ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೫೧ ಅಧ್ಯಾ, ೧೮.] ಏಕಾದಶಸ್ಕಂಧವು. ಳಾದ ಚರುಪುರೋಡಾಶಾದಿಗಳನ್ನು ಕಲ್ಪಿಸಿ ನನ್ನನ್ನು ಯಜಿಸಬೇಕಲ್ಲದೆ, ಶ್ರುತಿಪ್ರೋಕ್ತವಾದ ಪಶುಯಾಗದಿಂದ ಯಜಿಸಬಾರದು. ವೇದವಾಕ್ಯಗಳಲ್ಲಿ ಮುನಿಗಳಿಗೂ ಅವಶ್ಯ ಕರ್ತವ್ಯಗಳೆಂದು ವಿಧಿಸ ಲ್ಪಟ್ಟಿರುವ, ಅಗ್ನಿ ಹೋತ್ರ, ದರ್ಶ, ಪೌರ್ಣಮಾಸ, ಚಾತುರಾಸ್ಯ, ಮೊ ದಲಾದ ಕರಗಳನ್ನು ವಾನಪ್ರಸ್ಥನೂ ತಪ್ಪದೆ ನಡೆಸುತ್ತ ಬರಬೇಕು. ಹೀಗೆ ವಾನಪ್ರಸ್ಥಾಶ್ರವಿಯಾದ ಮುನಿಯು, ಮೈಯಲ್ಲಿ ನರಗಳೇಳುವಂತೆ ದೇಹ ವನ್ನು ದಂಡಿಸಿ, ಜೀವಾವಧಿ ದೃಢತಪಸ್ಸಿನಿಂದ ನನ್ನ ನಾರಾಧಿಸಿದರೆ, ಋಷಿಲೋಕವನ್ನೂ ದಾಟಿ, ನನ ಸಾನ್ನಿಧ್ಯವನ್ನು ಹೊಂದುವನು. ಇದೇ ವ್ರತವನ್ನು ಫಲಾಪೇಕ್ಷೆಯಿಂದ ಮಾಡಿದವನು, ಋಷಿಲೋಕದಲ್ಲಿಯೇ ನಿಂತುಹೋಗುವನು. ಬಹಳ ಕಷ್ಟಸಾಧ್ಯವಾದ ಈ ತಪಸ್ಸು ಉತ್ತಮ ಪುರುಷಾರ್ಥವಾದ ಮೋಕ್ಷಕ್ಕೆ ಸಾಧನವಾಗಿರುವಾಗ, ಅಲ್ಪಫಲಕ್ಕಾಗಿ ಅದನ್ನು ಪಯೋಗಿಸುವವನಿಗಿಂತಲೂ ಮೂಢನಾವನುಂಟು ? ವಾನಪ್ರಸ್ಥ ದಲ್ಲಿರುವವನು, ಜರೆಯಿಂದ ಜೀರ್ಣನಾಗಿ, ಮೈಯಲ್ಲಿ ನಡುಕವುಂಟಾಗು ವುದರಿಂದ ಸ್ವಧರೆಗಳನ್ನು ನಡೆಸುವುದಕ್ಕೆ ಅಶಕ್ತನಾದಾಗ, ಆಹವನೀ ಯವೇ ಮೊದಲಾದ ಆಗ್ರಿಗಳನ್ನು ಹೃದಯದಲ್ಲಿ ಆತ್ಮ ಸಮಾ ರೋಹಣ ಮಾಡಿಕೊಂಡು, ಅಗ್ನಿ ಪ್ರವೇಶವನ್ನು ಮಾಡಿ ದೇಹವನ್ನು ತ್ಯಜಿಸಬೇಕು. ಉದ್ದವಾ ! ಇನ್ನು * ಸನ್ಯಾಸಧರಗಳನ್ನು ತಿಳಿಸುವೆನು ಕೇಳು. ಸ್ವರ್ಗಾದಿಲೋಕಗಳು ಕರ ಫಲದಿಂದಲೇ ಅಭಿಸತಕ್ಕವುಗಳಾದುದರಿಂದ ಅವೂ ನರಕಪ್ರಾಯಗಳೆ!ಏಕೆಂದರೆ, ಇವೆಲ್ಲವೂ ಮೋಕ್ಷಕ್ಕೆ ಪ್ರತಿಬಂಧಕಗೆ ಳು. ಈ ತತ್ವವನ್ನು ತಿಳಿದು, ಸ್ವರ್ಗಾದಿಸುಖಗಳಲ್ಲಿ ಏರಕಿಹೊಂ ದಿದವನು, ಒಡನೆಯೇ ಸನ್ಯಾಸಾಶ್ರಮವನ್ನು ಪರಿಗ್ರಹಿಸಿ, ಸತ್ವ ಸಂಗ ಪರಿತ್ಯಾಗಮಾಡಿ ಹೊರಡಬೇಕು. ಹೀಗೆ ಸನ್ಯಾಸಾಶ್ರಮವನ್ನು ಪರಿಗ್ರಹಿ

  • ಇಲ್ಲಿ ಕುಟೀಚಕ, ಬಹೂದಕ, ಹಂಸ, ಪರಮಹಂಸರೆಂಬ ನಾಲ್ಕು ಬಗೆಯ ಯತಿಗಳು, ಅವರು ಅನುಸರಿಸಬೇಕಾದ ಸಾಧಾರಣಧರ ಗಳ ನಿರೂಪಿಸಲ್ಪಡು ವುವೆಂದು ಗ್ರಾಹ್ಯವು,

. . , - ---- -- > -- -- -- -- B 161