ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


330 ಅಧ್ಯಾ, ೧೧] ಏಕಾದಶಸ್ಕಂಧವು. ಇಂದ್ರಿಯಗಳು, ಮನಸ್ಸು, ಬುದ್ಧಿ, ಇವುಗಳ ವ್ಯಾಪಾರಗಳು ಯಾವುದ ರಲ್ಲಿಯೂ ಉದ್ದೇಶವಿಲ್ಲದಂತಿರುವುವೋ, ಅ೦ತವನನ್ನು ದೇಹದೊಡಗೂಡಿ ದರೂ, ಆ ದೇಹದ ಗೊಣಗಳಿಂದ ಮುಕ್ತನೆಂದೇ ತಿಳಿಯಬಹುದು. ಮತ್ತು ಯಾವನು, ತನ್ನ ದೇಹವನ್ನು ದುರ್ಜನರು ಪೀಡಿಸಿದರೂ, ಸಾಧುಗಳು ಸತ್ಕರಿಸಿದರೂ ಅದರಿಂದ ತಾನು ಅಷ್ಟಾಗಿ ದುಃಖಹರ್ಷಗಳೆಂಬ ವಿಕಾರಗ ಲನ್ನು ಹೊಂದದಿರುವನೋ ಅಂತವನೇ ವಿದ್ವಾಂಸನು, ಮತ್ತು ಯಾವನು ಮಾನಾವಮಾನಗಳಲ್ಲಿ ಸಮಬುದ್ಧಿಯುಳ್ಳವನಾಗಿದ್ದು, ಮತ್ತೊಬ್ಬರು ತನ್ನನ್ನು ಬೈದರೂ, ಸತಿಸಿದರೂ ನಿಂದಿಸಿದವರನ್ನು ತಾನು ನಿಂದಿಸದೆ, ಸ್ತುತಿಸಿದವರನ್ನು ಸ್ತುತಿಸದೆ, ಉದಾಸೀನನಾಗಿವನೋ ಆತನನ್ನು ಮುನಿ ಯೆಂದು ತಿಳಿಯಬೇಕು. ಯಾವನು ತನ್ನ ಆತ್ಮನಲ್ಲಿಯೇ ರವಿಸುತ್ತ, ಒಳ್ಳೆ ಯದಾಗಲಿ, ಕೆಟ್ಟು ವಾಗಲಿ ಲೌಕಿಕಕಶ್ಯಗಳಿಗೆ ಕೈಯಿಕ್ಕದೆ, ಅವುಗಳನ್ನು ಬಾಯಿಂದಾಡದೆ, ಮನಸ್ಸಿನಿಂದಲೂ ಚಿಂತಿಸದೆ, ಕೇವಧ್ಯಾನಶೀಲನಾಗಿ, ದೇಹದಲ್ಲಿದ್ದರೂ ತಾನು ಅದರ ಸಂಬಂಧವಿಲ್ಲದವನಂತೆ ವರ್ತಿಸ. ನೋಡುವವರಿಗೆ ಜಡಂತಿರುವನೋ ಅಂತವನೇ ಮುನಿಯೆನಿಸುವನು. ಪುರು ಷಸಿಗೆ ಶಾಸ್ತಜನ್ಯಜ್ಞಾನವೊಂದು, ಬ್ರಹ್ಮಜ್ಞಾನವೊಂದು, ಇವೆರಡೂ ಉಪಾದೇಯಗಳೇ ! ಆದರೆ ಎಷ್ಟೇ ವೇದಶಾಸ್ತ್ರ ಪಾರಂಗತನಾಗಿದ್ದರೂ ಬ್ರಹ್ಮಜ್ಞಾನವನ್ನು ಪಡೆಯದಿದ್ದ ಮೇಲೆ, ಹಾಲಿಲ್ಲದ ಹಸುವನ್ನು ಪೋಷಿಸಿ ದಂತೆ ಅವನ ವೇದಾಧ್ಯಯನಕ್ಕೆಲ್ಲಾ ಕೇವಲಶ್ರಮವೇ ಫಲವೆನಿಸುವುದು. ಹಾಲಿಲ್ಲದ ಹಸು, ದುವೆಯಾದ ಭಾರೈ, ಪ್ರತಿಕ್ಷಣವೂ ದುಃಖಹೇತುವಾದ ದೇಹ, ದುರಾರ್ಗನಾದ ಮಗನು, ಸತ್ಪಾತ್ರದಲ್ಲಿ ದಾನಮಾಡದ ಹಣ, ನನ್ನನ್ನು ವಿಷಯೀಕರಿಸದ ವಾಕ್ಕು ಇವುಗಳನ್ನು ಪೋಷಿಸಿದವನಿಗೆ ದುಃಖ ದಮೇಲೆ ದು:ಖವೇ ಪ್ರಾಪ್ತವಾಗುವುದು. ಈ ಜಗತ್ತಿನ ಉತ್ಪತ್ತಿಯ ಗಳನ್ನು ನಿರೂಪಿಸತಕ್ಕುದಾಗಿಯೂ, ಲೋಕಪಾವನವಾಗಿಯೂ ಇರುವ ನನ್ನ ಚರಿತ್ರವನ್ನೂ, ನಾನು ಲೀಲಾರವಾಗಿ ಕೈಕೊಂಡ ರಾಮಕೃಷ್ಣಾ ದೈವತಾರಚರಿತ್ರಗಳನ್ನೂ ಪ್ರತಿಪಾದಿಸದ ಬೇರೆ ಮಾತುಗಳೆಲ್ಲವೂ ನಿಷ್ಪ ಲಗಳು. ಆದುದರಿಂದ ಬಡ್ತಿಶಾಲಿಯಾದವನು ನನ್ನ ವಿಚಾರವನ್ನು ಬಿಟ್ಟು