ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭ ಅಧ್ಯಾ, ೧೨] ಏಕಾದಶಕ್ಕಂಧವು, ಆ ವಿಷಯಚಿಂತೆಯನ್ನು ಬಿಡಿಸುವುದರಿಂದ ದೇಹಸಂಬಂಧವೂ ನಿವರ್ತಿಸು ವುದು. ಹೀಗೆ ಮನಸ್ಸಿನಿಂದ ಶಬ್ದಾದಿವಿಷಯಗಳನ್ನು ಬಿಡಿಸುವುದಕ್ಕೆ ಪರಮಾತ್ಯಧ್ಯಾನವೊಂದು ಮಾತ್ರವಲ್ಲದೆ, ದೇಹಕ್ಕಿಂತಲೂ ತಾನು ವಿಲ ಕಣವೆಂಬುದನ್ನು ತಿಳಿಯುವುದೂ ಒಂದು ಉಪಾಯವಾಗಿದೆ. ಅದಕ್ಕಾಗಿ ಮೊದಲು ಜೀವಾತ್ಮನ ಸ್ವರೂಪವೆಂತದೆಂಬುದನ್ನು ತಿಳಿಯಬೇಕು. ಜೀವ ನಿಗೆ, ಎಚ್ಚರ, ಕನಸು, ಸುಷುಪ್ತಿಯೆಂಬ ಈ ಮೂರವಸೆಗಳು, ಕ್ರಮವಾಗಿ ಸತ್ವಜಸ್ತಮೋಗುಣಗಳಿಂದುಂಟಾಗುವ ಬುದ್ದಿ ವ್ಯಾಪಾರಗಳು. ಆದುದರಿಂ ದ ಮೇಲಿನ ಅವಸ್ಥಾತ್ರಯವೂ ಪ್ರಕೃತಿಸಂಬಂಧಪ್ರಯುಕ್ತವಾದುದೇ ಹೊರತು ಜೀವನಿಗೆ ಸ್ವಾಭಾವಿಕವಲ್ಲ. ಜೀವನು ಈ ಮೂರವಸೆಗಳಿಗಿಂ ತಲೂ ಭಿನ್ನ ನಾಗಿ, ಅವುಗಳನ್ನು ನೋಡತಕ್ಕವನುಮಾತ್ರ ತಾನಾಗಿರು ವನು, ಜೀವನಿಗೆ ದೇಹಸಂಬಂಧವೇ ಮನಸ್ಸಿನಲ್ಲಿ ಶಬ್ಯಾಬಿವಿಷಯಗಳು ಭೋಗ್ಯವೆಂಬ ಬುದ್ಧಿಯನ್ನುಂಟುಮಾಡುವುದು. ಸತ್ಯಾದಿಗುಣಗಳ ಮೂಲಕವಾದ ಜಾಗರಾದ್ಯವಸ್ಥೆಗಳೂ ಜೀವನಿಗೆ ಸಹಜವಲ್ಲ. ಅಂತಹ ಜೀವಸ್ವರೂಪವನ್ನು ಯಥಾಸ್ಥಿತವಾಗಿ ಅನುಸಂಧಾನಮಾಡುತಿದ್ದ ಪಕ್ಷ ದಲ್ಲಿ, ವಿಷಯಗಳಲ್ಲಿ ಭೋಗ್ಯತಾಬುದ್ಧಿಯು ಬಿಟ್ಟು ಹೋಗುವುದು. ಆ ಬುದ್ಧಿ ಯು ಬಿಟ್ಟು ಹೋದಮೇಲೆ, ವಿಷಯಗಳಲ್ಲಿ ಮನಸ್ಸು ಪ್ರವೇಶಿಸಲಾರದು. ಆದರಿಂದ ದೇಹಸಂಬಂಧವೂ ತಪ್ಪುವುದು, ಕೊನೆಗೆ ವಿಷಯಾನುಭವಸಂ ಬಂಧವಾದ ಸುಖದುಃಖಗಳೆಲ್ಲವೂ ಸೀಗಿ, ನಿರತಿಶಯಾನಂದವು ಪ್ರಾಪ್ತ ವಾಗುವುದು. ಆದರೆ, ಮೇಲೆ ಹೇಳಿದಂತೆ ಜಾಗರಾದ್ಯವಸ್ಥೆಗಳಿಗಿಂತಲೂ ವಿಲ ಕ್ಷಣವಾದ ಜೀವಾತ್ಮ ಸ್ವರೂಪವನ್ನು ಅನುಸಂಧಾನಮಾಡುವಾಗ, ಆ ಜೀವ ನಿಗೂ ನಾನು ಅಂತರಾತ್ಮನೆಂಬ ಭಾವದಿಂದಲೇ ಅನುಸಂಧಿಸಬೇಕು. ಜೀವ ಸಿಗೆ ಅನಾದಿಯಾಗಿ ಅನುಸರಿಸಿಬರುವ ದೇಹಾಭಿಮಾನ, ಸ್ವತಂತ್ರಾಭಿಮಾನ ರೂಪವಾದ ಅಹಂಕಾರವೇ ಸಂಸಾರಬಂಧಕ್ಕೆ ಕಾರಣವಾಗಿ, ಆಸಂಸಾರಬಂ ಥವು ಮೋಕ್ಷಪ್ರಾಪ್ತಿಗೆ ವಿಫಾತವನ್ನುಂಟುಮಾಡುವುದು. ವಿವೇಕಿಯಾದ ವನು ಈ ತತ್ವವನ್ನು ತಿಳಿದು, ಸಂಸಾರದಲ್ಲಿ ನಿರೋದವನ್ನು ಹೊಂದಿ, ಆತ್ಮ ಸ್ವರೂಪವನ್ನೇ ಚಿಂತಿಸುತ್ತಿದ್ದರೆ, ಆಗ ಸಂಸಾರಬಂಧದ ಭಯವು ಬಿಟ್ಟು