ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೨೩ ಅಣ್ಯಾ, ೧೪) | ಏಕಾದಶಸ್ಕಂಧವು. ಗೆ ತಕ್ಕಂತೆ ಮಾತುಗಳೂ ನಾನಾವಿಧವಾಗಿ ಹೊರಡುವುವು. ಹೀಗೆ ಸ್ವಭಾ ವಭೇದದಿಂದಲೇ ಮತಭೇದಗಳೂ ಏರ್ಪ್ಪಟ್ಟಿರುವುವು. ಇದೇ ಕಾರಣದಿಂದ ಕೇವಲತಾಮಸಸ್ವಭಾವವುಳ್ಳ ಕೆಲವರು, ವೇದಗಳಿಗೆ ಅಪ್ರಾಮಾಣ್ಯವನ್ನೇ ಬೋಧಿಸುತ್ತ ಬಂದುದರಿಂದ, ಅವರಿಂದ ಉಪದೇಶವನ್ನು ಹೊಂದಿದವರು, ಪಾಷಂಡಮತವನ್ನೇ ಅವಲಂಬಿಸಿರುವರು. ಹೀಗೆಯೇ ಕೆಲಕೆಲವರು ನನ್ನ ಮಾಯೆಯಿಂದ ಬುದ್ಧಿ ಮೋಹಗೊಂಡು, ತಮ್ಮ ತಮ್ಮ ಕರಗಳಿಗೂ, ರುಚಿ ಗೂ ತಕ್ಕಂತೆ, ವೇದವಾಕ್ಯಗಳಿಗೆ ವಿರುದ್ಧಾನ್ಯಗಳನ್ನು ಕಲ್ಪಿಸಿ, ಮನುಷ್ಯನು ಪಡೆಯಬೇಕಾದ ಶ್ರೇಯಸ್ಸುಗಳನ್ನೂ, ಅವಕ್ಕೆ `ಸಾಧನಗಳನ್ನೂ ನಾನಾ ವಿಧವಾಗಿ ಹೇಳುತ್ತಿರುವರು. ಕೆಲವರು ಧರವನ್ನೂ, ಕೆಲವರು ಯಶಸ್ಸ ನ್ಯೂ , ಕೆಲವರು ಕಾಮವನ್ನೂ, ಬೇರೆ ಕೆಲವರು ಸತ್ಯ, ದನ, ಶವಾದಿಗಳ ನ್ಯೂ, ಕೆಲವರು ಐಶ್ವಶ್ಯವನ್ನೂ , ಕೆಲವರು ಮೃಷ್ಟಾನ್ನ ಭೋಜನವನ್ನೂ ಕರಗಳಿಗೆ ಫಲರೂಪವಾಗಿ ಹೇಳಿ, ಅವುಗಳೇ ಮನುಷ್ಯನಿಗೆ ಶ್ರೇಯಸ್ಸೆಂ ದೂ ಹೇಳುವರು. ಈ ಶ್ರೇಯಸ್ಸುಗಳನ್ನು ಪಡೆಯುವುದಕ್ಕೆ ಕೆಲವರು ಅಮ್ಮ ವನ್ನೂ , ಕೆಲವರು ಕರಗಳನ್ನೂ, ಕೆಲವರು ಉಪವಾಸಾದಿವ್ರತಗಳನ್ನೂ, ಬೇರೆ ಕೆಲವರು ಯಜ್ಞ, ದಾನ, ತಪಸ್ಸು, ಶೌಚ, ನಿಯಮಾದಿಗಳನ್ನೂ, ಕೆಲವರು ಇಂದ್ರಿಯನಿಗ್ರಹರೂಪವಾದ ಯಮವನ್ನೂ ಉಪಾಯಗಳನ್ನಾ ಗಿ ಹೇಳಿರುವರು. ಹೀಗೆ ಅವರವರು ತಮ್ಮ ತಮ್ಮ ಮನಸ್ಸಿಗೆ ತೋರಿದಂತೆ ಹೇಳುತ್ತಿರುವರು. ಆದರೇನು ? ಈ ಯಜ್ಞಾದಿಕರಗಳಿಗೆ ಹೇಳಿದ ಫಲಗ ಳೆಲ್ಲವೂ ಅನಿತ್ಯಗಳು. ಇವು ಕೊನೆಗೆ ದುಃಖಕ್ಕೆ ಕಾರಣವಾಗಿರುವುವು. ಇ ವೆಲ್ಲವೂ ಅಜ್ಞಾನದಲ್ಲಿಯೇ ಪರಿವತಗಳಾಗುವುವು. ಇವುಗಳನ್ನನುಭವಿಸು ವಾಗ ಲಭಿಸತಕ್ಕ ಆನಂದವೂ ಅತ್ಯಲ್ಪವಾದುದು. ಸುಖಾನುಭವಕಾಲ ದಲ್ಲಿಯೂ ಕೂಡ, ಆ ಪುಣ್ಯಫಲವು ಎಂದಿಗೆ ತೀರಿಹೋಗುವುದೋ, ನಾವು ಯಾವ ಕ್ಷಣದಲ್ಲಿ ತಿರುಗಿ ಕೆಳಗೆ ಬೀಳಬೇಕಾಗುವುದೋ, ಎಂಬ ಭಯವಿದ್ದೆ ಇರುವುದರಿಂದ,ಆಗಿನ ಸುಖವೂ ದುಃಖಗರ್ಭಿತವಾಗಿಯೇ ಇರುವುದು. ಅದು ದರಿಂದ ಉದ್ಯವಾ! ನಿತ್ಯಾನಂದಸ್ವರೂಪನಾದ ನನ್ನಲ್ಲಿ ಮನಸ್ಸಿಟ್ಟು, ಬೇರೆ ಎಲ್ಲಾ ವಿಷಯಗಳಲ್ಲಿಯೂ ನಿರಪೇಕ್ಷನಾದವನ ಸುಖಕ್ಕ ಮೇಲೆ