ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀ , ಶ್ರೀಕೃಷ್ಣಾಯ ಪರಬಹ್ಮಣೇ ನಮಃ ಶ್ರೀಮದಾಗವತವು ಏ ಕ ದ ಸ ಸ 0 ಧ ವು. w+ ಮುಸಲೋತ್ಪತ್ತಿ ವೃತ್ತಾಂತವು. ಈ ತಿರುಗಿ ಶುಕಮುನಿಯು ಪರೀಕ್ಷಿದ್ರಾಜನನ್ನು ಕುರಿತು ('ಓ ರಾಜಾ! ಹೀಗೆ ಶ್ರೀಕೃಷ್ಣನು ಬಲರಾಮನನ್ನೂ, ಇತರ ಯಾದವಕುಮಾರ ರನ್ನೂ ತನಗೆ ಸಹಾಯಕರನ್ನಾಗಿಟ್ಟುಕೊಂಡು, ಪೂತನೆ ಮೊದಲಾದ ದೈತ್ಯಕುಲದವರನ್ನು ವಧಿಸಿದುದಲ್ಲದೆ, ಕೌರವಪಾಂಡವರಲ್ಲಿ ದೊಡ್ಡ ಕಲಹವನ್ನೆಬ್ಬಿಸಿ, ಆಮೂಲಕವಾಗಿ ಭೂಭಾರವನ್ನೂ ಬಹಳಮಟ್ಟಿಗೆ ತಗ್ಗಿಸಿದನು. ದುಷ್ಯರಾದ ಕೌರವರು ಪಾಂಡವರಿಗೆ ಮಾಡಿದ ಹಿಂಸೆಯೋ ಅಷ್ಟಿಷ್ಟಲ್ಲ ! ಕಪಟದ್ದೂತದಿಂದ ಅವರನ್ನು ಸೋಲಿಸಿ ನಾನಾವಿಧ ದಿಂದ ಅವಮಾನಗೊಳಿಸಿದರು. ದುಶ್ಯಾಸನನು ಅವರ ಪತ್ನಿಯಾದ ದಪದಿಯ ತುರುಬನ್ನು ಹಿಡಿದು, ರಾಜಸಭೆಗೆ ಎಳೆತಂದು ಅವಳನ್ನು ಬಹಳವಾಗಿ ಅವಮಾನಪಡಿಸಿದನು. ವಿಷವಿಕ್ಕುವುದು, ಆರಗಿನ ಮನೆಯಲ್ಲಿ ಸೇರಿಸಿ ಬೆಂಕಿಯಿಡುವುದು, ಇವೇ ಮೊದಲಾದ ಎಷ್ಟೋ ಹಿಂಸೆಗಳನ್ನು ಮಾಡಿದರು. ಈ ಹಿಂಸೆಗಳನ್ನು ತಡೆಯಲಾರದೆ, ಬಹಳ ಶಾಂತಸ್ವಭಾವವುಳ್ಳ ಪಾಂಡವರಿಗೂ ಕೊನೆಗೆ ವೀರಾವೇಶವು ಹುಟ್ಟಿತು. ಇದರಿಂದ ಪಾಂಡವರು ಕೌರವರೊಡನೆ ಯುದ್ಧಕ್ಕೂ ನಿಲ್ಲಬೇಕಾಯಿತು ಇದೇಸಮಯದಲ್ಲಿ ಶ್ರೀಕೃಷ್ಣನು, ಆ ಪಾಂಡವರನ್ನೇ ನಿಮಿತ್ತವಾಗಿಟ್ಟು 182 B