳಗಾಗಲಾರನು. ಹೀಗೆ ದೇಹದಲ್ಲಿದ್ದಾಗಲೂ, ಅದರಲ್ಲಿ ಅಭಿನಿವೇಶವಿಲ್ಲದವನಿಗೆ, ನಿಸ್ಸಂಶಯವಾದ ನಿಪುಣಬುದ್ಧಿಯಂ ಹಾಗಿ, ಸ್ವಲ್ಪ ಹಿಂದೆದ್ದವನಿಗೆ ಸ್ವಪ್ನ ದೇಹದಲ್ಲಿ ಹೇಗೋ ಹಾಗೆ, ತನ್ನ ದೇಹ ದಲ್ಲಿ ಜೀವಮನುಷ್ಯತ್ಯಾಜ ಬುದ್ಧಿಯ ಬಿಟ್ಟು ಹೋಗುವುದು. ಅಂತಹ ವಿದ್ವಾಂಸನ ಲಕ್ಷಣಗಳೇನೆಂದು ಕೇಳಿದೆಯಲ್ಲವೆ? ಯಾವನಿಗೆ ಪ್ರಾಣಿಗಳು,