ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9Y ಶ್ರೀಮದ್ಭಾಗವತರು [ಅಧ್ಯಾ, ೧೫, ಧಗಳಿಂದಲೂ, ಛತ್ರಚಾಮರಧ್ವಜಾದಿಗಳಿಂದಲೂ ಶೋಭಿತವಾದ ನನ್ನ ವಿಭೂತಿಗಳನ್ನು ಧಾರಣಾಯೋಗದಿಂದ ಧ್ಯಾನಿಸುವವನಿಗೆ ಎಲ್ಲಿಯೂ ಪರಾಜಯವಿರದು ಹೀಗೆ ಯೋಗಧಾರಣೆಯಿಂದ ನನ್ನನ್ನು ಉಪವಾಸಿಸ ತಕ್ಕವರಿಗೆ, ಮೇಲೆ ಹೇಳಿದ ಸಿದ್ಧಿಗಳೆಲ್ಲವೂ ಲಭಿಸುವುವು. ಮನಸ್ಸನ್ನೂ , ಬಾಹೇಂದ್ರಿಯಗಳನ್ನೂ ಪ್ರಾಣವಾಯುವನ್ನೂ ಜಯಿಸಿ, ಯೋಗಧಾರಣೆ ಯಿಂದ ನನ್ನ ಮನಸ್ಸಿಟ್ಟವನಿಗೆ ಯಾವ ಸಿದ್ಧಿಯೂ ದುರ್ಲಭವಲ್ಲವು ಆದರೇನು ? ನನ್ನ ಉಪಾಸನಾರೂಪವಾದ ಉತ್ತಮಯೋಗವನ್ನು ಸಾಧಿಸ ಬೇಕೆಂಬ ಉದ್ದೇಶವುಳ್ಳ ಯೋಗಿಗೆ, ಮೇಲೆ ಹೇಳಿದ ಅನೂಲ್ಕಿ ಮಾದಿಗ ಳೆಲ್ಲವೂ, ಆ ಯೋಗಸಿದ್ದಿಗೆ ಭಂಗವನ್ನುಂಟುಮಾಡುವ ವಿಘ್ನು ಗಳೆಂದೇ ಯೋಗವಿದರ ಅಭಿಪ್ರಾಯವು. ಏಕೆಂದರೆ, ಇವೆಲ್ಲವೂ ತಿರುಗಿ ಸಂಸಾರ ಬಂಧಕ್ಕೆ ಕಾರಣಗಳೆನಿಸುವುವು. ಆದರೆ ಅಣಿಮಾದ್ಯಷ್ಟ ಸಿದ್ಧಿ ಗಳುಮಾತ್ರ ಭಗವತ್ಪಾಪ್ತಿಗೆ ವಿಫು ಗಳಲ್ಲವೆಂಬುದು ಹೇಗೆ? ಎಂದರೆ, ಯೋಗಿಯು ತನ್ನ ಪ್ರಾರಬ್ಧ ಕರ್ಮವು ಕಳೆದಮೇಲೆಯೇ ಪರಮಪುರು ಪಾರರೂಪನಾದ ನನ್ನನ್ನು ಹೊಂದಬೇಕಾದುದರಿಂದ, ಅದುವರೆಗೆ ಕಾಲವನ್ನು ಕಳೆಯುವುದಕ್ಕಾಗಿ ಈ ಯೋಗಗಳೆಂದು ತಿಳಿಯಬೇಕು. ಉದ್ಯವಾ! ಜಲಚರಪ್ರಾಣಿಗಳಿಗೆ ಜಲಸ್ತಂಭವೂ, ಪಕ್ಷಿಗಳಿಗೆ ಗಗನಸಂಚಾ ರವೂ ಹೇಗೋ ಹಾಗೆ, ಕೆಲವುಸಿಗಳು ಜನ್ಮಸಿದ್ಧವಾಗಿಯೇ ಬರುವುವು. ಇದಲ್ಲದೆ ಮಣಿಮಂತ್‌ಷಧಿಗಳಿಂದಲೂ, ತಪಸ್ಸಿನಿಂದಲೂ ಕೆಲವು ಸಿದ್ಧಿ ಗಳು ಕೈಗೂಡಿಬರುವುದುಂಟು. ಈ ಸಮಸ್ತಸಿದ್ಧಿಗಳನ್ನೂ ಯೋಗಬಲದಿಂ ದಲೇ ಪಡೆಯಬಹುದು, ಹೀಗೆ ದೇವಾದಿಜನ್ಮಗಳಿಂದಲೇ ಸುಲಭವಾಗಿ ಪಡೆಯಬಹುದಾದ ಆ ಅಲ್ಪಸಿದ್ದಿಗಳಿಗಾಗಿ ಆ ಯೋಗವನ್ನು ಪ್ರಯೋಗಿಸಿ, ನನ್ನ ಸಾಲೋಕ್ಯಾಧಿರೂಪವಾದ ಉತ್ತಮಪುರುಷಾರವನ್ನು ಪಡೆಯುವ ವಿಷಯದಲ್ಲಿ ಉಪೇಕ್ಷಿಸಬಾರದು. ಉದ್ಯವಾ! ಸಮಸ್ತಸಿದ್ಧಿಗಳಿಗೂ ನಾನೇ ಪ್ರಾಪಕನೂ, ಪಾಲಕನೂ, ನಿರಾಹಕನೂ ಆಗಿರುವೆನು. ಆತ್ಯೋಪಾಸನ ರೂಪವಾದ ಸಾಂಖ್ಯಕ್ಕೂ, ಪರಮಾತ್ಯೋಪಾಸನರೂಪವಾದ ಯೋ ಗಕ್ಕೂ, ಸ್ವರ್ಗಾದಿಸುಖಗಳಿಗೆ ಸಾಧನಗಳಾದ ಕಲ್ಮಗಳಿಗೂ, ನಾನೇ ಪ್ರೇರ