ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨ ಶ್ರೀಮದ್ಭಾಗವತರು [ಅಧ್ಯಾ: ೧೩. ವುದಕ್ಕೆ ಉಪಾಯವೇನು?” ಎಂದರೆ,ಜಾತಿಯಿಂದಲೂ, ಆಶ್ರಯದಿಂದಲೂ, ನಿಮಿತ್ತದಿಂದಲೂ ದುಷ್ಟವಲ್ಲದ ಸಾತ್ವಿಕಾಹಾರಗಳನ್ನೇ ಸೇವಿಸುತ್ತ ಬರು ವುದರಿಂದ ಸತ್ವಗುಣವನ್ನು ಹೆಚ್ಚಿಸಿಕೊಳ್ಳಬಹುದು. ಸತ್ವಗುಣಾಭಿವೃದ್ಧಿಗೆ ಆಹಾರಸಿಯಮವೊಂದು ಮಾತ್ರವೇ ಅಲ್ಲ! ನಾವು ಅಧ್ಯಯನಮಾಡ ತಕ್ಕೆ ಶ್ರುತಿ, ಸ್ಮೃತಿ, ಇತಿಹಾಸ, ಪುರಾಣ, ತೀಮೆಗಳು, ಸಹವಾಸಗ ಳಾದ ಜನರು, ದೇಶ, ಕಾಲ, ಜನ್ಮ, ಕೆರೆ, ಧ್ಯಾನ, ಮಂತ್ರ, ಸಂಸ್ಕಾ ರಗಳೆಂಬ ಈ ಹತರಲ್ಲಿಯ ಸಾತಿಕ ರಾಜಸ ತಾಮಸಗಳೆಂಬ ಮೂರು ಭೇದಗಳುಂಟ.. ಇವುಗಳಲ್ಲಿ ರಾಜಸ ತಾಮಸಗಳನ್ನು ಬಿಟ್ಟು, ಸಾತ್ವಿಕವೆನಿ ಸಿದುವುಗಳ ಸೇಪಿಸುವುದರಿಂದ ಸತ್ವಗುಣವು ಹೆಚ್ಚು ಇದು. ಭಗವ ದೃಶ್ಯರಾದ ಮಹನೀಯರೆ ಯಾವಯಾವುದನ್ನು ಉತ್ತಮವೆಂದು ಹೇಳಿ ರವರೋ ಅವೆಲ್ಲವೂ ಸಾಕಗಳೆಂದೂ, ಯಾವ ಯಾವುದನ್ನು ನಿಂದಿಸಿರುವ ರೋ, ಅವೆಲ್ಲವೂ ತಾಮಸಗಳಂದೂ, ಯಾವಯಾವುದನ್ನು ನಿಂದಿಸದೆಯೂ ಸ್ತುತಿಸದೆಯೂ ಬಿಟ್ಟಿರುವರೋ, ಅವುಗಳನ್ನು ರಾಜಸಗಳೆಂದೂ ತಿಳಿಯ ಬೇಕು. ಸತ್ವವೃದ್ಧಿಯ ಪೇಕ್ಷಿಸತಕ್ಕವನು, ಮೇಲೆ ಹೇಳಿದುವುಗಳಲ್ಲಿ ಸಾತ್ವಿಕವಾದುವುಗಳನ್ನೇ ಸೇವಿಸಬೇಕು. ಸತ್ಯಾಭಿವೃದ್ಧಿಯಿಂದ ಭಕ್ತಿ ರೂಪವಾದ ಧರವೂ, ಅದರಿಂದ ನನ್ನ ವಿಷಯವಾದ ಜ್ಞಾನವೂ ಆಜ್ಞಾನ ಬಲದಿಂದ ನಮ್ಮ ಸಿoತರವಣೆ ಯ, ಈ ನಿರಂತರಸ್ಮರಣೆಯಿಂದ ಶಬ್ಯಾವಿಷಯಗಳ ವಿಸ್ಕತಿಯೂ ಉಂಟಾಗುವುದು. ಎಂದರೆ ಪರಿಪಾಕದಕೆ ಯಲ್ಲಿ ಮನುಷ್ಯನ ಮನಸ್ಸು, ಬೇರೆ ಯಾವ ಲೌಕಿಕ ವಿಷ ಯಗಳನ್ನೂ ಗಮನಿಸದೆ, ಮದೇಕಧ್ಯಾನದಲ್ಲಿ ನಿಲ್ಲುವುದು ಆದರೆ ಸತ್ಪಾದಿ ಗುಣಗಳಿಂದಲೇ ಏರ್ಪಟ್ಟಿರುವ ದೇಹವು,ತನಗೆ ಮೂಲಭೂತವಾದ ಆ ಗುಣ ತ್ರಯವನ್ನೂ ಅಡಸಿ, ತಾನೂ ನಷ್ಟವಾಗುವುದು ಹೇಗೆಂದು ಸೀನು ಶಂಕಿಸ ಬಹುದು. ಕಾಡಿನಲ್ಲಿ ಬಿಂದುಗಳು ಒಂದಕ್ಕೊಂದು ಉದಿವುದರಿಂದುಂ ಟಾದ ಬೆಂಕಿಯು, ತನಗೆ ಉತ್ಸಸ್ಥಾನವಾದ ಆ ಬಿರುಮಳೆಯನ್ನೇ ದಹಿಸಿ, ಕೊನೆಗೆ ತಾನೂ ಶಾಂತವಾಗುವುದಲ್ಲವೆ? ಹಾಗಯೇ ಸಾಹಿಗುಣ ಗಳ ವೈಷಮ್ಯದಿಂದ ಹುಟ್ಟಿದ ದೇಹವು, ತನಗೆ ಮಲವಾದ ಆ ಗುಣ ಶ್ರಯವನ್ನೂ ನೀಗಿಸಿ, ಕೊನೆಗೆ ತಾನೂ ನಿವೃತ್ತವಾಗುವುದು” ಎಂದನು.