ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೮ ಶ್ರೀಮದ್ಭಾಗವತವು [ಅಧ್ಯಾ, ೧೬. ಆತ್ಮಾನಾತ್ಮ ವಿವೇಕವಿದ್ಯೆಯೂ, ತಾರ್ಕಿಕರಲ್ಲಿ ವಿಕಲ್ಪವೂ ನಾನಾಗಿರು ವೆನು. ಮತ್ತು ಸ್ತ್ರೀಯರಲ್ಲಿ ಶತರೂಪೆಯೂ, ಪುರುಷರಲ್ಲಿ ಸ್ವಾಯಂಭುವ ಮನುವೂ, ಮುನಿಗಳಲ್ಲಿ ನಾರಾಯಣಮುನಿಯೂ, ಜಿತೇಂದ್ರಿಯರಲ್ಲಿ ಸನ ತುಮಾರನೂ, ಧರಗಳಲ್ಲಿ ಫಲಾಪೇಕ್ಷೆಯಿಲ್ಲದ ಆತ್ಮಭರನ್ಯಾಸವೆಂಬ ಧರವೂ, ಯಾವ ಭಯವೂ ಇಲ್ಲದಂತೆ ಮಾಡುವ ಕ್ಷೇಮ ಕಾವ್ಯಗಳಲ್ಲಿ ಪ್ರತ್ಯ ಗಾತ್ಮಸ್ವರೂಪಾನುಸಂಧಾನವೆಂಬ ಕಾರವೂ ನಾನೇ! ರಹಸ್ಯಗೋಪನ ದಲ್ಲಿ ಪ್ರಿಯವಚನವೂ, ಮೌನವೂ ನಾನಾಗಿರುವೆನು. ಮಿಥುನಗಳಲ್ಲಿ ಪತಿ ಪತ್ರಿ ಯರೇ ಅರ್ಧಾರ್ಥದೇಹವಾಗಿ ಉಳ್ಳ ಪ್ರಜಾಪತಿಯೂ ನಾನೇ! ಅಪ್ಪ ಮತ್ತರಲ್ಲಿ ಸಂವತ್ಸರವೂ, ಮತುಗಳಲ್ಲಿ ವಸಂತವೂ, ಮಾಸಗಳಲ್ಲಿ ಮಾರ್ಗ ಶೀರ್ಷವೂ, ನಕ್ಷತ್ರಗಳಲ್ಲಿ ಅಭಿಜಿತ್ತೂ, ಯುಗಗಳಲ್ಲಿ ಕೃತಯುಗವೂ ನಾನಾ ಗಿರುವೆನು. ಶೀತೋಷ್ಯಾದಿದ್ವಂದ್ವಗಳನ್ನು ಜಯಿಸಿದ ಧೀರರಲ್ಲಿ ಅಸಿತ ದೇವ ಲರೂ, ವೇದವಿಭಾಗಕರ್ತರಲ್ಲಿ ವ್ಯಾಸನೂ, ಸೂಕ್ಷಬುದ್ಧಿಯುಳ್ಳವರಲ್ಲಿ ಶುಕ್ರಾಚಾರನೂ ನಾನೇ ಆಗಿರುವೆನು. ಜ್ಞಾನೈಶ್ವಯ್ಯಾರಿಷಡುಪು ಪೂರ್ಣರಲ್ಲಿ ನಾನೇ ವಾಸುದೇವನು : ಭಗವದ್ಭಕ್ತರಲ್ಲಿ ಉದ್ಯವನೆಂಬ ನೀನೂ ನಾನೇ ! ಮತ್ತು ಕಿಂಪುರುಷರಲ್ಲಿ ಹನುಮಂತನೂ, ವಿದ್ಯಾಧರರಲ್ಲಿ ಸುದರ್ಶನನೂ, ರತ್ನಗಳಲ್ಲಿ ಪದ್ಮರಾಗವೂ ಸುಂದರವಸ್ತುಗಳಲ್ಲಿ ತಾವರೆಯ ಮೊನ್ನೂ, ತೃಣಜಾತಿಗಳಲ್ಲಿ ದರ್ಭವೂ, ಪುರೋಡಾಶ ಮೊದಲಾದ ಹವಿಸ್ಸು ಗಳಲ್ಲಿ ಗೋಸಂಬಂಧವಾದ ಆಜ್ಯವೂ ನಾನೇ ! ಉದ್ಯೋಗಪರರಲ್ಲಿ ಸಂಪತ್ಯ, ಧೂರ್ತರಲ್ಲಿ ಆಗ್ರಹವೂ, ಕ್ಷಮಾಶೀಲರಲ್ಲಿ ತಾಳ್ಮೆಯೂ, ಸಾತ್ವಿಕರಲ್ಲಿ ಸತ್ವಗುಣವೂ, ಓಜಸ್ವಿಗಳಲ್ಲಿ ಓಜಸೂ, ಬಲಾಡ್ಯರಲ್ಲಿ ಬಲವೂ, ಕನಿಷ್ಟರಲ್ಲಿ ಪಾಂಚರಾತ್ರೆಕ್ಕಕರವೂ ನಾನೇ ಮತ್ತಾವತಾರ ಮೊದಲಾದ ಒಂಬತ್ತು ಅವತಾರಗಳಿಗೆ ಮೂಲಕಾರಣವಾದ ಆದಿಮೂ ರ್ತಿಯೂ ನಾನೇ ! ಗಂಧಶ್ವರಲ್ಲಿ ವಿಶ್ವಾವಸುವೂ, ಅಪ್ಪರಸಿಯರಲ್ಲಿ ಪೂರೈ ಚಿತ್ರಿಯೂ ನಾನಾಗಿರುವೆನು. ಪರತಗಳಲ್ಲಿರುವ ಸ್ತ್ರ ವೂ, ಭೂಮಿಯ ಕ್ಲಿರುವ ಗಂಧಗುಣವೂ, ಜಲದಲ್ಲಿರುವ ರಸಗುಣವೂ, ತೇಜಸ್ವಿಗಳಲ್ಲಿರುವ ಸತ್ಯಾಂಶವೂ,ಸೂರ್ ಚಂದ್ರ ನಕ್ಷತ್ರಗಳಲ್ಲಿ ಪ್ರಭೆಯೂ, ಆಕಾಶದಲ್ಲಿ ಶಬ್ದ