ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೦ ಶ್ರೀಮದ್ಭಾಗವತವು [ಅಧ್ಯಾ. ೧೫. ಅದಕ್ಕಾ ಕೃಷ_ನು (ಉದ್ಯವಾ! ಕೇಳು ! ಯೋಗಪಾರಂಗತ ರಾದವರು, ಹದಿನೆಂಟು ಸಿದ್ದಿಗಳುಂಟೆಂದು ಹೇಳಿರುವರು. ಅವುಗಳಲ್ಲಿ ಮೊದ ಲನೆಯ ಎಂಟು ಸಿದ್ಧಿಗಳಿಗೆ ನನ್ನನ್ನು ಪಡೆಯುವುದೇ ಮುಖ್ಯಪ್ರಯೋಜ ನವು, ಉಳಿದ ಹತ್ತು ಸಿದ್ಧಿಗಳಿಗೆ ವಿಷಯಸುಖಾನುಭವವೇ ಪ್ರಯೋಜನ ವಾಗಿರುವುದು. ನನ್ನ ಪ್ರಾಪ್ತಿಯನ್ನೇ ಮುಖ್ಯ ಪ್ರಯೋಜನವಾಗಿ ಉಳ್ಳ ಮೊದಲಿನ ಎಂಟು ಸಿದ್ಧಿಗಳಿಗೆ, ಕ್ರಮವಾಗಿ, ಅಣಿಮಾ, ಮಹಿಮಾ, ಲಘಿ. ಮಾ, ಪ್ರಾಪ್ತಿ, ಪ್ರಾಕಾಶ್ಯ, ಈಶತ್ವ, ವಶಿತ್ವ, ಆತ್ಯಂತಿಕಸುಖವೆಂದು ಹೆಸರು. ಈ ಎಂಟರಲ್ಲಿ ಮೊದಲನೆಯ ಮೂರುಸಿದ್ದಿಗಳು ದೇಹಕ್ಕೆ ಸಂಬಂ ಧಪಟ್ಟವು. ಎಂದರೆ, ದೇಹವನ್ನು ಇಷ್ಟಬಂದಹಾಗೆ ಅತಿಸೂಕ್ಷವಾಗಿ, ಯಾಗಲಿ, ಅತಿಮಹತ್ತಾಗಿಯಾಗಲಿ, ಅತಿಲಫು (ಹಗುತ) ವಾಗಿಯಾಗಲಿ ಮಾಡಿಕೊಳ್ಳತಕ್ಕ ಶಕ್ತಿ, ಪ್ರಾಪ್ತಿಯೆಂದರೆ ತಾನಿದ್ದ ಕಡೆಯಲ್ಲಿಯೇ ಇಂದ್ರಿಯಗಳಿಂದ ಪರೋಕ್ಷವಿಷಯಗಳನ್ನೂ ಅನುಭವಿಸತಕ್ಕ ಶಕ್ತಿ. ಪ್ರಾ ಕಾಶ್ಯವೆಂದರೆ ಐಹಿಕಾಮುಷ್ಟಿಕಭೋಗಾನುಭವಗಳಲ್ಲಿ ಬೇರೆ ಯವರಿಗಿಂ ತಲೂ ತಾನೇ ಮೇಲೆನಿಸಿರುವುದು, ಈಶತ್ವವೆಂದರೆ ಸಮಸ್ತವಿಷಯಗ ರಲ್ಲಿಯೂ ತನ್ನ ಶಕ್ತಿಯನ್ನು ಪ್ರೇರಿಸುವುದು, ವಶಿತ್ವವೆಂದರೆ ವಿಷಯಾ ನುಭವಕಾಲದಲ್ಲಿಯೂ ಅವುಗಳಿಗೆ ವಶನಾಗದಿರುವುದು, ಅತ್ಯಂತಿಕ ಸುಖವೆಂ ದರೆ ಯಾವಸುಖದಲ್ಲಿ ಇತರಕಾಮಗಳೆಲ್ಲವೂ ಸಮುದ್ರದಲ್ಲಿ ಜಲಬಿಂದುಗ ಳು ಹೇಗೋಹಾಗೆ ಲಯಹೊಂದಿರುವುವೋ, ಅಂತಹ ಉತ್ತಮಸುಖವು. ಈ ಎಂಟುಸಿಗಳೂ, ಸಮಾಧಿಯೊಗಸಿದ್ಧನಿಗೆ ಸ್ವಭಾವಸಿದ್ಧಗಳು. ಉಳಿದ ಹತ್ತು ಸಿದ್ಧಿಗಳಿಗೂ ಕ್ರಮವಾಗಿ, ಅನೂಲ್ಕಿ ಮತ್ವ (ಎಂದರೆ, ದೇಹಧರಗ ಳಾದ ಹಸಿವು, ಬಾಯಾರಿಕೆ, ಮುಂತಾದುವುಗಳಿಲ್ಲದಿರುವುದು.) ದೂರಶ್ರ ವಣದರ್ಶನ, (ಎಂದರೆ, ಪರೋಕ್ಷವಾಗಿ ನಡೆದ ಶಬ್ದಗಳನ್ನೂ ರೂಪಗಳ ನ್ಯೂ ಗ್ರಹಿಸುವ ಶಕ್ತಿ, ಮನೋವೇಗ, ಕಾಮರೂಪ, ಪರಕಾಯ ಪ್ರವೇಶ, ಸ್ವಛಾಮರಣ, ದೇವತೆಗಳೊಡನೆ ಸೇರಿ ಅವರೊಡನೆ ಸಮಾ ನಭೋಗಗಳನ್ನನುಭವಿಸುವುದು, ಮನಸ್ಸಿಗೆ ತೋರಿದ ಕೋರಿಕೆಗಳನ್ನೆಲ್ಲಾ ಪಡೆಯುವುದುನಿರಂಕುಶವಾದ ಅಜ್ಜಿ,ಮತ್ತು ಗತಿಎಂಬಿವು ಹತ್ತೂ, ಇತರ