ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

190 ಶ್ರೀಮದ್ಭಾಗವತವು ಅಧ್ಯಾ. ೧೩. ಹಿಡಿದು, ದೇಹಾದಿಗಳಲ್ಲಿ ಆತ್ಮವೆಂಬ ಬುದ್ಧಿಯನ್ನು ನೀಗಿದವನಿಗೆ ಯಾವಾಗಲೂ ಎಂದರೆ, ಆ ಸಮಾಧಿಯನ್ನು ಬಿಟ್ಟು ಭೋಜನಶಯಾದಿಗ ಇಲ್ಲಿರುವಾಗಲೂ ತಿರುಗಿ ದೇಹಾತ್ಮ ಭ್ರಮವು ಹುಟ್ಟಲಾರದು. ಶರೀರಾವ ಸಾನದವರೆಗೂ ಭಗವದ್ಯಾನರೂಪವಾದ ಆ ಸಮಾಧಿಯನ್ನು ಮಾತ್ರ ಬಿಡಬಾರದು. ಇಂತಹ ಸಮಾಧಿಯಲ್ಲಿರುವವನ ಮನಸ್ಸು, ಆತ್ಮ ಸ್ವರೂಪ ವನ್ನು ಸಾಕ್ಷಾತ್ಕರಿಸುವುದರಲ್ಲಿಯೇ ನೆಲೆಯಾಗಿ ನಿಲ್ಲುವುದರಿಂದ, ಅವನು ನಶ್ವರವಾದ ತನ್ನ ದೇಹದ ಸ್ಥಿತಿಗತಿಗಳನ್ನೇ ತಿಳಿಯಲಾರನು, ಮದ್ಯಪಾನ ದಿಂದ ಮತ್ತೇರಿದವನು, ತನ್ನ ಮೈಮೇಲೆ ಬಟ್ಟಿಯಿರುವುದನ್ನೂ, ಜಾರಿ ಬಿದ್ದುಹೋದುದನ್ನೂ ಹೇಗೆ ತಿಳಿಯಲಾರನೋ, ಹಾಗೆಯೇ ಸಮಾಧಿನಿಷ್ಠ ನಾದವನು, ತನ್ನ ದೇಹವು ಕುಳಿತಿದೆಯೇ, ಸಿಂತಿದೆಯೇ ಎಂಬುದನ್ನೇ ತಿಳಯಲಾರನು. ಆದರೆ ಇಂತಹ ಯೋಗಸಿದ್ಧಿಯನ್ನು ಪಡೆದಾಗ, ದೇಹಕ್ಕೆ ಯಾವ ಕಾರವೂ ಇಲ್ಲದುದರಿಂದ, ಆ ಯೋಗಿಗೆ ಆಗ ದೇಹವೂ ನಷ್ಟವಾ ದಂತೆ ತಿಳಿಯಬೇಕಲ್ಲವೆ? ಎಂದರೆ, ಹಾಗೆಣಿಸಬಾರದು. ಏಕೆಂದರೆ, ಪ್ರತಿ ಯೊಬ್ಬ ಜೀವನ ದೇಹವೂ, ಅವನಲ್ಲಿ ಅಂತರಾತ್ಮನಾದ ನನಗೆ ಅಧೀನವಾಗಿರು ವದು. ಆಯಾಜೀವನಿಗೆ ಪ್ರಾರಬ್ಬಕರಗಳೆಲ್ಲವೂ ತೀರುವವರೆಗೆ,ಆ ದೇಹವು ಪ್ರಾಣಸಹಿತವಾಗಿ ಅವನೊಡನೆ ಇದ್ದೇ ಇರಬೇಕು. ಹಾಗೆ ಕರಕಯ ವಾಗುವವರೆಗೂ ಆಯಾದೇಹವಿದ್ಯೆ ಇರುವಪಕ್ಷದಲ್ಲಿ, ಮೇಲೆ ಹೇಳಿದಂತೆ ಸಮಾಧಿಷ್ಟವನಾದಜ್ಞಾಸಿಯಲ್ಲಿ ಇತರದೇಹಿಗಳಿಗಿಂತಲೂ ವಿಶೇಷವೇನು? ಎಂದು ಕೇಳುವೆಯಾ ? ಸಮಾಧಿಯೋಗದಲ್ಲಿ ಸಿದ್ದಿ ಹೊಂದಿದವನು, ಆತ್ಮ ಸ್ವರೂಪವನ್ನು ಚೆನ್ನಾಗಿ ತಿಳಿಯುವ ನಾದುದರಿಂದ, ಸ್ವಪ್ನದಂತೆ ಆನಿತ್ಯ ವಾದ ದೇಹವನ್ನೂ, ದೇಹಾನುಬಂಧಿಗಳನ್ನೂ ತಿರುಗಿ ಹೊಂದಲಾರನು. ಅಂತಹ ಆತ್ಮ ಸಾಕ್ಷಾಕಾರ:ಾದವರಿಗಾದರೋ, ಒಂದುದೇಹವು ಬಿದ್ದು ಹೋದರೂ, ಮತ್ತೊಂದು ದೇಹವು ಪ್ರಾಪ್ತವಾಗದೆ ಬಿಡದು. ಓ ಬ್ರಾ ಹ್ಮಣರೆ! ಸಾಂಖ್ಯದಲ್ಲಿ ಯ, ಯೋಗದಲ್ಲಿಯೂ ಕ್ರಮವಾಗಿ ವಿವರಿಸಲ್ಪಟ್ಟ ಆತ್ಮ ಪರಮಾತ್ಯೋಪಾಸನರೂಪವಾದ ರಹಸ್ಯವೆಲ್ಲವನ್ನೂ ನಿಮಗೆ ತಿಳಿ ಸಿರುವೆನು. ನಿಮಗೆ ಮೋಕ್ಷ ಸಾಧನವಾದ ಈ ಧರವನ್ನು ಪದೇತಿಸುವುದ