ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨೨ ಶ್ರೀಮದ್ಭಾಗವತವು [ಅಧ್ಯಾ: ೧೪. ಬಹುದೆ ? ಅಥವಾ ಅವುಗಳಲ್ಲಿ ಒಂದೊಂದೂ ಪ್ರಧಾನವಾಗಿಯೇ ಇರು ವುದೆ ? ಅಥವಾ ಅವುಗಳಲ್ಲಿ ಎಲ್ಲಕ್ಕಿಂತಲೂ ಪ್ರಧಾನವೆನಿಸಿರುವುದು ಒಂದು ಮಾತ್ರವುಂಟೆ ? ನೀನು ಹೇಳಿದುದರಲ್ಲಿ ಭಕ್ತಿಯೋಗದಿಂದ ಬೇರೆ ವಿಧ ವಾದ ಸಂಗಗಳೆಲ್ಲವೂ ನೀಗಿ ನಿನ್ನಲ್ಲಿಯೇ ಮನಸ್ಸು ನೆಲೆಗೊಳ್ಳುವುದೆಂದೂ, ಆ ಭಕ್ತಿಯೊಂದೇ ಪ್ರಧಾನವೆಂದೂ ತೋರುವುದು ಅದೊಂದೇ ಮುಖ್ಯವಾಗಿದ್ದ ಪಕ್ಷದಲ್ಲಿ, ಬ್ರಹ್ಮವಾದಿಗಳು ಇತರಪುರುಷಾರಗಳನ್ನು ನಿರೂಪಿಸಿರುವುದೇ ವ್ಯವಲ್ಲವೆ ? ಆ ಬ್ರಹ್ಮವಾದಿಗಳೂ ಅನಾದಿಯಾಗಿ ಬಂದ ವೇದಪ್ರಾಮಾಣ್ಯವನ್ನು ನುಸರಿಸಿಯೇ ಆಯಾ ಇತರಪುರುಷಾರಗ ಳನ್ನು ಹೇಳಿರುವರು. ಅವರ ಮಾತನ್ನು ನಂಬದಿರುವುದು ಹೇಗೆ ? ಈ ವಿಚಾರದಲ್ಲಿ ನನ್ನ ಸಂದೇಹವನ್ನು ನೀಗಿಸಬೇಕು” ಎಂದನು. ಅದಕ್ಕಾ ಕೃಷ್ಣನು. (ಉದ್ದವಾ ! ವೇದವು ಅನಾದಿಯಾಗಿ ಬಂದುದೆಂಬುದೇನೋ ನಿಜವೆ? ಪ್ರಳಯಕಾಲದಲ್ಲಿ ಸಮಸ್ತಪ್ರಾಣಿಗಳೂ ನಷ್ಟವಾದಾಗ, ವೇದ ವಾಕ್ಕೆಂಬುದು ನಿರಾಶ್ರಯವಾಗಿ ನಷ್ಟವಾಗಿ ಹೋದರ, ಸೃಷ್ಣಾರಂಭ ದಲ್ಲಿ ನಾನೇ ಅದನ್ನು ಬ್ರಹ್ಮನಿಗೆ ನನ್ನ ಬಾಯಿಂದ ಉಪದೇಶಿಸಿದೆನು. ಆ ವೇದದಲ್ಲಿ ನಿರೂಪಿಸಲ್ಪಟ್ಟಿರುವ ಪ್ರಧಾನಧಮ್ಮವು ನನ್ನ ಸ್ವರೂಪವಲ್ಲದೆ ಬೇರೆಯಲ್ಲ ! ನನ್ನಿಂದ ಉಪದೇಶವನ್ನು ಹೊಂದಿದಮೇಲೆ ಬ್ರಹ್ಮನು ಅದನ್ನು ತನ್ನ ಮೊದಲನೆಯ ಪುತ್ರನಾದ ಮನುವಿಗೆ ಉಪದೇಶಿಸಿದನು. ಅವನಿಂದ ಭ್ರಗು ಮೊದಲಾದ ಸಪ್ತರ್ಷಿಗಳೂ, ಅವರಿಂದ ಅವರವರ ಮಕ್ಕಳೂ ಆದನ್ನು ಗ್ರಹಿಸಿದರು.ಅವರೂ ತಮ್ಮ ಮಕ್ಕಳಿಗೆ ಉಪದೇಶಿಸಿದರು.ಹೀಗೆಯೇ ಪುತ್ರಪತ್ರಪರಂಪರೆಯಾಗಿ ಉಪದೇಶಿಸಲ್ಪಟ್ಟ ವೇದಗಳು,ದೇವ, ದಾನವ, ಗುಹ್ಯಕ, ಮನುಷ್ಯ, ಸಿದ್ಧ, ಗಂಧ, ವಿದ್ಯಾಧರ, ಚಾರಣ, ಕಿಂದೇವ, ಕಿನ್ನರ, ಕಿಂಪುರುಷ, ನಾಗರೇ ಮೊದಲಾಗಿ ಎಲ್ಲರಲ್ಲಿಯೂ ಹರಡುತ್ತಬಂ ದುವು. ಆದರೇನು ? ಹೀಗೆ ಉಪದೇಶಹೊಂದಿದವರ ಸ್ವಭಾವವೆಲ್ಲವೂ ಒಂ ದೇವಿಧವಾದುದಲ್ಲ! ಸತ್ವ, ರಜಸ್ಸು, ತಮಸ್ಸೆಂಬ ಮೂರುಪ್ರಕೃತಿಗುಣಗ ಳಿಂದ, ಅವರವರ ಸ್ವಭಾವಗಳೂ ಬೇರೆಬೇರೆ ವಿಧವಾಗಿರುವುವು, ಆಯಾ ಸ್ವಭಾವಕ್ಕೆ ತಕ್ಕಂತೆ ಅವರವರ ಬುದ್ಧಿಯೂ ಪ್ರವರ್ತಿಸುವುದು. ಆ ಬುದ್ದಿ