ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೨ ಶ್ರೀಮದ್ಭಾಗವತವು ಅಧ್ಯಾ, ೧೮. ಸತಕ್ಕವನು, ಮೊದಲು ಯಥಾವಿಧಿಯಾಗಿ ಅಷ್ಟಶ್ರಾದ್ಯಗಳನ್ನು ಮಾಡಿ, ಪ್ರಾಜಾಪತ್ಯವೆಂಬ ಇಷ್ಟಿಯಿಂದ ನನ್ನನ್ನು ಆರಾಧಿಸಿ, ಸರಸ್ವವನ್ನೂ ಋತ್ವಿಕ್ಕುಗಳಿಗೆ ಹಂಚಿಕೊಟ್ಟು, ಗೃಹಸ್ಥನಾಗಿದ್ದರೆ ಅಗ್ನಿಗಳನ್ನು ಆತ್ಮ ಸಮಾರೋಪಣಮಾಡಿಕೊಂಡು, ನನ್ನನ್ನು ಹೊರತು ಬೇರೆಯಾವ ಚಿಂತೆ ಯನ್ನೂ ಮನಸ್ಸಿನಲ್ಲಿಟ್ಟುಕೊಳ್ಳದೆ, ಸನ್ಯಾಸಿಯಾಗಿ ಹೊರಡಬೇಕು. ಸ ನ್ಯಾಸಿಯಾಗಿ ಸ್ವಧುವನ್ನು ತಪ್ಪದೆ ನಡೆಸುವವನಿಗೆ ಮೋಕ್ಷವು ಕರಗತ ಪಾಯವು. ಇಂತವನನ್ನು ಕಂಡಾಗ ದೇವತೆಗಳಿಗೂ ಅಸೂಯೆ ಹುಟ್ಟ ವುದು. ಆದುದರಿಂದ ಬ್ರಾಹ್ಮಣನು ಸನ್ಯಸಿಸುವಾಗ, ದೇವತೆಗಳ ಪತ್ರ ಕಳತ್ರಬಾಂಧವಾದರೂಪಂದ ಕಾಣಿಸಿಕೊಂಡು, ಅವನನ್ನು ನಿರ್ಬಂಧಿಸಿ, ಅವನ ಪ್ರಯತ್ನಕ್ಕೆ ಎಷ್ಟು ಗಳನ್ನು ಮಾಡುವರು. ಸಿಜವಾದ ಸನ್ಯಾಸಿ ಯಾಗಿದ್ದರೆ, ಅವೊಂದನ್ನೂ ಗಮನಿಸದೆ, ಕೌಪೀನವೊಂದೇ ತನ್ನ ಸರಸ್ವ ವೆಂದು ತಿಳಿದು, ಅದನ್ನು ಮಾತ್ರ ಧರಿಸಿ ಹೊರಡಬೇಕು ಯತಿಯು ತನಗೆ ಆ ಪತ್ತಿನ ಸಂದರ್ಭದಲ್ಲಿ ಹೊರತು, ದಂಡವೊಂದು, ಕಮಂಡಲವೊಂದು ಇವೆ ರಡನ್ನಲ್ಲದೆ ಉಳಿದುದನ್ನೆ ಲಾ ಬಿಟ್ಟು ಬಿಡಬೇಕು. ಮೊದಲು ಚೆನ್ನಾಗಿ ದೃ ಷ್ಟಿಯಿಟ್ಟು ನೋಡಿ ಶುದ್ಧವಾದ ಸ್ಥಳದಲ್ಲಿ ಕಾಲಿಡಬೇಕು. ಬಟ್ಟೆಯಿಂ ದ ಸೋಸಿದ ನೀರನ್ನೇ ಕುಡಿಯಬೇಕು. ಸತ್ಯವಾದ ಮಾತನ್ನೇ ನುಡಿಯಬೇ ಕು, ಮನಸ್ಸಿನಿಂದ ಯೋಚಿಸಿ ನಿಷ್ಕಲ್ಮಷವಾದ ಕಾರೈವನ್ನೆ ನಡೆಸಬೇ ಕು, ಉದ್ದವಾ ! ಮನಸ್ಸು, ವಾಕ್ಕು, ಕಾಯಗಳೆಂಬ ತ್ರಿಕರಣಗಳಿಗೂ ಕ್ರಮವಾಗಿ, ಪ್ರಾಣಾಯಾಮ, ಮೌನ, ಕಾಮ್ಯಕರ ತ್ಯಾಗಗಳೆಂಬಿವು ಮೂರೂ ದಂಡನಗಳೆನಿಸುವುವು. ಈ ವಿಧವಾದ ದಂಡನಗಳಿಂದ ತಿಕರಣ ಗಳನ್ನೂ ಸ್ವಾಧೀನದಲ್ಲಿಡದವನು ಯತಿಯೆನಿಸಲಾರನು. ಬಿದಿರುಕೋಲನ್ನು ಕೈಯಲ್ಲಿ ಹಿಡಿದಮಾತ್ರದಿಂದಲೇ ಸನ್ಯಾಸಿಯೆನಿಸಲಾರೆನು ಸನ್ಯಾಸಿಯು ನಾಲ್ಕು ವರ್ಣದವರಲ್ಲಿಯೂ ಭಿಕ್ಷೆಯನ್ನಾಚರಿಸಬಹುದು ಆದರೆ ಅವರಲ್ಲಿ ಪತಿತರಾದವರಿಂದಮಾತ್ರ ಸ್ವೀಕರಿಸಬಾರದು. ಒಂದೊಂದುವೇಳೆಗೆ ತನಗೆ ತೋರಿದ ಏಳುಮನೆಗಳಲ್ಲಿಮಾತ್ರ ಭಿಕ್ಷೆಯನ್ನು ಯಾಚಿಸಬಹುದು. ತಾನು ಭಿಕ್ಷೆಗೆ ಹೋಗತಕ್ಕ ಮನೆಗಳನ್ನು ಮುಂದಾಗಿ ನಿರ್ಣಯಿಸಿಕೊಳ್ಳ