ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨೬ 3 ಶ್ರೀಮದ್ಭಾಗವತರು [ಅಧ್ಯಾ, ೧೪. ಸೂಕ್ಷವಸ್ತುವನ್ನೂ ಸ್ಪಷ್ಟವಾಗಿ ಕಾಣುವ ಶಕ್ತಿಯನ್ನು ಹೊಂದುವು ದಲ್ಲವೆ? ಹಾಗೆಯೇ ಜೀವನೂಕೂಡ ನನ್ನ ಕಥಾಶ್ರವಣಕೀರ್ತನಗಳನ್ನು ಮಾಡಿದಷ್ಟೂ, ತನ್ನ ಕರದೋಷವನ್ನು ನೀಗಿ, ಶುದ್ಧನಾಗಿ, ಪ್ರಕೃತಿಸ್ಪ ರೂಪವನ್ನೂ , ಅದಕ್ಕಿಂತಲೂ ಸೂಕ್ಷ್ಮವಾದ ಆತ್ಮಸ್ವರೂಪವನ್ನೂ , ಆ ಆತ್ಮನಿಗಿಂತಲೂ ಸೂಕ್ಷ್ಮವಾದ ಪರಮಾತ್ಮ ಸ್ವರೂಪವನ್ನೂ ಸ್ಪಷ್ಟ ವಾಗಿ ಕಾಣಬಲ್ಲವನಾಗುವನು. ಉದ್ದವಾ ! ಮುಖ್ಯವಾಗಿ ಶಬ್ದಾದಿವಿಷ ಯಗಳನ್ನು ಚಿಂತಿಸುವವನ ಮನಸ್ಸು, ವಿಷಯಗಳಲ್ಲಿಯೇ ಮಗ್ನ ವಾಗು ವುದು. ನನ್ನನ್ನು ಸ್ಮರಿಸತಕ್ಕೆ ಮನಸ್ಸು ನನ್ನಲ್ಲಿರ್ಯೆ ಲಯಿಸುವುದು. ಹೀಗೆ ಯಾವಾಗಲೂ ನನ್ನ ಕಥಾಶ್ರವಣಕೀರ್ತನಗಳೇ ಭಕ್ತಿಗೆ ಮೂಲವಾದುದ ರಿಂದ, ಸ್ಪಷ್ಟ ಮನೋರಥಗಳಂತೆ ಅಸ್ಥಿರಗಳಾದ ಶಬ್ದಾದಿವಿಷಯಗಳ ಚಿಂ ತೆಯನ್ನು ಬಿಟ್ಟು, ನನ್ನಲ್ಲಿಯೇ ನೀನು ಮನಸ್ಸನ್ನು ನೆಲೆಗೊಳಿಸಬೇಕು. ಸ್ತ್ರೀಯರನ್ನಾಗಲಿ, ಸ್ತ್ರೀಸಂಗದಲ್ಲಿರುವ ಪುರುಷರನ್ನಾಗಲಿ ಸಮೀಪಕ್ಕೆ ಹೊಸದೆ, ಪ್ರಯತ್ನ ಪೂರೈಕವಾಗಿ ಇಂದ್ರಿಯಗಳನ್ನು ವಶದಲ್ಲಿರಿಸಿ ಕೊಂಡು, ನಿರ್ಭಯವಾಗಿಯೂ, ವಿವಿಕ್ತವಾಗಿಯೂ ಇರುವ ಸ್ಥಳವನ್ನು ಸೇರಿ, ಯಾವಾಗಲೂ ಬೇಸರಪಡದೆ ನನ್ನನ್ನು ಚಿಂತಿಸುತ್ತಿರಬೇಕು. ಸ್ತ್ರೀಯ ರೊಡನೆಯೂ, ಆ ಸಂಗವುಳ್ಳ ಪುರುಷರೊಡನೆಯೂ ಸಹವಾಸಮಾ ಡುವುದರಿಂದುಂಟಾಗುವಷ್ಟು ಕೇಶವೂ, ಬಂಧವೂ ಬೇರೆ ಯಾವವಿಧದಿಂದ ಲೂ ಉಂಟಾಗಲಾರದು. ಆದುದರಿಂದ, ಈ ವಿಚಾರದಲ್ಲಿ ಮಾತ್ರ ಬಹಳ ಎಚ್ಚರಿಕೆಯಿಂದಿರಬೇಕು.” ಎಂದನು. w+ ಧ್ಯಾನಯೋಗವು +m. ತಿರುಗಿ ಉದ್ದವನು ಪ್ರಶ್ನೆ ಮಾಡುವನು. (( ಕೃಷ್ಣಾ! ವಿವಿಕ್ತ ಸ್ಥಳ ವನ್ನು ಸೇರಿ ನಿನ್ನನ್ನು ಧ್ಯಾನಿಸುತ್ತಿರಬೇಕೆಂದು ಹೇಳಿದೆಯಲ್ಲವೆ? ಆ ಧ್ಯಾನ ಕ್ರಮವು ಹೇಗೆ? ಮೋಕ್ಷಾರ್ಥಿಯಾದವನು ನಿನ್ನ ಯಾವ ರೂಪವನ್ನು ಯಾವರೀತಿಯಲ್ಲಿ ಧ್ಯಾನಿಸಬೇಕು ? ಈ ವಿಚಾರವನ್ನು ನನಗೆ ತಿಳಿಸಬೇಕು” ಎಂದನು. ಅದಕ್ಕಾ ಕೃಷ್ಣನು. << ಉದ್ಯವಾ! ಕೇಳು ! ನನ್ನನ್ನು ಧ್ಯಾ ನಿಸತಕ್ಕವನು, ವಿವಿಕ್ತವಾದ ಸ್ಥಳದಲ್ಲಿ, ಹಳ್ಳತಿಟ್ಟಿಲ್ಲದ ಹಿಂದಾನೊಂದು