ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೫೪ ಶ್ರೀಮದ್ಭಾಗವತವು ಅಧ್ಯಾ, ೧೮. ವಾದುದು, ಅದನ್ನು ಭುಜಿಸಿದ ಸನ್ಯಾಸಿಯೂ ಶುದ್ಧನಾಗುವನು. ಸ ನ್ಯಾಸಿಯು ಪ್ರಾಪಂಚಿಕವಾದ ಶಬ್ದಾದಿವಿಷಯಗಳನ್ನು ವಾಸ್ತವವೆಂ ದು ತಿಳಿಯಬಾರದು. ಇವೆಲ್ಲವೂ ನಶ್ವರಗಳು. ಆದುದರಿಂದ ಇಹಲೋಕದ ಮತ್ತು ಪರಲೋಕದ ಸುಖಗಳಿಗೆ ಸಾಧನವಾದ ಕರ್ಮದಲ್ಲಿ ಸನ್ಯಾಸಿಯು ಮನಸ್ಸಿಡಬಾರದು. ವಿವೇಕಜ್ಞಾನದಿಂದ ಈ ವಿಷಯಗಳಲ್ಲಿ ದೃಢವಾದ ವೈರಾಗ್ಯವನ್ನೇ ಹಿಡಿಯಬೇಕು. ಮತ್ತು, ಬುದ್ಧಿ, ಇಂದ್ರಿಯಗಳು, ಮನ ಸ್ಟು, ಪ್ರಾಣಗಳು, ಪಂಚಭೂತಗಳು, ಇವುಗಳ ಸಮುದಾಯದಿಂದೇಲ್ಪಟ್ಟ ತನ್ನ ಶರೀರವು, ಪ್ರಕೃತಿಯ ಪರಿಣಾಮವೆಂದು ತಿಳಿದು, ಆ ಶರೀರಚಿಂತೆಯ ನ್ನು ಬಿಟ್ಟು, ಆತ್ಮಸ್ವರೂಪವನ್ನೇ ಚಿಂತಿಸುತ್ತಿರಬೇಕು. ಶರೀರದಲ್ಲಿ ಆ ತ್ಮವೆಂಬ ಭ್ರಾಂತಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಉದ್ದವಾ ! ಇವಿಷ್ಟೂ ಸನ್ಯಾಸಿನಿಯಮಗಳು. ಹಿಂದೆ ಹೇಳಿದ ನಾಲ್ಕು ಬಗೆಯ ವರ್ಣಾ ಶ್ರಮರ್ಧಗಳನ್ನು ಸರಿಯಾಗಿ ನಡೆಸುತ್ತ ಬರುವುದರಿಂದ, ಆತ್ಮ ಪರಮಾತ್ಮ ಸ್ವರೂಪಜ್ಞಾನವೂ, ವೈರಾಗ್ಯವೂ, ನನ್ನಲ್ಲಿ ಭಕ್ತಿಯೂ ತಾನಾಗಿ ಹುಟ್ಟು ವುದು. ಮೋಕ್ಷದಲ್ಲಿ ಪಡೆಯತಕ್ಕ ವಸ್ತುವೂ, ಮೋಕ್ಷವನ್ನು ಹೊಂದಿಸತ ಕವನೂ, ಮತ್ತು ಮನೋರಧಕ್ಕೆ ವಿಷಯವಾದ ಸಮಸ್ತವೂ, ಆ ಭಗವಂತನೊಬ್ಬನೇ ಎಂಬ ತಿಳಿವಳಿಕೆಯೇ ವೈರಾಗ್ಯಪೂರ್ಣವಾದ ಜ್ಞಾನ ವೆನಿಸುವುದು. ಹೀಗೆ ವಿರಕ್ತನಾದ ಜ್ಞಾನನಿಷ್ಕನಿಗಾಗಲಿ, ಫಲಾ ಪೇಕ್ಷೆಯಿಲ್ಲದೆ ನನ್ನ ಸ್ನೇ ಭಜಿಸತಕ್ಕೆ ಭಕ್ತನಿಗಾಗಲಿ, ಆ ಭಕ್ತಿಜ್ಞಾನ ವೈರಾಗ್ಯಗಳು ಹುಟ್ಟಿದಮೇಲೆ, ಆಯಾ ಆಶ್ರಮಕ್ಕುಗಳಿಂದ ಸಾಧಿಸಬೇ ಕಾದುದೇನೂ ಇಲ್ಲ. ಅಂತವರಿಗೆ ಮೋಕ್ಷಪಾಯವು ಕೈಗೂಡಿದಂತೆಯೇ ಇರುವುದರಿಂದ, ಅವರು ತಮ್ಮ ವರ್ಣಾಶ್ರಮಸಿಯಮಗಳನ್ನೆಲ್ಲಾ, ಶಾಸ್ತ್ರಿ ಯವಾದ ವಿಧಿನಿಷೇಧಗಳ ನಿರ್ಬಂಧವೆಂದು ಭಾವಿಸದೆ, ಎಲ್ಲವನ್ನೂ ಭಗವ ತೈಕಲ್ಯವೆಂದೇ ತಿಳಿದು ನಡೆಸುವರು. ಈ ಭಕ್ತಿ ವೈರಾಗ್ಯಗಳು ಹುಟ್ಟಿ ಪರಿ ಪಕ್ಕವಾದಮೇಲೆ, ಅಂತಹ ಜ್ಞಾನನಿತ್ಯನಿಗೆ, ಲೌಕಿಕವಿಷಯಗಳ ಸ್ಮರ ಣೆಯೇ ಬಿಟ್ಟು ಹೋಗುವುದರಿಂದ, ಅವನು ವಿವೇಕಿಯಾಗಿದ್ದರೂ ಮಗು ವಿನಂತೆ ಮಾನಾವಮಾನಗಳಲ್ಲಿ ದೃಷ್ಟಿಯಿಲ್ಲದೆ ಕ್ರೀಡಿಸುವನು, ಬುದ್ಧಿ