ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨ ಶ್ರೀಮದ್ಭಾಗವತವು [ಅನ್ಯಾ.ox. ತ್ತು ಆತ್ಮಗಳ ಪ್ರೇರಣರೂಪವಾದ ಈ ಶತ್ವಸಿದ್ಧಿಯನ್ನು ಪಡೆಯುವನು. ಷಡ್ಗುಣಪರಿಪೂರ್ಣನೂ, ಸಮಸ್ತಜೀವಗಳಿಗೂ ಪ್ರಾಪ್ಯ ಪ್ರಾಪ ಕನೂ ಆದ ನಾನು, ಸಮಸ್ತ ಜೀವಶರೀರಕನೆಂಬುದನ್ನು ತಿಳಿದು, ಅದೇಭಾ ವದಿಂದ ಮನಸ್ಸಿನಲ್ಲಿ ಧಾರಣಮಾಡತಕ್ಕವನು, ನನ್ನಂತೆಯೇ ಗುಣಗಳ ಸಂಬಂಧವಿಲ್ಲದಿರುವಿಕೆಯೆಂಬ ವಶಿತ್ವಸಿದ್ಧಿಯನ್ನು ಹೊಂದುವನು. ಹೇಯ ಗುಣರಹಿತನಾಗಿಯೂ, ಸಮಸ್ತ ಕಲ್ಯಾಣಗುಣಪೂರ್ಣನಾಗಿಯೂ ಇರುವ ನನ್ನನ್ನು ಪರಬ್ರಹ್ಮಭಾವದಿಂದ ಮನಸ್ಸಿನಲ್ಲಿ ಧಾರಣಮಾಡಿದವನು,ಸಮಸ್ತ ಕಾಮಗಳಿಗೂ ಎಲ್ಲೆಯಾದ ಪರಮಾನಂದವನ್ನು ಹೊಂದುವನು. ನನ್ನನ್ನು ಶೃತಪಪತಿಯೆಂದೂ, ಶುದ್ಧ ಸತ್ಯಮೂರ್ತಿಯೆಂದೂ ಥರ ಸಾಹ ಕನೆಂದೂ ಮನಸ್ಸಿನಲ್ಲಿ ಧಾರಣಮಾಡುವವನು, ಹಸಿವು ಬಾಯಾರಿಕೆ ಮುಂತಾದ ಷಡೂರಿಗಳನ್ನೂ ಬಟದವನಾಗಿ, ಶೈತರೂಪತ್ವವನ್ನು ಹೊಂದುವನು. ನನ್ನನ್ನು ಆಕಾಶದಂತೆ ಸಿರಲನೆಂದೂ, ಸತ್ಯವ್ಯಾಪಕ ನೆಂದೂ, ಪ್ರಾಣಶರಿರಕನೆಂದೂ ಮನಸ್ಸಿನಲ್ಲಿ ಧಾರಣಮಾಡುವವ ನು,ದೂರದಲ್ಲಿರುವ ಭೂತಗಳ ಶಬ್ದವನ್ನೂ ಕೇಳಬಲ್ಲವನಾಗುವನು. ಚಕ್ಷ) ರಿಂದ್ರಿಯವನ್ನು ಆದಕ್ಕಧಿಷ್ಠಾನದೇವತೆಯಾದ ಸೂರಿನಲ್ಲಿಯೂ ಆ ಸೂಯ್ಯನನ್ನು ನನ್ನ ಚಕ್ಷುರಿಂದ್ರಿಯದಲ್ಲಿಯೂ ಸೇರಿರುವಂತೆ ಭಾವಿಸಿ, ನನ್ನನ್ನು ಧ್ಯಾನಿಸತಕ್ಕವನು, ದೂರಸ್ಥ ಪದಾರಗಳನ್ನೂ ನೋಡಬಲ್ಲವನಾ ಗುವನು. ನನ್ನಲ್ಲಿ ಮೊದಲು ಮನಸ್ಕೂ, ಆಮೇಲೆ ಪ್ರಾಣವಾಯುವಿನೊ ಡನೆ ತನ್ನ ದೇಹವೂ ಸಂಯುಕ್ತವಾದಂತೆ ಭಾವಿಸಿ, ಅದೇವಿಧವಾಗಿ ನನ್ನ ನ್ನು ಮನಸ್ಸಿನಲ್ಲಿಟ್ಟು ಧಾರಣಮಾಡುವವನಿಗೆ, ಆ ಧಾರಣಾಶಕ್ತಿಯಿಂದ, ಮನಸ್ಸುಹೋದ ಕಡೆಗೆ ದೇಹವು ಹೋಗುವುದು. ನನ್ನ ಕ್ಲಿಯೇ ನಮ್ಮ ಮನಸ್ಸುಳ್ಳವನಾಗಿದ್ದು, ತನಗೆ ಯಾವಯಾವ ರೂಪವನ್ನು ಕೋರುವ ನೋ, ಧಾರಣಾಯೋಗಬಲದಿಂದ ಆಯಾರೂಪವನ್ನು ಹೊಂದುವನು. ಪರಕಾಯಪ್ರವೇಶವನ್ನು ಮಾಡಬೇಕೆಂದೆಳಸುವವನು, ನನ್ನನ್ನು ಮನಸ್ಸಿ ನಲ್ಲಿ ದೃಢವಾಗಿಟ್ಟುಕೊಂಡು, ತಾನು ಪ್ರವೇಶಿಸಬೇಕಾದ ದೇಹದಲ್ಲಿ ತನ್ನ ಆತ್ಮವಿರುವಂತೆ ಭಾವಿಸಿದರೆ, ಆಗ ಆ ಆತ್ಮವು ಪ್ರಾಣೇಂದ್ರಿಯಗಳೂ