ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


SOL ಶ್ರೀಮದ್ಭಾಗವತರು [ಅಧ್ಯಾ, ೧೨. ರತುನನ್ನನ್ನು ಸೇರುವುದಕ್ಕೆ ಬೇರೆ ಉತ್ತಮವಾದ ಉಪಾಯವಿಲ್ಲ ! ಮತ್ತು ನನ್ನನ್ನು ಸೇರುವುದಕ್ಕೆ ನಾನುಹೊರತು, ಬೇರೆ ಉಪಾಯವೂ ಇಲ್ಲ ! ಓ ಯದೂರಮಾ ' ಪರಮರಹಸ್ಯವಾದ ಮತ್ತೊಂದು ವಿಚಾರವುಂಟು. ಅದು ಬಹಳಗೋಪ್ಯವಾಗಿದ್ದರೂ, ನೀನು ನನಗೆ ಪರಮಭಕ್ತನೂ, ಪರಮ ಪ್ರಿಯನೂ, ಪರಮಾಪ್ತನೂ ಆಗಿರುವುದರಿಂದ ನಿನ್ನಲ್ಲಿ ತಿಳಿಸುವೆನು."ಇದು ಹನ್ನೊಂದನೆಯ ಅಧ್ಯಾಯವು. w+ ಪ್ರಯೋಗವು www ಉದ್ದವಾ ! ಮೇಲೆ ಹೇಳಿದಂತೆ ಸಹವಾಸವು ನನ್ನನ್ನು ವಶೀ ಕರಿಸುವಷ್ಟು ಸುಲಭವಾಗಿ, ಬೇರೆ ವರ್ಣಾಶ್ರಮಧಮ್ಮರೂಪವಾದ ಕರ್ಮ ಯೋಗವಾಗಲಿ, ಜತ್ರೋಪಾಸನರೂಪವಾದ ಸಾಂಖ್ಯಯೋಗವಾಗಲಿ, ಆ ಹಿಂಸಾರೂಪವಾದ ಧರಗಳಾಗಲಿ, ಅಧ್ಯಯನ, ದಾನ, ತಪಸ್ಸು, ಇ ಸ್ಮಾಪೂರಗಳು, ದಕ್ಷಿಣೆಗಳು, ಉಪವಾಸ ವ್ರತಗಳು, ಪಂಚ ಮಹಾ ಯಜ್ಞಗಳು, ಮಂತ್ರರಹಸ್ಯಗಳು, ಗಂಗಾತೀರಗಳು, ಶೌಚಾಹಿನಿಯಮ ಗಳು, ಇಂದ್ರಿಯನಿಗ್ರಹಶಕ್ತಿ, ಇವುಗಳಲ್ಲಿ ಯಾವುದೊಂದಾಗಲಿ ನನ್ನನ್ನು ವಶೀಕರಿಸಿ ಹೃದಯದಲ್ಲಿ ಸ್ಥಿರವಾಗಿ ನಿಲ್ಲಿಸಲಾರವು. ಏಕೆಂದರೆ, ಸತ್ಸಹವಾ ಸವೆಂಬುದು ಮನಸ್ಸಿಗೆ ಬೇರೆಪಿಧವಾದ ಸಂಗಗಳೆಲ್ಲವನ್ನೂ ತಪ್ಪಿಸಿ,ನನ್ನ ವಿಷಯೀಕರಿಸುವಂತೆ ಮಾಡುವುದು. ಯೋಗಾದಿಗಳು ಹಾಗಲ್ಲ. ಸಹ ವಾಸಬಲದಿಂದಲೇ, ಹಿಂದೆ ಬೇರೆ ಬೇರೆ ಯುಗಗಳಲ್ಲಿ,ಆನೇಕದೈತ್ಯರೂ, ರಾಕ್ಷ ಸರೂ, ಮೃಗಪಕ್ಷಿಗಳೂ, ಸಿದ್ಧಚಾರಣ ಗಂಧದ್ವಾರಸ್ಸುಗಳೂ, ಗುಹ್ಯ ಕರೂ, ನಾಗರೂ, ವಿದ್ಯಾಧರರೂ, ಮನುಷ್ಯವರ್ಗದಲ್ಲಿ ಹೀನಕುಲದವ ರಾದ ಅಂತ್ಯಜರೂ, ಸ್ತ್ರೀ ಶೂದ್ರಾದಿಗಳೂ, ವೈಶ್ಯರೂ ಇನ್ನೂ ರಜಸ್ತ್ರ ಮೋಗುಣಗಳಿಂದ ತುಂಬಿದವರನೇಕರೂ,ನನ್ನ ಸ್ಥಾನವನ್ನು ಸೇರಿರುವ ಇ ದಕ್ಕೆ ನಿದರ್ಶನವಾಗಿ ದೈತ್ಯಕುಲದವರಲ್ಲಿ ವೃತ್ತಪ್ರಹ್ಲಾದ,ವೃಷಪವ್ವ,ಬಲಿ, ಖಾಣ, ಮಯ, ವಿಭೀಷಣ,ಮೊದಲಾದವರು, ಎಂತಹ ಉತ್ತಮಗತಿಯನ್ನು ಹಂದಿಗರೆಂಬುದನ್ನು ನೀನೂ ಕೇಳಿರಬಹುದು. ಪಶುಪಮೃಗಾಡಿಗಳಲ್ಲಿ