ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೪೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೪೧ ಅಧ್ಯಾ, ೧೬.] ಏಕಾದಶಸ್ಕಂಧವು. ಗಳನ್ನು ಪದೇಶಿಸತಕ್ಕವನೂ, ನಡೆಸತಕ್ಕವನೂ, ಅದನ್ನು ಕಾಪಾಡತಕ್ಕವ ನೂ ನಿನಗಿಂತಲೂ ಬೇರೊಬ್ಬನು ದೊರೆಯಲಾರನು. ಭೂಲೋಕದ ಮಾತು ಹಾಗಿರಲಿ ! ವಿದ್ಯೆಗಳೆಲ್ಲವೂ ಶರೀರವತ್ತಾಗಿ ನೆಲೆಗೊಂಡಿರುವ ಬ್ರ ಹ್ಯ ಸಭೆಯಲ್ಲಿಯಾದರೂ, ನಿನ೦ತೆ ಧರೋಪದೇಶಕನು ಮತ್ತೊಬ್ಬನು ಸಿಕ್ಕಲಾರನು. ಹೀಗೆ ಸಮಸ್ತಧರಗಳಿಗೂ ಉಪದೇಶಕನೂ, ನಿರಾಹ ಕನೂ, ರಕ್ಷಕನೂ ಆದ ನೀನೇ ಈ ಲೋಕವನ್ನು ಬಿಟ್ಟು ಹೊರಟುಹೋ ದಮೇಲೆ, ನಿನ್ನೊಡನೆ ಆ ದೃಶ್ಯಗಳೂ ನಷ್ಟವಾದಂತೆಯೇ ಹೊರತು, ಅವು ಗಳನ್ನು ಪದೇತಿಸತಕ್ಕವನಾವನುಂಟು ? ಆದುದರಿಂದ ನಿನ್ನ ಭಕ್ತಿಗೆ ಅ೦ ಗಗಳಾದ ಆ ದೃಶ್ಯಗಳು ಯಾವಯಾವ ವರ್ಣಾಶ್ರಮಿಗಳಿಗೆ, ಯಾವ ಯಾವ ರೀತಿಯಿಂದ ವಿಧಿಸಲ್ಪಟ್ಟಿರುವುವೋ, ಅದನ್ನು ನೀನೇ ಈಗ ನನಗೆ ಉಪದೇಶಿಸಬೇಕು”? ಎಂದನು. ಉದ್ಯವನ ಪ್ರಶ್ನೆ ಯನ್ನು ಕೇಳಿ ಕೃಷ್ಣನು ಸಂತೋಷಗೊಂಡವನಾಗಿ, ಲೋಕಕ್ಷೇಮಕ್ಕಾಗಿ ಆ ಸನಾತನಧಮ್ಮಗಳ ನ್ನೆಲ್ಲಾ ಹೀಗೆಂದು ವಿವರಿಸತೊಡಗಿದನು, (ಉದ್ಧವಾ! ಈಗ ನೀನು ಕೇಳಿದ ಪ್ರಶ್ನವು ಧರಯುಕ್ತವಾದು ದು, ಇದರಿಂದ ಆಯಾವರ್ಣಾಶ್ರಮಧರಗಳಲ್ಲಿರತಕ್ಕ ಸಮಸ್ತ ಜನರಿಗೂ ಶ್ರೇಯಸ್ಸುಂಟು. ಆದುದರಿಂದ ಅವುಗಳನ್ನೆಲ್ಲಾ ವಿವರಿಸುವೆನು ಕೇಳು ! ಮೊಟ್ಟಮೊದಲಿನ ಕೃತಯುಗದಲ್ಲಿ, ಈಗಿನಂತೆ ವರ್ಣಭೇದಗಳಿಲ್ಲದೆ, ಮನು ಷ್ಯರೆಲ್ಲರೂ ಹಂಸವೆಂಬ ಒಂದೇ ವರ್ಣದವರಾಗಿದ್ದರು. ಹಂಸವೆಂಬುದು ಬ್ರಾಹ್ಮಣ್ಯವೇ ಹೊರತು ಬೇರೆಯಲ್ಲ ! ಆಗಿನ ಜನರೆಲ್ಲರೂ ಆ ವರ್ಣಮಾ ತ್ರದಿಂದಲೇ ಕೃತಕೃತ್ಯರಾಗಿದ್ದುದರಿಂದ, ಆ ಯುಗಕ್ಕೆ ಕೃತಯುಗವೆಂದು ಹೆಸರಾಯಿತು. ಆಗಿನ ವೇದವ್ರ ಪ್ರಣವವೊಂದೇ ಹೊರತು, ಋಗ್ಯಜುಸ್ಸಾ ಮಗಳೆಂಬ ವಿಭಾಗಗಳಿಲ್ಲ ! ನನ್ನ ಉಪಾಸನವೊಂದೇ ಆಗಿನ ಧರವಾಗಿತ್ತೇ ಹೊರತು ಯಜ್ಞಾದಿಕರಗಳಿಲ್ಲ. ಆಗ ಧರಮಯವಾದ ನನ್ನ ರೂಪವು ನಾಲ್ಕು ಪಾದಗಳಿಂದ ನಿಂತ ವೃಷಭಾಕೃತಿಯಿಂಹಿದ್ದಿತು. ಆದುದರಿಂದ ಆಗಿನವರೆಲ್ಲರೂ ಕೇವಲಯೋಗನಿಷ್ಠರಾಗಿ, ಹಂಸ(ಶುದ್ಧ) ನಾದ ನನ್ನನ್ನು ಉಪಾಸಿಸುತಿದ್ದರು. ಅದರಿಂದ ಅವರೂ ನನ್ನಂತೆಯೇ ಹಂಸ (ಶುದ್ಧ) ಆನಿ