ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧೬ ಶ್ರೀಮದ್ಭಾಗವತವು [ಅಧ್ಯಾ. ೧೩. ಲಿನ ಶರೀರವನ್ನು ಮಾತ್ರ ಬಲ್ಲವರೂ ಇಲ್ಲಿ ಪ್ರಶ್ನೆ ಮಾಡಿ ತಿಳಿಯಬೇಕಾದು ದೇನೂ ಇಲ್ಲ. ಹಂಸರೂಪದಿಂದ ನಿಮ್ಮ ಮುಂದೆ ನಿಂತಿರುವ ನನ್ನ ನ್ನು ನೋಡಿದಾಗಲೇ ನಾನು ಯಾವಜಾತಿಗೆ ಸೇರಿದವನೆಂದು ಗೊತ್ತಾಗುವುದು. ನನಗೆ ಈ ರೂಪವು ಹೇಗೆ ಬಂತೆಂದು ಕೇಳುವುದಕ್ಕೂ ಸಂಭವವಿಲ್ಲ. ಏಕೆಂ ದರೆ, ಇಂತಹ ಶರೀರಗಳೆಲ್ಲವೂ ಪಂಚಭೂತಗಳಿಂದೇರ್ಪ್ಪಟ್ಟಿರುವುವೆಂಬುದು ಎಲ್ಲರಿಗೂ ತಿಳಿದೇ ಇರುವುದು. ಆದುದರಿಂದ ಇಲ್ಲಿ ನಿಮ್ಮ ಪ್ರಶ್ನೆಗೇ ಅವ 'ಕಾಶವಿಲ್ಲ. ಓ ಮುನಿಗಳೇ! ಇದರಿಂದ ನೀವು ತಿಳಿಯಬೇಕಾದುದೇನೆಂದು ಬಲ್ಲಿರಾ ? ಮನೋವಾಕ್ಷಾಯಗಳೆಂಬ ತ್ರಿಕರಣಗಳಿಂದಲೂ, ಬೇರೆ ಇಂದ್ರಿ ಯಗಳಿಂದಲೂ ಗ್ರಹಿಸಲ್ಪಡುವ ಸಮಸ್ತವೂ ನಾನೊಬ್ಬನೇ ಅಲ್ಲದೆ, ಲೋ ಕದಲ್ಲಿ ನನಗಿಂತಲೂ ಭಿನ್ನವಾದುದೆಂದೂ ಇಲ್ಲವೆಂಬುದನ್ನು ನೀವು ನಿಶ್ಚ ಯವಾಗಿ ತಿಳಿಯಬೇಕು. ಇದಕ್ಕೆ ಮೊದಲು ನೀವು ನಿಮ್ಮ ಜನಕನಾದ ಈ ಚತುರುಖಬ್ರಹ್ಮನನ್ನು ಕುರಿತು ಒಂದು ಪ್ರಶ್ನವನ್ನು ಕೇಳಿದಿರಲ್ಲವೆ ? ಆ ಪ್ರಶ್ನೆಗೆ ಸಮಾಧಾನವನ್ನು ಹೇಳುವುದಕ್ಕಾಗಿಯೇ ನಾನು ಇಲ್ಲಿಗೆ ಬಂದ ವನು. ಓ ಪುತ್ರರೆ ! ಸಮಸ್ತ ಜೀವಗಳಿಗೂ ನಾನು ಅಂತರಾತ್ಮನು. ಹೀಗೆ ಮದಾತ್ಮಕವಾದ ಜಿ-ವನಿಗೆ ಯಾವಾಗ ಶರೀರಸಂಬಂಧವುಂಟಾಗು ವದೋ, ಆಗ ಅವನ ಮನಸ್ಸು ಶಬ್ದಾದಿವಿಷಯಗಳಲ್ಲಿ ತಗುಲುವುದು. ಆ ಶಬ್ದಾದಿವಿಷಯಗಳೂ ಅವನ ಮನಸ್ಸಿನಲ್ಲಿ ತಗುಲಿಕೊಳ್ಳುವುವು. ಇವು ಒಂದನ್ನೊಂದು ಬಿಟ್ಟು ಹೋಗುವುದೇನೋ ಕಷ್ಟವೇ ! ಇವೆರಡನ್ನೂ ಹೀಗೆ ಗಂಟುಹಾಕಿಡುವುದಕ್ಕೆ ದೇಹವೇ ಮೂಲವು.ದೇಹಸಂಬಂಧವಿದ್ದಾಗ, ಮನಸ್ಸು ಬಾರಿಬಾರಿಗೂ ವಿಷಯಗಳಲ್ಲಿ ಪ್ರವೇಶಿಸುವುದರಿಂದ, ಆ ವಿಷಯ ಗಳೂ ಬಲವಾಗಿ ಮನಸ್ಸಿನಲ್ಲಿ ತಗುಲಿಕೊಳ್ಳುವುವು. ಆದರೆ ಮನಸ್ಸೆಂ ಬುದು ದೇಹದೊಳಗಿನದು, ವಿಷಯಗಳು ಹೊರಗಿನವು. ಇವೆರಡೂ ಒಂದ ಕೊಂದು ತಗುಲಿಕೊಳ್ಳುವುದು ಹೇಗೆ ?” ಎಂದು ಕೇಳುವಿರಾ ? ಪೂರ ವಾಸನೆಯಿಂದ ವಿಷಯಗಳು ಮನಸ್ಸಿನಲ್ಲಿ ತನಗೆ ತಾನೇ ತೋರುತ್ತಿರುವುವು. ಇದಕ್ಕಾಗಿ ವಿಷಯಚಿಂತೆಯನ್ನು ತಪ್ಪಿಸಿ, ನನ್ನ ರೂಪವನ್ನು ಚಿಂತಿಸುವಹಾಗೆ ಮನಸ್ಸನ್ನು ತಿರುಗಿಸಿದರೆ, ಆಗ ವಿಷಯಗಳು ತಾವಾಗಿ ಬಿಟ್ಟುಹೋಗುವುವು.