ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೪ ಶ್ರೀಮದ್ಭಾಗವತವು ಅಧ್ಯಾ, ೧೭, ಜಟೆಯನ್ನು ಬೆಳೆಸಬೇಕು. ಹಲ್ಲುಗಳನ್ನಾಗಲಿ, ವಸ್ತ್ರಗಳನ್ನಾಗಲಿ ವಿಶೇದ ವಾಗಿ ಬೆಳಗಬಾರದು. ಆಶೆಗಾಗಿ, ಹಳದಿ, ಕೆಂಪು ಮೊದಲಾದ ರಂಗಿನ ಬಟ್ಟೆಗಳನ್ನು ಡಬಾರದು, ದರ್ಭಗಳನ್ನು ಧರಿಸಬೇಕು. ಸ್ನಾನ, ಭೋಜನ, ಜಪ, ಹೋಮಾದಿಕಾಲಗಳಲ್ಲಿ ಇತರರೊಡನೆ ಮಾತಾಡದೆ, ಮೌನದಿಂದ ನಡೆಸಬೇಕು. ಮಲಮೂತ್ರೋತ್ಸರ್ಜನಕಾಲಗಳಲ್ಲಿಯೂ ಮೌನಿಯಾಗಿರ ಬೇಕು. ತನ್ನ ದೇಹದಲ್ಲಿರುವ ಕೂದಲುಗಳನ್ನಾಗಲಿ, ಉಗುರುಗಳನ್ನಾಗಲಿ ಕಿತ್ತು ಹಾಕಬಾರದು. ಯಾವಾಗಲೂ, ಯಾವ ಕಾರಣದಿಂದಲೂ, ತನ್ನ ರೇತಸ್ಸನ್ನು ಚೆಲ್ಲಬಾರದು. ಒಂದುವೇಳೆ ಆಕಸ್ಮಿಕವಾಗಿ ಅಂ ತಹ ಸಂದರ್ಭವು ತಾನಾಗಿ ನಡೆದು ಹೋದರೆ, ಒಡನೆಯೇ ಸ್ನಾನಮಾಡಿ, ಪ್ರಾಣಾಯಾಮಪೂರೈಕವಾಗಿ, ಸಾವಿರದೊಂದಾವರ್ತಿ ಗಾಯತ್ರಿಯನ್ನು ಜಪಿಸಬೇಕು. ಬ್ರಹ್ಮಚಾರಿಯು ಪ್ರಾತಸ್ಸಾಯಂಕಾಲಗಳೆಂಬ ಎರಡು ಸಂಧ್ಯಗಳಲ್ಲಿಯೂ ಸ್ನಾನಮಾಡಿ ಶುಚಿಯಾಗಿ, ಆಗ್ನಿ ಯನ್ನೂ , ಸೂರಿನ ನ್ಯೂ , ಆಚಾರನನ್ನೂ, ಗೋವುಗಳನ್ನೂ, ಬ್ರಾಹ್ಮಣರನ್ನೂ ಗುರುವೃದ್ಧಿ ರನ್ನೂ, ಇಷ್ಟದೇವತೆಗಳನ್ನೂ ಉಪಾಸಿಸಬೇಕು. ಎರಡುಸಂಧ್ಯೆಗಳಲ್ಲಿ ಯೂ ಮನಸ್ಸಮಾಧಾನದಿಂದಲೂ, ಮೌನದಿಂದಲೂ ಗಾಯತ್ರಿಯನ್ನು ಜಪಿಸಬೇಕು. ಬ್ರಹ್ಮಚಾರಿಯು ಆಚಾಯ್ಯನನ್ನು ನನ್ನ ರೂಪದಿಂದಲೇ ಭಾ ವಿಸಬೇಕು. ಎಂತಹ ಸಂದರ್ಭದಲ್ಲಿಯೂ ಆ ಆಚಾರನನ್ನು ತಿರಸ್ಕರಿಸ ಬಾರದು. ಗುರುವು ಸರದೇವಮಯನಾದುದರಿಂದ, ಅವನನ್ನು ಸಾಮಾನ್ಯ ಮನುಷ್ಯಭಾವದಿಂದಲೂ ತಿಳಿಯಬಾರದು. ಪ್ರಾತಸ್ಸಾಯಂಕಾಲಗಳೆರಡ ರಲ್ಲಿಯೂ ಗುರುವನ್ನು ಉಪಾಸಿಸುತ್ತ,ತಾನು ಭಿಕ್ಷೆಬೇಡಿ ತಂದ ಅನ್ನವನ್ನಾ ಗಲಿ, ಇತರ ಪದಾರವನ್ನಾಗಲಿ, ಮೊದಲು ಆ ಗುರುವಿನ ಮುಂದಿಟ್ಟು, ಅವನ ಅನುಜ್ಞೆಯನ್ನು ಪಡೆದಮೇಲೆ, ತಾನು ಅದನ್ನು ಪ್ರಯೋಗಿಸಿಕೊಳ್ಳ ಬೇಕು. ಗುರುವಿನಮುಂದೆ ಬಹಳ ಮಾತಾಡದೆ, ದಾಸನಂತೆ ಅವನನ್ನು ಯಾವಾಗಲೂ ಉಪಚರಿಸುತ್ತಿರಬೇಕು. ಆಚಾಲ್ಯನು ಬೇರೆಲ್ಲಿಗಾದರೂ ಹೊರಟಾಗಲೂ, ಅವನು ಮಲಗಿದಾಗಲೂ, ನಿಂತಾಗಲೂ; ಕುಳಿತಾಗಲೂ ಅವನ ಆಜ್ಞೆಯನ್ನು ನಿರೀಕ್ಷಿಸುತ್ತ, ಅವನ ಹಿಂದೆ ಕೈಕಟ್ಟಿಕೊಂಡು ಸ್ವಲ್ಪ