ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೦೦೦ ಶ್ರೀಮಬ್ಬಾಗವತನ [ಅಣ್ಯ. ೧೮. + ವಾನಪ್ರಸ್ಥ ಸನ್ಯಾಸಾಶ್ರಮಗಳು, ಉದ್ದವಾ ! ವಾನಪ್ರಸ್ಥಧರವನ್ನು ಹಿಡಿಯತಕ್ಕವನು, ತನ್ನ ಪತ್ನಿ ಯನ್ನು ತನ್ನ ಪುತ್ರರ ವಶದಲ್ಲಿ ಬಿಟ್ಟಾಗಲಿ, ಇಲ್ಲವೇ ಅವಳನ್ನೂ ತನ್ನೊಡನೆ ಕರೆದುಕೊಂಡಾಗಲಿ ವನಕ್ಕೆ ಹೋಗಿ, ತನ್ನ ನೂರುವರ್ಷಗಳ ಆಯುಃ ಪರಿ ಮಿತಿಯಲ್ಲಿ ಮೂರನೆಯ ಭಾಗವನ್ನೆಲ್ಲಾ ಎಂದರೆ, ಎಪ್ಪತ್ತೈದುವರ್ಷಗಳ ವರೆಗೂ ಆ ವನದಲ್ಲಿಯೇ ಜಿತೇಂದ್ರಿಯನಾಗಿ ಕಾಲವನ್ನು ಕಳೆಯಬೇಕು. ಅದರಿಂದಾಚೆಗೆ ವಿರಕ್ತನಾಗಿ ಸನ್ಯಾಸವನ್ನು ಪರಿಗ್ರಹಿಸಬಹುದು. ವಾನ ಪ್ರಸ್ಯವನ್ನು ಹಿಡಿದವನು, ಕಾಡಿನಲ್ಲಿ ಬೆಳೆದ, ಮತ್ತು ಶಾಸ್ತನಿಷಿದ್ಧಗಳಲ್ಲದ, ಗಡ್ಡೆ, ಗೆಣಸು, ಹಣ್ಣು ಮೊದಲಾದುವುಗಳಿಂದಲೇ ಜೀವನಮಾಡಬೇಕು. ನಾರುಬಟ್ಟೆಯನ್ನಾಗಲಿ, ಅದು ಸಿಕ್ಕದಿದ್ದರೆ, ಹುಲ್ಲು, ಎಲೆ, ಕೃಷ್ಣಾಜಿನ ಗಳನ್ನಾಗಲಿ ವಸ್ತ್ರವಾಗಿ ಧರಿಸಬೇಕು. ತಲೆಕೂದಲು, ಮೈಕೂದಲು, ಉಗುರು, ಮೀಸೆ, ಮುಂತಾದ ಮೊಲಗಳನ್ನು ಮೈಯಿಂದ ಕಿತ್ತು ಹಾಕಬಾ ರದು. ಹಲ್ಲುಗಳನ್ನು ಜಬಾರದು. ತ್ರಿಕಾಲಸ್ಕಾ ವಮಾಡುತ್ತ ಹುಲ್ಲುಸೆಲದ ಮೇಲೆಯೇ ಮಲಗಬೇಕು. ಬೇಸಗೆಯಲ್ಲಿ ಪಂಚಾಗ್ನಿ ಮಧ್ಯದಲ್ಲಿ ಕುಳಿತು ತಪಸ್ಸು ಮಾಡಬೇಕು. ಮಳೆಗಾಲದಲ್ಲಿ ಮಳೆಯಲ್ಲಿಯೇ ಕುಳಿತಿರಬೇಕು. ಚಳಿಗಾಲದಲ್ಲಿ ಕಂಠಪರಂತವಾಗಿ ಕೊಳದಲ್ಲಿಳಿದು ತಪಸ್ಸು ಮಾಡಬೇಕು. ಬೆಂಕಿಯಲ್ಲಿ ಪಕ್ಷ ಮಾಡಿದ ಕಂದಮಲಗಳನ್ನಾಗಲಿ, ಕಾಲದಿಂದ ತಾ ನಾಗಿ ಮಾಗಿಬಿದ್ದ ಹಣ್ಣುಗಳನ್ನಾಗಲಿ ಭುಜಿಸಬೇಕು. ಧಾನ್ಯದ ಕಾಳು ಗಳನ್ನು ಒರಳಿನಲ್ಲಿಯಾಗಲಿ, ಬೇರೆ ಕಲ್ಲುಗಳಿಂದಾಗಲಿ ಪಡಿಮಾಡಿ ಭುಜಿಸ ಬೇಕು. ಯಾವ ಸಾಧನಗಳೂ ದೊರೆಯದಿದ್ದಾಗ ಹಲ್ಲುಗಳಿಂದಲೇ ಹಿಟ್ಟು, ಮಾಡಿ ತಿನ್ನಬೇಕು. ತನ್ನ ಜೀವನಕ್ಕೆ ಬೇಕಾದ ಕಂದಮೂಲಾದಿಗಳನ್ನು ತಾನೇ ಹೋಗಿ ಸಂಪಾದಿಸಿಕೊಂಡು ಬರಬೇಕು. ಆಗಾಗಿನ ಆಹಾರಗಳನ್ನು ಆಗಾಗಲೇ ಸಂಗ್ರಹಿಸಿತಂದು ಭುಜಿಸಬೇಕೇ ಹೊರತು, ದೇಶಕಾಲ ಸ್ಥಿತಿಯ ಬಲಾಬಲವನ್ನು ತಿಳಿದು ಮುಂದಾಗಿ ಸಂಗ್ರಹಿಸಿಟ್ಟುಕೊಳ್ಳ ಬಾರದು. ಕಾಲಾಂತರದಲ್ಲಿ ತಂದುದನ್ನು ಭುಜಿಸಲೇಬಾರದು, ವಾನಪ್ಪ ಸದಲ್ಲಿರುವವನು, ಕಾಡಿನಲ್ಲಿ ಬೆಳೆದ ನೀವಾರಾದಿಗಳಿಂದಲೇ ಕಾಲೋಚಿತಗ