ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫ ಅಧ್ಯಾ, ೧೬.) ಏಕಾದಶಸ್ಕಂಧವು, ಕನೂ ನಿರಾಹಕನೂ ಆಗಿರುವೆನು. ಏಕೆಂದರೆ, ಆಕಾಶಾದಿಭೂತಗಳು ಎಲ್ಲಾ ದೇವಮನುಷ್ಯಾದಿಶರೀರಗಳ ಒಳಗೂ ಹೊರಗೂ ವ್ಯಾಪಿಸಿರುವಂತೆ ನಾನು ಎಲ್ಲಾ ವಸ್ತುಗಳ ಮತ್ತು ಪ್ರಾಣಿಗಳ ಒಳಗೂ ಹೊರಗೂ ವ್ಯಾಪಿಸಿರತಕ್ಕನ ನಾದುದರಿಂದ, ನನ್ನನ್ನು ಬಿಟ್ಟ ವಸ್ತುವೊಂದೂ ಇಲ್ಲವೆಂದುತಿಳಿ !”ಎಂದನು. ಇದು ಹದಿನೈದನೆಯ ಅಧ್ಯಾಯವು, wಭಗವದ್ವಿಭೂತಿಗಳು.•wಉದ್ಯವನ್ನು ತಿರುಗಿ ಕೃಷ್ಣನನ್ನು ಕುರಿತು ಓ ಪ್ರಭೋ ! ನೀನು ಸಾಕ್ಷಾತ್ಪರಬ್ರಹ್ಮನು. ಆದ್ಯಂತವಿಲ್ಲದವನು, ಕರಗಳಿಂದ ಆವರಿಸಲ್ಪಡ ದವನು. ಜಗತ್ತಿನ ಉತ್ಪತ್ತಿಸ್ಥಿತಿಲಯಗಳು ನಿನ್ನಿಂದಲೇ ನಡೆಯುವುವು. ಮೋಕ್ಷಪಯುಕ್ತವಾದ ಜ್ಞಾನಪ್ರದಾನದಿಂದ ಸಕಲಜೀವಾತ್ಮರ ಉಜೀವನಕ್ಕೂ ನೀನೇ ಆಧಾರಭೂತನಾಗಿರುವೆ ! ಇಂದ್ರಿಯಜಯವಿಲ್ಲದವ ರಿಗೆ ನಿನ್ನ ಸ್ವರೂಪವು ಯಾವವಿಧದಿಂದಲೂ ತಿಳಿಯದಿದ್ದರೂ, ಬ್ರಹ್ಮ ಜ್ಞಾನವುಳ್ಳವರು, ಉಚ್ಚಾವಚಗಳಾದ ಸಮಸ್ತಭೂತಗಳಲ್ಲಿಯೂ ಯಥಾ ವಸ್ಥಿತವಾಗಿ ನಿನ್ನನ್ನು ಕಂಡುಕೊಂಡು, ಆ ಮೂಲಕವಾಗಿಯೇ ಉಪಾಸಿಸ ಬಲ್ಲರು. ಹೀಗೆ ಮಹರ್ಷಿಗಳು ತಮ್ಮ ಭಕ್ತಿವೃದ್ಧಿಗಾಗಿ ನಿನ್ನನ್ನು ಯಾವ ಯಾವ ವಸ್ತುಗಳಲ್ಲಿ ಯಾವಯಾವ ವಿಭೂತಿವಿತಿಷ್ಟನಾಗಿರುವುದಾಗಿ ತಿಳಿದು ಉಪಾಸನೆಮಾಡಿ ಭಕ್ತಿಪರಿಪಾಕವನ್ನು ಹೊಂದುವರೊ, ಆ ನಿನ್ನ ವಿಭೂತಿರೂಪವಾದ ಒಂದೊಂದುವಸ್ತುವನ್ನೂ ನನಗೆ ತಿಳಿಸಬೇಕು. ಸಮಸ್ತವಸ್ತುಗಳಲ್ಲಿಯೂ ಗೂಢವಾಗಿದ್ದುಕೊಂಡು, ಅವುಗಳಿಗೆ ಸ್ಥಿತಿಗತಿಗೆ ಳನ್ನು ಕಲ್ಪಿಸತಕ್ಕವನು ನೀನೇ ಆಗಿದ್ದರೂ, ನಿನ್ನೆ ಮಾಯೆಯಿಂದ ಮೋಹಿ ತಗಳಾದ ಭೂತಗಳು ನಿನ್ನನ್ನು ತಿಳಿಯಲಾರವು. ಆದುದರಿಂದ ಕೃಷ್ಣಾ! ಸ್ವರ್ಗ ಮರ್ತ್ಯ ಪಾತಾಳ ಲೋಕಗಳಲ್ಲಿಯೂ, ದಿಕ್ಕುಗಳಲ್ಲಿಯೂ ನಿನಗೆ ವಿ ಭೂತಿರೂಪವಾಗಿರುವ ವಸ್ತುಗಳಲ್ಲಿ ಉತ್ಕೃಷ್ಟವಾದುವುಗಳನ್ನು ನನಗೆ ತಿಳಿಸಬೇಕು ! ಕೃಷ್ಣ! ಪಾದಪ್ರಣಾಮಪೂಕವಾಗಿ ನಿನ್ನನ್ನು ಪ್ರಾ ರ್ಥಿಸುವೆನು” ಎಂದನು. 1601