ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


0 ಅ ಶ್ರೀಮದ್ಭಾಗವತರ [ಅಧ್ಯಾ, ೧೦. ದ್ರದಲ್ಲಿ ಪ್ರವೇಶಿಸಿದ ನದಿಗಳಿಗೂ, ತಮ್ಮ ನಾಮರೂಪಗಳ ತೋರಿಕೆಯೇ ಇಲ್ಲದಿರುವಂತೆ, ಅವರೂ ಆಗ ತಮ್ಮ ದೇಹವನ್ನಾಗಲಿ, ಸಮೀಪದಲ್ಲಿರುವು ದನ್ನಾಗಲಿ, ದೂರದಲ್ಲಿರುವುದನ್ನಾಗಲಿ ತಿಳಿಯದೆ ಪರವಶರಾಗಿರುತಿದ್ದರು. ಆ ಸ್ತ್ರೀಯರು ಆರಾದುದರಿಂದ, ನನ್ನ ನಿಜಸ್ವರೂಪವನ್ನು ಸ್ವಲ್ಪಮಾ ತ್ರವೂ ತಿಳಿಯಲಾರರಾದರೂ, ನನ್ನನ್ನು ಜಾರನೆಂದೂ, ತಮಗೆ ರತಿಸುಖ ವನ್ನು ಕೊಡತಕ್ಕವನೆಂದೂ ಭ್ರಮಿಸಿ, ಆ ಭಾವ ಎಂದಲೇ ಪರಬ್ರಹ್ಮ ಸ್ವರೂಪನಾದ ನನ್ನನ್ನು ಸೇರಿದರು. ಹೀಗೆ ಸತ್ಸಹವಾಸದಿಂದ ಇನ್ನೂ ಸಾವಿರಾರುಜನರು. ನನ್ನನ್ನು ಸೇರಿರುವರು. ಆದುದರಿಂದ ಉದ್ದವಾ ! ನೀ ನೂ ಏಥಿಸಿಷೇಧರೂಪಗಳಾದ ಶಾಸನಿರ್ಬಂಧಗಳನ್ನೂ ಗಮನಿಸದೆ, ಹಿಂದೆ ಶಾಸ್ತ್ರೀಯವಾಗಿ ಸೀನು ಕೇಳಿದುದನ್ನೂ, ಮುಂದೆ ಕೇಳಬೇಕೆಂಬುದನ್ನೂ ಮರತು, ಸಮಸ್ಯಪ್ರಾಣಿಗಳಿಗೂ ಆತ್ಮಭೂತನಾ ದ ಇನ್ನೊಬ್ಬನನ್ನೇ ಸತ್ವವಿಧದಿಂದಲೂ ನಂಬುವನಾಗು. ನಾನೇ ನಿನಗೆ ಪ್ರಾಪೈನೂ, ಪ್ರಾಪ ಕನೋ, ರಕ್ಷಕನೂ ಆಗಿರುವನೆಂಬ ದೃಢಭಾವದಿಂದ ನನ್ನಲ್ಲಿ ಶರಣಾ ಗತಿಯನ್ನು ಮಾಡು? ಅದರಿಂದ ನಿನಗೆ ಸಮಸ್ತ ಭಯವೂ ನಿವೃತ್ತವಾಗಿ, ನನ್ನ ಸಾನ್ನಿಧ್ಯವು ಲಭಿಸುವುದು” ಎಂದನು. ತಿರುಗಿ ಉದ್ದವನು (ಕೃಷ್ಣಾ ! ನೀನು ಇದುವರೆಗೆ ಉಪದೇಶಿಸಿದ ವಿಷಯಗಳಿಂದ, ನನಗೆ, ಮೋಕ್ಷಪಾಯವಿಚಾರವಾದ ಸಂದೇಹವು ಸೀಗಿತು. ಆದರೆ ಆತ್ಮ ತತ್ವವಿಚಾರವಾಗಿ ಇನ್ನೂ ನನ್ನ ಸಂದೇಹವು ಸಂಪೂರ್ಣವಾಗಿ ನೀಗಲಿಲ್ಲ. ಅದರಿಂದ ನನ್ನ ಮನಸ್ಸು ಇನ್ನೂ ಭ್ರಮಿ ಸುತ್ತಿರುವುದು ನನ್ನ ಸಂಶಯಗಳೇನೆಂದರೆ, ಪ್ರಾಣಿಗಳನ್ನೂ, ಇಂದ್ರಿಯ ಗಳನ್ನೂ ನಡೆಸತಕ್ಕೆ ಕಾಠ್ಯವು ಜೀವನಿಂದಾಗುವುದೆ ? ಅಥವಾ ನಿನ್ನಿಂದ ನಡೆಯುವುದೆ ? ದೇವಮನದಿರೂಪವಾದ ಸಂಸಾರವು ಆತ್ಮನಿಗೆ ಸಂಬಂಧಿಸಿದುದೇ ಅಲ್ಲವೆ? ಪ್ರಾಣೇಂದ್ರಿಯಾದಿಗಳಿಗೆ ಆಧಾರವೆನಿಸಿರುವುದು ಜೀವಾತ್ರವೇ ಅಥವಾ ಶರೀರವೆ ? ಸುಖದುಃಖಕಾರಣಗಳಾದ ಫಣಾಪಣ ಗಳಿಗೆ ಕರ್ತಿನಾರ? ಅವುಗಳನ್ನು ಅನುಭವಿಸತಕ್ಕವನಾರು? ಆ ಸಂಸಾರ ನಿವೃತ್ತಿಗೆ ಮಾರ್ಗವಾವುದು ? ಇವೇ ಮೊದಲಾದ ಸಂಶಯಗಳು ನನ್ನನ್ನು