ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಅಧ್ಯಾ, ೧೫.] ಏಕಾದಶಸ್ಕಂಧನ, ಬೇರೆ ಅಂಗಸೌಂದಯ್ಯದಲ್ಲಿ ವ್ಯಾಪಿಸಿದ ಆ ಮನಸ್ಸನ್ನೆಳೆದು, ಮಂದಹಾ ಸವಿಶಿಷ್ಟವಾದ ಮುಖಸೌಂದಯ್ಯವೊಂದನ್ನು ಮಾತ್ರ ಚಿಂತಿಸುವಂತೆ ಮಾಡಬೇಕು. ಬಹಳಹೊತ್ತಿನವರೆಗೆ ಆ ಮುಖಸೌಂದರವನ್ನನುಭವಿಸಿದ ಮೇಲೆ ಅಲ್ಲಿಂದ ಆ ಮನಸ್ಸನ್ನೆಳೆದು, ವ್ಯೂಮದಲ್ಲಿ ಎಂದರೆ, ಮೊಮ ದಂತೆ ನಿಮ್ಮಲವಾಗಿಯೂ, ಅಪರಿಛಿನ್ನವಾಗಿಯೂ ಇರುವ ನನ್ನ ದಿವ್ಯಾ ತ್ಮಸ್ವರೂಪದಲ್ಲಿ ನೆಲೆಗೊಳಿಸಬೇಕು. ಕೊನೆಗೆ ಆ ದಿವ್ಯಾತ್ಮಸ್ವರೂಪ ಧಾರಣವನ್ನೂ , ತನ್ನ ನ್ನೂ ಮರೆತು, ತನಗೆ ಧೈಯವಾದ ಪರಮಾತ್ಮ ಸ್ವ ರೂಪವೊಂದರಲ್ಲಿ ಹೊರತು ಬೇರೊಂದರ ಚಿಂತೆಯಿಲ್ಲದಿರುವುದೇ ಸಮಾ ಥಿಯೆನಿಸುವುದು. ಹೀಗೆ ಸಮಾಧಿಯಲ್ಲಿರುವವನಿಗೆ, ಒಂದು ಬೆಳಕಿನಲ್ಲಿ ಮತ್ತೊಂದು ಬೆಳಕು ಹೇಗೋಹಾಗೆ, ತನ್ನ ಆತ್ಮವು ನನ್ನ ಕ್ಲಿಯೂ, ನಾನು ಆತ್ಮನಲ್ಲಿಯೂ ಕೂಡಿರುವ ಸಂಗತಿಯು ವ್ಯಕ್ತವಾಗಿ ತೋರುವುದು. ಇಂ ತಹ ಸಮಾಧಿಯಲ್ಲಿ ನಿರ್ವಿಸ್ಸು ವಾಗಿ ಸಿದ್ಧಿಯನ್ನು ಪಡೆದ ಯೋಗಿಗೆ, ದೇಹ ವೇ ಆತ್ಮವೆಂಬ ಭಯವೂ, ಆತ್ಮವು ಸ್ವತಂತ್ರವೆಂಬ ಭ್ರಮವೂ ನಿ ರ್ಮೂಲವಾಗಿ ನಾಶಹೊಂದುವುದು. ಇದು ಹದಿನಾಲ್ಕನೆಯ ಅಧ್ಯಾಯವು. ಈ ಧ್ಯಾನಯೋಗದಿಂದುಂಟಾಗುವ ಅಣಿಮಾದಿಸಿದ್ದಿಗಳು +w «« ಉದ್ಯವಾ ! ಹಿಂದೆ ಹೇಳಿದಂತೆ ಪ್ರಾಣೇಂದ್ರಿಯಗಳನ್ನು ಜಯಿಸಿ ಸ್ಥಿರಚಿತ್ತನಾಗಿ, ನನ್ನಲ್ಲಿಯೇ ಮನಸ್ಸನ್ನು ಧಾರಣಮಾಡಿದಯೋಗಿಗೆ, ಮೋಕ್ಷ ಸಿದ್ದಿಯುಂಟಾಗುವುದು ಮಾತ್ರವೇ ಅಲ್ಲದೆ, ನಡುವೆ ಇನ್ನೂ ಅನೇಕ ಸಿಹಿಗಳೂ ತಾವಾಗಿ ಕೈಗೂಡಿಬರುವುದುಂಟು. ಆದರೆ ಮೋಕ್ಷಾಪೇಕ್ಷೆ ಯುಳ್ಳವನು, ಅವುಗಳಿಂದ ತೃಪ್ತನಾಗಬಾರದು” ಎಂದು ಕೃಷ್ಣನು ಹೇಳಿದ ಮಾತನ್ನು ಕೇಳಿ, ತಿರುಗಿ, ಉದ್ದವನು. ( ಪ್ರಭ : ಯಾವವಿಧವಾದ ಧಾರಣಾಯೋಗದಿಂದ ಯಾವಸಿದ್ಧಿಗಳುಂಟಾಗುವುವು? ಆ ಸಿದ್ಧಿಗಳೆಷ್ಟು? ಅವು ಕೈಗೂಡಿಬರುವುದು ಹೀಗೆ ? ಆ ಸಿದ್ಧಿಗಳನ್ನು ಕೊಡತಕ್ಕವನು ನೀನೇ ಆದುದರಿಂದ,ಅವೆಲ್ಲವನ್ನೂ ನನಗೆ ಚೆನ್ನಾಗಿ ವಿವರಿಸಿ ತಿಳಿಸಬೇಕು ಎಂದನು.