ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨a ಅಧ್ಯಾ. ೧೮.] ಏಕಾದಶಸ್ಕಂಧವು. ಬಾರದು. ಆ ಏಳುಮನೆಗಳಲ್ಲಿ ತನಗೆ ಎಷ್ಟು ಲಭಿಸುವುದೋ ಅಷ್ಟರಲ್ಲಿ ತೃಪ್ತನಾಗಬೇಕು. ಪ್ರತಿದಿನವೂ ಊರಹೊರಗಿನ ಜಲಾಶಯಕ್ಕೆ ಹೋಗಿ, ಅಲ್ಲಿ ಆಚಮನಮಾಡಿ, ತಾನು ತಂದ ಭಿಕ್ಷಾನ್ನವನ್ನು ಮೌನದಿಂದ ಭುಜಿಸ ಬೇಕು. ಇಷ್ಟರಲ್ಲಿ ಯಾರಾದರೂ ಬಂದು ಯಾಚಿಸಿದರೆ, ಅವರಿಗೂ ವಿಭಾ ಗಿಸಿಕೊಟ್ಟು ಶೇಷಾನ್ನವನ್ನು ಮಾತ್ರ ತಾನು ಭಜಿಸಬೇಕೇ ಹೊರತು, ತನಗೆ ಸಾಲದುದಕ್ಕಾಗಿ ತಿರುಗಿ ಭಿಕ್ಷೆಗೆ ಹೊರಡಬಾರದು. ಯತಿಯಾದವನು ಸಮಸ್ತಸಂಗಗಳನ್ನೂ ಬಿಟ್ಟು, ಇಂದ್ರಿಯಗಳನ್ನು ಜಯಿಸಿ, ಪರಮಾತ್ಮ ಧ್ಯಾನದಿಂದಲೆ ತುಷ್ಯನಾಗಿ, ಸಮಸ್ಯವೂ ಬ್ರಹ್ಮಾತ್ಮಕವೆಂಬ ಸಮದ್ಯ ಯುಳ್ಳವನಾಗಿ, ಏಕಾಕಿಯಾಗಿಯೇ ಭೂಮಿಯನ್ನು ಸುತ್ತಬೇಕು ಸಿ ರ್ಜನವಾಗಿಯೂ, ನಿರ್ಭಯವಾಗಿಯೂ ಇರುವ ಸ್ಥಳವನ್ನು ಸೇರಿ, ನನ್ನಲ್ಲಿ ಯೇ ನಟ್ಟಿ ಮನಸ್ಸುಳ್ಳವನಾಗಿ, ತನ್ನ ಆತ್ಮವನ್ನು ನನ್ನೊಡನೆ ಅಭೇದಜ್ಞಾ ನದಿಂದ ಚಿಂತಿಸುತ್ತಿರಬೇಕು. ತನ್ನ ಬಂಧಕ್ಕೂ, ಮುಕ್ತಿಗೂ ಕಾರಣವೇ ನೆಂಬುದನ್ನು ತತ್ವಜ್ಞಾನದಿಂದ ತನ್ನಲ್ಲಿಯೇ ಪರಾಲೋಚಿಸುತ್ತಿರಬೇಕು. ಉದ್ಯವಾ! ಇಂದ್ರಿಯಗಳನ್ನು ಯಥೇಚ್ಛವಾಗಿ ಬಿಟ್ಟುಬಿಡುವುದೇ ಜೀ ವಾತ್ಮನಿಗೆ ಬಂದವು. ಅವುಗಳನ್ನು ಅಡಗಿಸಿಟ್ಟುಕೊಳ್ಳುವುದೇ ಮೋಕ್ಷ ವೆಂದು ತಿಳಿ ! ಆದುದರಿಂದ ಸನ್ಯಾಸಿಯು, ಮನಸ್ಸನ್ನೂ , ಐದು ಜ್ಞಾ ನೇಂದ್ರಿಯಗಳನ್ನೂ ವಶಪಡಿಸಿಕೊಂಡು, ನನ್ನಲ್ಲಿ ಪೂರ್ಣಭಕ್ತಿಯನ್ನಿಟ್ಟು, ಶಬ್ದಾದಿವಿಷಯಗಳಲ್ಲಿ ವಿರಕ್ಕನಾಗಿ, ಆತ್ಮಾನುಭವವೆಂಬ ಆನಂದದಿಂದ ಸುಖಿಸುತ್ತ ಸಂಚರಿಸಬೇಕು, ಮತ್ತು ಭಿಕ್ಷಾರ್ಥವಾಗಿ ಅಲ್ಲಲ್ಲಿ ಪಟ್ಟಣಗ ಇನ್ನೂ, ಗ್ರಾಮಗಳನ್ನೂ , ಹಳ್ಳಿಗಳನ್ನೂ , ಸಾತ್ವಿಕರಾದ ಜನರು ಗುಂಪು ಕೂಡಿದ ಸ್ಥಳಗಳನ್ನೂ ಪ್ರವೇಶಿಸುತ್ತ, ಅಲ್ಲಲ್ಲಿ ಪವಿತ್ರಗಳಾದ ಕ್ಷೇತ್ರಗಳ ನ್ಯೂ, ಪರತಗಳನ್ನೂ, ನದಿಗಳನ್ನೂ, ಆಶ್ರಮಗಳನ್ನೂ ಸುತ್ತುತ್ತಿರಬೇಕು. ಸನ್ಯಾಸಿಯು ವಿಶೇಷವಾಗಿ ವಾನಪ್ರಸ್ಥರಿರುವ ಆಶ್ರಮಪ್ರದೇಶಗಳಿಗೆ, ಆ ಗಾಗ ಹೋಗಿ ಭಿಕ್ಷೆಯನ್ನೆತ್ತುವುದು ಉತ್ತಮಪಕ್ಷವು. ಏಕೆಂದರೆ, ವಾನಪ್ಪ ಸ್ಯರು, ಕಣಗಳಲ್ಲಿ ಚೆಲ್ಲಿ ಹೋದ ಧಾನ್ಯಗಳನ್ನೇ ಆಯ್ದು ತಂದು ಭುಜಿಸ ತಕ್ಕವರು. ಆದುದರಿಂದ ಅವರಿಂದ ತಂದ ಭಿಕ್ಷಾನ್ನವು ಬಹಳ ಪರಿಶುದ್ಧ