ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೧೦ ಶ್ರೀಮದ್ಭಾಗವತವು [ಅಧ್ಯಾ- ೧. ದಾನಶೀಲರು. ಗುರುಹಿರಿಯರನ್ನು ಸೇವಿಸತಕ್ಕವರು. ಅವರ ಮನಸ್ಸು ಯಾ ವಾಗಲೂ ಕೃಷ್ಣನಲ್ಲಿಯೇ ನೆಲೆಗೊಂಡಿರುವುದು. ಇಂತವರು ಬ್ರಾಹ್ಮಣ ಶಾಪಕ್ಕೆ ಗುರಿಯಾದರೆಂದು ಹೇಳಿದೆಯಲ್ಲವೆ ? ಅದು ಹೇಗೆ ? ಶಾಪಕಾ ರಣವೇನು ? ಆ ಶಾಪವೆಂತದು ? ಅನ್ನೋನ್ಯಸ್ನೇಹದಿಂದ ಏಕಮನಸ್ಕ ರಾಗಿದ್ದ ಯಾದವರಲ್ಲಿ, ಒಬ್ಬರನ್ನೊಬ್ಬರು ಕೊಲ್ಲುವಷ್ಟು ವೈರಬುದ್ಧಿಯು ಹೇಗೆ ಹುಟ್ಟಿತು ? ಇವೆಲ್ಲವನ್ನೂ ನನಗೆ ವಿವರಿಸಿ ತಿಳಿಸಬೇಕು ?” ಎಂದನು. ಅದ ಕ್ಕಾ ಶುಕಮುನಿಯು (ರಾಜಾ ಕೇಳು ! ಭಗವಂತನು ಶ್ರೀಕೃಷ್ಟರೂ ಪದಿಂದ ಸಾಂಗಸುಂದರವಾದ ಮೂರ್ತಿಯನ್ನು ಧರಿಸಿ, ಲೋಕಕ್ಷೇಮ ಕರಗಳಾದ ಕಾವ್ಯಗಳಿಂದ ತನ್ನ ಉದಾರಕೀರ್ತಿಯನ್ನು ಹರಡುತ್ತ, ವಸು ದೇವನ ಗೃಹದಲ್ಲಿ ವಾಸಿಸುತ್ತಿದ್ದನಷ್ಟೆ? ಆತನು ಪೂರ್ಣಕಾಮನಾಗಿದ್ದರೂ, ತನ್ನ ಅವತಾರಕ್ಕೆ ಮುಖ್ಯಪ್ರಯೋಜನವೆನಿಸಿದ ಭೂಭಾರಪರಿಹಾರರೂ ಪವಾದ ಕಾವ್ಯದಲ್ಲಿ ಇನ್ನೂ ಸ್ವಲ್ಪ ಭಾಗವು ಉಳಿದಿದ್ದುದರಿಂದ, ತೀಪು ದಲ್ಲಿಯೇ ಅದನ್ನು ಪೂರೈಸಿಬಿಡಬೇಕೆಂಬ ಉದ್ದೇಶವು ಅವನ ಮನಸ್ಸಿಗೆ ಹುಟ್ಟಿತು, ಇದಕ್ಕಾಗಿ ಯಾದವಕುಲವನ್ನು ನಿರ್ಮೂಲಮಾಡಬೇಕೆಂದು ಸಂಕಲ್ಪಿಸಿದನು. ಕೃಷ್ಣನು ವಸುದೇವನ ಮನೆಯಲ್ಲಿರುವಾಗ, ಪುಣ್ಯಕರಗ ಳಾಗಿಯೂ, ಕೀರ್ತಿಸತಕ್ಕವರ ಪಾಪಗಳನ್ನು ನೀಗಿಸತಕ್ಕವುಗಳಾಗಿಯೂ, ಜಗನ್ಮಂಗಳಕರಗಳಾಗಿಯೂ ಇರುವ ಎಷ್ಟೋ ಕಾರೈಗಳನ್ನು ನಡೆಸಿ ದನು. ತಾನೇ ಕಾಲಸ್ವರೂಪನಾಗಿ ಸಮಸ್ತ ಜಗತ್ತನ್ನೂ ಸಂಹರಿಸತಕ್ಕ ಆ ಭಗವಂತನಿಗೆ, ಯಾದವಕುಲವನ್ನು ನಾಶಮಾಡಬೇಕೆಂಬ ಸಂಕಲ್ಪವು ಹುಟ್ಟಿದೊಡನೆ, ಕೆಲವು ಮಹರ್ಷಿಗಳು ಆ ಭಗವತ್ಸಂಕಲ್ಪದಿಂದ ಪ್ರೇ ರಿತರಾಗಿ, ದ್ವಾರಕೆಗೆ ಸಮೀಪದಲ್ಲಿರುವ ಪಿಂಡಾರಕವೆಂಬ ಪುಣ್ಯತೀರಕ್ಕೆ ಯಾತ್ರಾರ್ಥಿಗಳಾಗಿ ಬಂದು ಸೇರಿದರು. ಈ ಋಷಿಸಮುದಾಯದಲ್ಲಿ, ವಿಶ್ವಾಮಿತ್ರ: ಅಸಿತ, ಕಣ್ವ, ದೂಧ್ವಾಸ, ಭ್ರಗು, ಅಂಗಿರಸ್ಸು, ಕಶ್ಯಪ, ವಾಮದೇವ, ಅತ್ರಿ, ವಸಿಷ್ಠ, ವಾಮದೇವರೇ ಮೊದಲಾದ ಅನೇಕಮಹ ರ್ಷಿಗಳು ಸೇರಿದ್ದರು. ಇದೇ ಸಮಯದಲ್ಲಿ ಆ ತೀರ ಸಮೀಪದಲ್ಲಿ ವಿಮೋ ದದಿಂದ ಆಟವಾಡುತಿದ್ದ ಮದಾಂಧರಾದ ಕೆಲವು ಯಾದವಕುಮಾರರು,