ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, ೧೮.] ಏಕಾದಶಸ್ಕಂಧನು. ೨೫ ಶಾಲಿಯಾಗಿದ್ದರೂ ಮಂಕನಂತೆ ನಡೆಯುತ್ತಿರುವನು. ವಿದ್ವಾಂಸನಾಗಿ Wರೂ ಹುಚ್ಚನಂತೆ ಮಾತಾಡುವನು, ವೇದಾರನಿಷ್ಠನಾಗಿದ್ದರೂ ಪಶು ವಿನಂತೆ ಆಚರಿಸುವನು. ಜ್ಞಾನಿಯು, ಕರಪ್ರಾಧಾನ್ಯವನ್ನು ಹೇಳತಕ್ಕ ವೇದ ವಾದಗಳನ್ನು ಹಿಡಿದು ವಾದಿಸಬಾರದು-ಪಾಷಂಡಿಯಾಗಿಯೂ ಇರಬಾರದು. ಕೇವಲತರ್ಕನಿಷ್ಠನೂ ಆಗಬಾರದು. ಕೆಲಸಕ್ಕೆ ಬಾರದ ವಾದಗಳಲ್ಲಿ ಸೇರಿ ಒಬ್ಬರ ಪಕ್ಷವನ್ನು ಹಿಡಿದು ನಿಲ್ಲಬಾರದು ಇತರಜನರಿಗೆ ಭಯಪಡಬಾರ ದು, ಮತ್ತೊಬ್ಬರನ್ನು ಭಯಪಡಿಸಲೂ ಬಾರದು. ಮತ್ತೊಬ್ಬರು ತನ್ನ ನ್ನು ಕುರಿತು ಕೆಟ್ಟ ಮಾತುಗಳನ್ನಾಡಿದರೂ ಸಹಿಸಿಕೊಳ್ಳಬೇಕು. ಯಾ ರನ್ನೂ ಅವಮಾನಪಡಿಸಬಾರದು ತನ್ನ ದೇಹದಮೇಲಿನ ಅಭಿಮಾನದಿಂದ ಪಶುಬುದ್ಧಿಯುಳ್ಳವನಾಗಿ, ಮತ್ತೊಬ್ಬರೊಡನೆ ವೈರವನ್ನೂ ಬೆಳೆಸಬಾರದು. ಏಕೆಂದರೆ, ಒಂದೇ ಚಂದ್ರಬಿಂಬವು ಅನೇಕಜಲಪಾತ್ರಗಳಲ್ಲಿ ಪ್ರತಿಬಿಂಬಿ ಸುವಂತೆ, ಎಲ್ಲಾ ಶರೀರೆಗಳೊಳಗಿನ ಜೀವಾತ್ಮನಲ್ಲಿಯೂ ಇರುವ ಪರ ಮಾತ್ಯನೊಬ್ಬನೇ , ಹೀಗೆ ಎಲ್ಲಾ ಶರೀರಗಳಿಗೂ ಪರಮಪುರುಷನೇ ಆತ್ಮ ಭೂತನಾದುದರಿಂದ, ಭೂತದ್ವೇಷದಿಂದ ಪರಮಾತ್ಮನನ್ನೇ ದ್ವೇಷಿಸಿ ದಂತಾಗುವುದು. ಸಕಾಲಕ್ಕೆ ತನಗೆ ಅನ್ನವು ಸಿಕ್ಕದಿದ್ದರೂ ಅದಕ್ಕಾಗಿ ದುಃಖಿಸಬಾರದು. ಹೆಚ್ಚಾಗಿ ಸಿಕ್ಕಿದಾಗ ಸಂತೋಷಪಡಲೂ ಬಾರದು. ಈ ಲಾಭಾಲಾಭಗಳೆರಡೂ ದೈವಾಧೀನಗಳು. . ಹಾಗಿದ್ದರೆ ಆಹಾರಕ್ಕಾಗಿ ಶ್ರಮಪಡುವುದೇ ತಪ್ಪಲ್ಲವೆ?” ಎಂದರೆ, ಹಾಗಲ್ಲ ! ಆಕಾರಕ್ಕಾಗಿ ಪ್ರಯ ತ್ರಿಸಿಯೇ ತೀರಬೇಕು. ಏಕೆಂದರೆ, ಪ್ರಾಣಧಾರಣೆಗೆ ಆಹಾರವಿಲ್ಲದಿದ್ದರೆ ಸಾಗದು. ಪ್ರಾಣಧಾರಣೆಯಿಂದಲೇ ತತ್ವಜ್ಞಾನವನ್ನು ಪಡೆದು, ಅದ ರಿಂದ ಮುಕ್ತಿಯನ್ನು ಹೊಂದಬಹುದು. ಆದುದರಿಂದ ಪ್ರಾಣಧಾರಣೆಗೆ ಉಪಯುಕ್ತವಾದಷ್ಟು ಅನ್ನವನ್ನು ಮಾತ್ರ ಪಡೆಯುವುದಕ್ಕೆ ಯತ್ನಿಸಬಹುದು. ಆದರೆ ಪ್ರಯತ್ನ ವಿಲ್ಲದೆ ದೈವಿಕವಾಗಿ ದೊರೆತ ಅನ್ನವು ಅತ್ಯುತ್ತಮವೆನಿಸು ವುದು. ಹಾಗಿಲ್ಲದುದೇನೋ ನಿಕೃಷ್ಟವೇ ! ಆದರೂ ಬೇರೆ ವಿಧಿಯಿಲ್ಲದಿದ್ದಾಗ ಪ್ರಯತ್ನ ಪಟ್ನಾದರೂ ಸಂಪಾದಿಸಿ ಭುಜಿಸಬೇಕು. ಹೀಗೆಯೇ ವಸ್ತವ ನ್ನಾಗಲಿ, ಹಾಸಿಗೆಯನ್ನಾಗಲಿ, ಆಗಾಗ ದೈವಿಕವಾಗಿ ಲಭಿಸಿದುದನ್ನು