ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨ ಅಧ್ಯಾ. ೧೪.] ಏಕಾದತಸ್ಕಂಧನ. ಪಾಕಹೊಂದುತ್ತ ಬರುವುದರಿಂದ, ಆ ವಿಷಯಗಳಿಗೆ ಈಡಾಗಲಾರನು. ಅಗ್ನಿಯು ಮೇಲೆಮೇಲೆ ಜ್ವಲಿಸುತ್ತ ಬಂದ ಹಾಗೆಲ್ಲಾ, ಕಟ್ಟಿಗೆಗಳನ್ನು ಶ್ರೀ ಫ್ರದಲ್ಲಿ ದಹಿಸಿ ಭಸ್ಮ ಮಾಡುವಂತೆ, ನನ್ನ ವಿಷಯದಲ್ಲಿ ಹೆಚ್ಚಿಬರುತ್ತಿರುವ ಭಕ್ತಿಯೋಗವು, ಪಾಪಗಳೆಲ್ಲವನ್ನೂ ಸಮೂಲವಾಗಿ ದಹಿಸಿಬಿಡುವುದು, ಉದ್ದವಾ! ಪೂರ್ಣವಾದ ಭಕ್ತಿಯು ನನ್ನನ್ನು ವಶೀಕರಿಸುವಂತೆ, ಇತರ ಧರಗಳಾಗಲಿ, ಸಾಂಖ್ಯಯೋಗಗಳಾಗಲಿ, ವೇದಾಧ್ಯಯನವಾಗಲಿ, ತಹ ಸ್ನಾಗಲಿ, ದಾನಗಳಾಗಲಿ ನನ್ನ ವಶೀಕರಿಸಲಾರವು. ಏಕರೂಪವಾದ ಭಕ್ತಿಯೊಂದರಿಂದಲೇ ನನ್ನನ್ನು ಹಿಡಿಯುವುದು ಶಕ್ಯವು. ನಾನು ಆತ್ಮಭೂತನಾದುದರಿಂದ ಎಲ್ಲಕ್ಕಿಂತಲೂ ಪ್ರಿಯತಮನು ನನ್ನಲ್ಲಿ ಸ್ಥಿರವಾ ದ ಭಕ್ತಿಯು,ಜಾತಿಯಲ್ಲಿ ಶೃಪಚನನ್ನೂ ಪಾವನಮಾಡುವುದು.ಧಾ.ಸತ್ಯ, ದಯೆ, ವಿದ್ಯೆ, ತಪಸ್ಸು ಮುಂತಾದ ಗುಣಗಳು ತಂಬಿದರೂ, ನನ್ನಲ್ಲಿ ಭಕ್ತಿಯೊಂದು ಮಾತ್ರ ಇಲ್ಲದಿದ್ದರೆ, ಅಂತವನ ಆತ್ಮವು ಶುದ್ಯವೆಸಲಾ ರದು. ಆದರೆ, ಉದ್ದವಾ ! ಬರೀಬಾಯಿಮಾತಿನಿಂದ ತಾನು ಭಕ್ತನೆಂದು ಹೇಳಿಕೊಂಡರೆ ಸಾಲದು. ಮೈಯಲ್ಲಿ ರೋಮಾಂಚಗಳಿಲ್ಲದೆ, ಮದೇಕಯ್ಯಾ ನದಿಂದ ಮನಸ್ಸು ಕರಗದೆ, ಕಣ್ಣುಗಳಲ್ಲಿ ಆನಂದಬಾಷ್ಪವು ತುಳುಕದಿ ಭಕ್ತಿಯ ನಿಜವಾದ ಭಕ್ತಿಯೆನಿಸಲಾರದು. ಅಂತಹ ಭಕ್ತಿಯು ಅಂತ ಕರಣವನ್ನೂ ಶುದ್ಧಿಕರಿಸಲಾರದು ಯಾವನಿಗೆ ಭಕ್ತಿಪಾರವಶ್ಯದಿಂದ ಕಂಠಸ್ವರವು ಕುಗ್ಗಿ, ಮನಸ್ಸು ಕರಗಿ, ಒಮ್ಮೆ ಅಳುವುದು, ಆಗಾಗ ನಗು ವುದು, ಲಜ್ಜೆಯಿಲ್ಲದೆ ಕುಣಿಯುವುದು, ಗಟ್ಟಿಯಾಗಿ ಹಾಡುವುದು, ಇಂತಹ ಚೇಷ್ಟೆಗಳನ್ನು ನಡೆಸುವನೋ, ಅ೦ತವನೇ ನನ್ನಲ್ಲಿ ಪೂರ್ಣಭಕ್ತಿಯುಳ್ಳ ವನು. ಅಂತವನು ತನ್ನ ಸಂಬಂಧದಿಂದ ಲೋಕವನ್ನೆ ಲ್ಯಾ ಪಾವನಮಾ ಡುವನು. ಬಂಗಾರವನ್ನು ಬೆಂಕಿಯಲ್ಲಿಟ್ಟು, ಊದುವುದರಿಂದ, ತನ್ನಲ್ಲಿರುವ ಕಲವನ್ನು ಬಿಟ್ಟು ತನ್ನ ಸಹಜವಾದ ಶುದ್ಧರೂಪವನ್ನು ಹೊಂದುವಂತೆ, ಜೀವಾತ್ಮನೂಕೂಡ ನನ್ನಲ್ಲಿ ಭಕ್ತಿಯೋಗದಿಂದ, ಕಠಶೇಷವನ್ನು ಕಳೆದು, ಶುದ್ಧವಾದ ಸಹಜಸ್ವರೂಪವನ್ನು ಹೊಂದುವನು. ರೋಗಪೀಡಿತನಾದ ಕಣ್ಣಿಗೆ ಔಷಧಾಂಜನವನ್ನಿಕ್ಕುವುದರಿಂದ, ಅದರ ದೋಷವು ನೀಗಿ, ಅತಿ 3