ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೧o ಶ್ರೀಮದ್ಭಾಗವತರ [ಅಧ್ಯ. ೧. ತ್ರ ವೃದ್ಧಿ ಕ್ಷಯಾದಿ ವಿಕಾರಗಳಿಲ್ಲದೆ ಏಕರೂಪನಾಗಿ ನಿತ್ಯನಾಗಿರುವನು. ಆ ದರೆ ಒಂದೇಜಾತಿಯ ಬೀಜಗಳಾಗಿದ್ದರೂ, ಕ್ಷೇತ್ರ (ಭೂಮಿಯ)ಗುಣದಿಂದ ಗುಣಭೇದವನ್ನು ಹೊಂದುವಂತೆ, ಜೀವನು ಏಕರೂಪನಾಗಿದ್ದರೂ, ಕಾಲ ವಶದಿಂದ ಚದರಿದ ಚೈತನ್ಯಶಕ್ತಿಯುಳ್ಳವನಾಗಿ, ಆಯಾ ಶರೀರಸಂಬಂಧಕ್ಕೆ ತಕ್ಕಂತೆ ದೇವಮನುಷ್ಯಾಭೇದಗಳುಳ್ಳವನಂತೆ ತೋರೊವನು. ನೂಲೆಳೆಗೆ ಳಿಂದ ವಸ್ತ್ರವು ಹೇಗೋಹಾಗೆ, ಪ್ರಾಣೇಂದ್ರಿಯಸಮೂಹಗಳೆಲ್ಲವೂ ಓತಪ್ರೋತವಾಗಿ ಹಾಸುಹೊಕ್ಕಾಗಿ) ಸೇರಿ, ಸಂಸಾರವೆಂಬ ವೃಕ್ಷವು ಏರ್ಪಟ್ಟಿರುವುದು. ಸಂಸಾರವೆಂದರೆ ದೇಹಸಂಬಂಧವೇ ಹೊರತು ಬೇರೆ ಯಲ್ಲ! ಈ ಸಂಸಾರವೃಕ್ಷವು ಅನಾದಿಯಾಗಿ ಬಂದಿರುವುದು. ಇದು ಕೇವಲ ಕರಾತ್ಮಕವೆನಿಸಿರುವುದು. ಕರೆಗಳೇ ಇದರ ಹೂಗಳು. ಸುಖದ.ಃಖಗಳೇ ಇದರಫಲಗಳು. ಇದಕ್ಕೆ ಪ್ರಣಾಪಗಳೆರಡೂ ಬೀಜಗಳು ರಾಗದ್ವೇಷ ಭಯಾದಿಗಳೇ ಇದರ ನೂರಾರುಬೇರುಗಳು, ಸತ್ವರಜಸ್ತಮೋಗುಣಗಳು ಮೂರೂ ಇದರ ಅಡಿಬಂಡುಗಳು: ಪಂಚಭೂತಗಳೇ ಇದ: ಐದು ಕವಲು ಗಳು. ಶಬ್ದಾದಿವಿಷಯಗಳೆದೂ ಇದರಿಂದ ಹೊರಡುವ ಐದ.ಬಗೆಯ ಆಂಟುಗಳು, ಏಕಾದಶೇಂದ್ರಿಯಗಳು ಇದರ ಹನ, ದಶಾಖೆಗಳು. ಹೃದಯಗುಹೆಯೆಂಬುದೇ ಇದರೆ ಪೊಟ್ಟರೆ ! ಜೀವಾತ್ಮ ಪರಮಾತ್ಮರೆಂಬ ಎರಡುಪಕ್ಷಿಗಳು ಅದರಲ್ಲಿ ವಾಸ ಮಾಡುತ್ತಿರುವುವು. ವಾತ ಪಿತ್ಯ ಶ್ರೇಷ್ಠ ಗಳು ಮೂರೂ ಇದರ ವಲ್ಕಲ (ಸಟ್ಟಿ ; ಗಳು. ಭೋಗಮೋಕ್ಷಗಳೆಂಬಿ ವರೂ ಇದರಲ್ಲಿ ಹುಟ್ಟುವ ಎರಡುಜಾತಿಯ ಫಲಗಳು.ಈ ಸಂಸಾರವೃಕಕ್ಕೆ ಆಧ್ಯಾತ್ಮಿಕಾದಿ ತಾಪತ್ರಯವೇ ಪಾತಿಯಾಗಿರುವುದು. ಈ ಸಂಸಾರವೃಕ್ಷದ ಎರಡು ಬಗೆಯಫಲಗಳಲ್ಲಿ,ಒಂದು ಜಾತಿಯಹಣ್ಣನ್ನು ಎಂದರೆ ಭೋಗವೆಂಬ ಫಲವನ್ನು , ಗ್ರಾಮವಾಸಿಗಳಾಗಿ ವಿಷಯಾಭಿಲಾಷೆಯಲ್ಲಿ ಬಿದ ಜೇವಗ ಳೆಂಬ) ಹಮ್ಮುಗಳು ಭಕ್ಷಿಸುವುವು. ಮೋಕ್ಷವೆಂಬ ಮತ್ತೊಂದು ಜಾತಿಯ ಹಣ್ಣುಗಳನ್ನು, ಅರಣ್ಯವಾಸಿಗಳಾದ ಹಂಸಗಳು (ಪರಮಹಂಸರು ಅಥವಾ ಯೋಗಿಗಳು) ಭುಜಿಸುವರು. ಆದುದರಿಂದ ಉದ್ಯವಾ ! ಸ್ಥಿರಭಕ್ತಿಯಿಂದ ಕುರೂಪಾಸನೆಯನ್ನು ಮಾಡಿ, ಮೋಕ್ಷಪಾಯಭೂತವಾದ ವಿದ್ಯೆಯನ್ನು