ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩೯ ಅಥ್ಯಾ. ೧೩.] ಏಕಾದಶಕ್ಕಂಧನ. ಗುಣವೂ ನಾನೇ ಆಗಿರುವೆನು. ಬ್ರಾಹ್ಮಣಪ್ರಿಯರಲ್ಲಿ ಬಲಿಚಕ್ರವರ್ತಿಯೂ, ವೀರರಲ್ಲಿ ಅರ್ಜುನನೂ ನಾನಾಗಿರುವೆನು. ಸಮಸ್ಯಭೂತಗಳ ಉತ್ಪತ್ತಿ ಸ್ಥಿತಿ ಲಯ ರೂಪವಿಕಾರಗಳೆಲ್ಲವೂ ನಾನೇ ! ದರ್ಶನ, ಸ್ಪರ್ಶನ, ಶ್ರವಣ, ಫಾಣ, ಆಸ್ವಾದನಗಳೆಂಬ ಐದುಜ್ಞಾನೇಂದ್ರಿಯಗಳ ವ್ಯಾಪಾರಗಳೂ, ಗತಿ, ಉಕ್ಕಿ, ಕ್ರಿಯೆ, ವಿರೇಚನ, ರತಿಗಳೆಂಬ ಐದು ಕಿಂದ್ರಿಯವ್ಯಾಪಾರ ಗಳೂ, ಆ ಇಂದ್ರಿಯನಿರಾಹಕನೂ ನಾನೇ ! ಸೃಥಿವಿ ಮೊದಲಾದ ಪಂಚ ಭೂತಗಳೂ, ಇವೆಲ್ಲಕ್ಕೂ ಕಾರಣವಾದ ಮಹತೂ, ಅಹಂಕಾರವೂ, ಈ ಅಹಂಕಾರವಿಕಾರಗಳಾದ ಏಕಾದಶೇಂದ್ರಿಯಗಳೂ, ಸಮಷ್ಟಿಪುರ ಷನೂ, ಅವ್ಯಕ್ತವೆಂಬ ಪ್ರಧಾನವೂ ನಾನೇ! ರಜಸ್ಸತ್ವ ತಮೋಗುಣಗಳೂ, ಈ ಗುಣಗಳನ್ನು ಅತಿಕ್ರಮಿಸಿದ ಮುಕ್ತಾತ್ಮಸ್ವರೂಪವೂ ನಾನೇ ! ಈ ಎಲ್ಲಾ ತತ್ವಗಳ ಲಕ್ಷಣಜ್ಞಾನವೂ, ಆ ಜ್ಞಾನಕ್ಕೆ ಫಲಭೂತವಾದ ತತ್ವ ಜ್ಞಾನವೂ ನಾನೇ ಆಗಿರುವೆನು. ಉದ್ದವಾ! ಮುಖ್ಯವಾಗಿ ಎಲ್ಲಕ್ಕೂ ಅಂತ ಲ್ಯಾಮಿಯಾಗಿ ನಿಯಮಿಸತಕ್ಕ ಸರೋಶ್ವರನಾದ ನಾನ ನನಗೆ ಶರೀರಭೂತ ನಾದ ಜೀವನೂ, ಸತ್ಪಾದಿಗುಣಗಳೂ, ಆ ಗುಣಗಳಿಗೆ ಆಶ್ರಯವಾಗಿ ಸತ್ವ ಕಾರಸ್ವರೂಪವಾಗಿಯೂ ಇರುವ ಆಚಿದ ವ್ಯಳೂ,ಇವಹೊರತು ಬೇರೆ ವಸ್ತುವೇ ಇಲ್ಲ. ಎಂದರೆ ಮೊತ್ತಕ್ಕೆ ಜಗತ್ತೆಲ್ಲವೂ ಚಿತ್ತು, ಅಚಿತ್ತು, ಈ ಶ್ವರರೆಂಬ ಮೂರು ತತ್ವಗಳಾಗಿರುವುದು. ಇವುಗಳಲ್ಲಿ ಚಿದಚಿತ್ತಗಳೆರಡೂ ಮದಾತ್ಮಕಗಳಾಗಿ ನನ್ನ ನಿಯಮಕ್ಕೆ ಒಳಪಟ್ಟಿರುವುವು. ಒಂದುವೇಳೆ ಸರಶಕ್ತನಾದ ನಾನೇ ಪ್ರವರ್ತಿಸಿದರೂ,ಭೂಮಿಯಲ್ಲಿರುವ ಪರಮಾಣುಗ ಳ ಸಂಖ್ಯೆಯನ್ನಾದರೂ ಕಂಡುಹಿಡಿಯಬಹುದೇಕೊರತು, ನನ್ನ ವಿಭೂತಿಗೆ ಇನ್ನು ನಾನೂ ಪ್ರತ್ಯೇಕಿಸಿ ಲೆಕ್ಕವಿಟ್ಟು ಹೇಳಲಾರೆನು. ನಾನು ಸೃಷ್ಟಿಸಿದ ಬ್ರಹ್ಮಾಂಡಗಳೇ ಕೋಟೆಕೊಟಸಂಖ್ಯೆಯಿಂದಿರುವವು. ಉದ್ಯವಾ! ವರ್ಚ ಸ್ಸು, ಕಾಂತಿ, ಕೀರ್ತಿ,ಸಂಪತ್ತು, ಲಜ್ಜೆ, ತ್ಯಾಗ,ಸೌಂದಯ್ಯ,ಭಾಗ್ಯ,ಪೀರಿಕ್ಷಾಂ ತಿ, ತತ್ವಜ್ಞಾನ, ಯುಕ್ತಾಯುಕ್ತ ವಿವೇಚನೆ, ಈ ಗುಣಗಳೆಲ್ಲಿ ಕಾಣುವು ವೋ, ಅವೆಲ್ಲವೂ ನನ್ನ ವಿಭೂತಿಗಳೆಂದೂ, ಅಲ್ಲಿ ನನ್ನ ಅ೦ಶವುಂಟೆಂದೂ ತಿಳಿ! ನಿನಗೆ ನನ್ನ ವಿಭೂತಿಗಳನ್ನು ಸಂಕ್ಷೇಪವಾಗಿ ತಿಳಿಸಿದುದಾಯಿತು. ಇವೆಲ್ಲವೂ