ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧ ಆಥ್ಯಾ. ೧೧.] ಏಕಾದಶಸ್ಕಂಧನು. ಮಾಡಿದ ಧರಕಾರಗಳನ್ನು ಹಮ್ಮೆಗಾಗಿ ಇತರರೊಡನೆ ಹೇಳಿಕೊಳ್ಳದಿ ರುವುದು, ಇವೆಲ್ಲವೂ ಭಕ್ತಿ ಸಾಧನೆಯ ಲಕ್ಷಣಗಳು. ಮತ್ತು ನನಗಾಗಿ ಅರ್ಪಿಸಿದ ದೀಪಭೂಪಾಯಿಗಳನ್ನು ತನಗಾಗಿ ಉಪಯೋಗಿಸಿಕೊಳ್ಳ ಬಾರದು. ತನಗೆ ಯಾವುದು ಅತಿಪ್ರಿಯತಮವೆಂದು ತೋರುವುದೋ ಅದನ್ನು ಮೊದಲು ನನಗಾಗಿ ಅರ್ಪಿಸಬೇಕು. ಅದರಿಂದ ನಾನು ಬಹಳ ಸಂತೋಷಿಸುವೆನು. ಉದ್ಯವಾ ! ಸೂರನು, ಅಗ್ನಿ, ಬ್ರಾಹ್ಮಣರು, ಗೋ ವುಗಳು, ವೈಷ್ಣವರು, ಆಕಾಶ, ವಾಯು, ಜಲ, ಭೂಮಿ, ಆತ್ಮನು, ಸಮ ಸಭೂತಗಳು, ಈ ಸ್ಥಾನಗಳಲ್ಲಿ ನಾನು ನೆಲೆಗೊಂಡಿರತಕ್ಕವನಾದುದ ರಿಂದ, ಇವು ಹನ್ನೊಂದೂ ನನ್ನ ಪೂಜಾಸ್ಥಾನಗಳೆಂದು ತಿಳಿ ! ಇವುಗಳಲ್ಲಿ ಸೂ‌ನನ್ನು (ಅಸತೈವ” ಇತ್ಯಾದಿ ವೇದಮಂತ್ರಗಳಿಂದಲೂ,ಆಗ್ನಿ ಯನ್ನು ಹವಿಸ್ಸಿನಿಂದಲೂ, ಬ್ರಾಹ್ಮಣನನ್ನು ಆತಿಥ್ಯದಿಂದಲೂ, ಗೋವುಗಳನ್ನು ಹುಲ್ಲು ಮೊದಲಾದ ಆಹಾರವನ್ನು ಕೊಟ್ಟು ಪೋಷಿಸುವುದರಿಂದಲೂ, ವೈಷ್ಣವರನ್ನು ಬಂಧುವಂತೆ ಭಾವಿಸಿ ಸತ್ಕರಿಸುವುದರಿಂದಲೂ, ಹೃದಯಾ ಕಾಶವನ್ನು ಧ್ಯಾನನಿಷ್ಠೆಯಿಂದಲೂ, ವಾಯುವನ್ನು ಮುಖ್ಯಪ್ರಾಣವೆಂಬ ಬುದ್ಧಿಯಿಂದಲೂ, ಜಲವನ್ನು, ತೀರ, ಗಂಧ, ಪುಷ್ಪ, ದೂರಾಕ್ಷತೆಗಳು ಮೊದಲಾದ ಪೂಜಾದ್ರವ್ಯಗಳಿಂದಲೂ, ಶಂಖಚಕ್ರಾದಿ ಮಂಡಲಗಳಿಂದ ಲಂಕೃತವಾದ) ಭೂಮಿಯನ್ನು ಮೂಲಮಂತ್ರಪೂಕವಾದ ಹೃದ ಯಾದ್ಯಂಗನ್ಯಾಸಮಂತ್ರಗಳಿಂದಲೂ, ತನ್ನ ಆತ್ಮವನ್ನು ಶಾಸ್ತ್ರ ವಿರುದ್ಧ ವಲ್ಲದ ಕಾಮಗಳಿಂದಲೂ, ದೇವಮನಷ್ಯಾದ ಶರೀರಭೇದದಿಂದಿರುವ ಸ. ಮಭೂತಗಳಲ್ಲಿಯೂ ನಾನೇ ಜೀವಶರೀರಕನೆಂಬ ಭಾವದಿಂದಲೂ, ಯಜಿಸಿದರೆ, ಆ ಪೂಜೆಗಳೆಲ್ಲವೂ ನನಗೇ ಸಲ್ಲುವುವು. ಮೇಲೆ ಹೇಳಿದ ಸಲ್ಯಾದಿಸ್ಥಾನಗಳಲ್ಲಿ, ಶಂಖಚಕ್ರಗದಾಪದ್ಯಗಳಿಂದ ಕೂಡಿದ ಚತು ರ್ಭುಜವುಳ್ಳ ನನ್ನ ಸ್ವರೂಪವನ್ನೇ ಧ್ಯಾನವಿಷಯವಾಗಿಟ್ಟು ಪೂಜಿಸಬೇಕು. ಯಾವನು ಮೇಲೆ ಹೇಳಿದಂತೆ ವೈಏಕ ಸ್ಮಾರ್ತಕಗಳಿಂದ ನನ್ನನ್ನು ಆರಾ ಧಿಸುವನೋ,ಅವನು ನನ್ನಲ್ಲಿ ಅವಿಚ್ಛಿನ್ನವಾದ ಭಕ್ತಿಯನ್ನು ಪಡೆಯುವನು. ಉದ್ಧವಾ! ಮುಖ್ಯವಾಗಿ ಸತ್ಸಹವಾಸಲಭ್ಯವಾದ ಭಕ್ತಿಯೋಗವು ಹೊ