ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಎಂಬ ಕವಿವಾಕ್ಯದಂತೆ ಜನಾಭಿನಂದನವೇ ನನಗೆ ಸತ್ತಮವಾ ದ ಸಂತೋಷವನ್ನುಂಟುಮಾಡುತ್ತಿದೆ. ಮುಖ್ಯವಾಗಿ ಅನಂದ ಮುದ್ರಾಲಯಾಧ್ಯಕ್ಷರಾದ ಶ್ರೀವೇಮೂರು ರಂಗನಾಥಂ ಶೆಟ್ಟಿಯಾರವರು, ನಮ್ಮ ಕನ್ನಡದೇಶದಲ್ಲಿ ಯಾಗಲಿ,ಕನ್ನಡ ಭಾಷೆಯಲ್ಲಿಯಾಗಲಿ ಸಂಬಂಧವಿಲ್ಲದವರಾಗಿದ್ದರೂ, ಈ ಪ್ರಯತ್ನದಲ್ಲಿ ಮುಂದೆ ಬರಬಹುದಾದ ಆದಾಯನಷ್ಟಗಳನ್ನೂ ಗಮನಿಸದೆ, ಕೇವಲ ಆಸ್ತಿಕ್ಯಬುದ್ಧಿಯಿಂದಲೇ ಈ ಕಾಠ್ಯವನ್ನು ಮುಂದುವರಿಸಿದುದಕ್ಕಾಗಿ ನಾವೆಲ್ಲರೂ ಕೃರ್ತರಾಗಿರಬೇಕು. ಮುಂದೆ ಮಹಾಭಾರತವನ್ನೂ ಹೀಗೆ ಯೇ ಪ್ರಕಟಿಸಬೇಕೆಂದೂ ನಿಶ್ಚಯಿಸಿದೆ. ತಮ್ಮ ವಿಶ್ವಾಸಪಾತ್ರನಾದ, ದೇವಶಿಖಾಮಣಿ ಅಳಸಿಂಗರಾಚಾರ್, ಗ್ರಂಥಕರ್ತ.