ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೯ ಅಧ್ಯಾ, ೧೬.] ಏಕಾದಶಸ್ಕಂಧವು. ಖವೆಂದೂ, ತತ್ವಜ್ಞಾನದಿಂದ ತಿಳಿಯಬೇಕು. ಹೆಂಡಿರು, ಮಕ್ಕಳು, ನಂಟ ರು, ಇಷ್ಟರು, ಎಂಬೀ ಕೂಡಾಟಗಳೆಲ್ಲವೂ, ಅನ್ನ ಸತ್ರಗಳಲ್ಲಿ ಸೇರಿದ ಪ್ರ ಯಾಣಿಕರ ಸ್ನೇಹದಂತೆ, ಅಲ್ಪಕಾಲದ ಕೂಡಾಟಗಳೇ ಹೊರತು ಬೇರೆ ಯಲ್ಲ. ಈ ಕೂಡಾಟಗಳು. ಆಯಾದೇಹವಿರುವವರೆಗೆಮಾತ್ರವೇ ! ನಿದ್ರೆ ಬಂದಾಗಲೇ ಕನಸು! ಆ ನಿದ್ರೆಯು ಬಿಟ್ಟು ಹೋದಮೇಲೆ ಕನ ಸಿಲ್ಲವಷ್ಟೆ! ಹಾಗೆಯೇ ದೇಹವಿದ್ದಾಗಲೇ ಈಸಂಬಂಧಗಳು! ದೇಹವು ಹೋ ದಮೇಲೆ ಅವೂ ಬಿಟ್ಟು ಹೋಗುವುವು. ಗೃಹಸ್ಥನು ಈ ವಿಚಾರವನ್ನು ಚೆನ್ನಾಗಿ ಪರಿಶೀಲಿಸಿ ತಿಳಿದು, ತನ್ನ ಮನೆಯಲ್ಲಿಯೂ ತನೊಬ್ಬ ಆಗಂತುಕ ನಂತೆಯೇ ಉದಾಸೀನನಾಗಿರಬೇಕು. ಆಹಂಕಾರಮಮಕಾರಗಳನ್ನು ಸಂ ಪೂರ್ಣವಾಗಿ ತ್ಯಜಿಸಬೇಕು. ಗೃಹಸ್ಥನಿಗೆ ವಿಹಿತಗಳಾದ ಯಜ್ಞಾಹಕರಗ $೦ದ ನನ್ನನ್ನಾ ರಾಧಿಸುತ್ತ, ಯಾವಜೀವವೂ ಆ ಗೃಹಾಶ್ರಮದಲ್ಲಿಯೇ ಇದ್ದರೂ ಇರಬಹುದು. ಇಲ್ಲವೇ ಪುತ್ರವಂತನಾದವನು ವಾನಪ್ರಸ್ಥಾಶ್ರ ಮವನ್ನಾಗಲಿ, ಸನ್ಯಾಸವನ್ನಾಗಿ ಸ್ವೀಕರಿಸಬಹುದೆ.. ಯಾವನು ಕು Kಂಬಿಯಾಗಿರುವಾಗ, ಮನೆಮಂದಿ ಮಕ್ಕಳಲ್ಲಿ ಮೋಹತುರನಾಗಿ, ಸಿ ವಶ್ಯವಾಗಿರುವನೋ, ಅವನು ಅಹಂಕಾಮಮಕಾರಗಳoದ ಬಗೆಟ್ಟು ಸಂಸಾರಬಂಧದಲ್ಲಿ ಕೌಶಪಡುವನು. ಇಂತವನು ಆಗಾಗ ತನ್ನ ಮನಸ್ಸಿ ನಲ್ಲಿ ಅಯ್ಯೋ ! ನಾನು ಹೋದಮೇಲೆ ಈ ಮಕ್ಕಳ ಗತಿಯೇನು ? ಈ ಹೆಂಡತಿಯ ಗತಿಯೇನು ? ವೃದ್ಧರಾದ ಈ ತಂದೆತಾಯಿಗಳ ಗತಿಯೇನು ? ನಾನಿಲ್ಲದಮೆಲೆ ಇವರು ಬದುಕುವ ಬಗೆಯೇನು ? ಇವರೆಲ್ಲರ ದಿಕ್ಕಿಲ್ಲದೆ ಅಲೆಯವರಲ್ಲಾ” ಎಂದು ಸಂಕಟದಿಂದ ಕೊರಗುತ್ತ, ಒಬ್ಬಗೆಟ್ಟು, ಎಷ್ಟೆಷ್ಟು ಅನುಭವಿಸಿದರೂ ವಿಷಯಭೋಗಗಳಲ್ಲಿ ತೃಪ್ತಿಯಿಲ್ಲದೆ, ಸಾಯ ವಾಗಲೂ ಆ ಗ್ರಹಾದಿಗಳನ್ನೇ ಸ್ಮರಿಸುವುದರಿಂದ, ಮೃತನಾದಮೇಲೆ ಯೂ ತಿರುಗಿ ತಾಮಸಜನ್ಮವನ್ನೇ ಹೊಂದುವನು. ಇದು ಹದಿನೇಳನೆಯ ಅಧ್ಯಾಯವು.