ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫ ಶ್ರೀಮಪ್ಪಾಗವತವು [ಅಧ್ಯಾ, ೧೮. ಕೈಕೊಳ್ಳಬೇಕು. ಉದ್ಯವಾ ! ನಾನೂ ಕೂಡ ಶೌಚ, ಸ್ನಾನ, ಮೊದಲಾ ದ ನಿಯಮಗಳನ್ನು ನಡೆಸುವುದುಂಟು.ಇದು ಕೇವಲಲೀಲೆಗಾಗಿಯೇ ಹೊರತು ಶಾಸ್ತ್ರ ನಿರ್ಬಂಧದಿಂದಲ್ಲ. ಇದರಂತೆಯೇ ಜ್ಞಾನಿಯಾದ ವಿರಕ್ಕಮಕೂಡ, ಅವುಗಳನ್ನು ತಾನು ಶಾಸ್ತ್ರ ನಿರ್ಬಂಥಕ್ಕಾಗಿ ಮಾಡುವುದಾಗಿ'ಭಾವಿಸದೆ, ಭಗ ವಂಕರವೆಂಬ ಭಾವದಿಂದಲೇ ನಡೆಸಬೇಕು. ಉದ್ಯವಾ: ಈ ವಿಧವಾದ ನಡತೆಯುಳ್ಳವನಿಗೆ,ಎಲ್ಲವೂ ಮದಾತ್ಮಕವೆಂಬ ಬುದ್ದಿಯು ಸ್ಥಿರಪಡುವುದರಿಂ ದ,ಬ್ರಹ್ಮಾತ್ಮಕವಲ್ಲದ ಸ್ವತಂತ್ರವಸ್ಸುವುಂಟೆಂಬ ಭೇದಭಾಂತಿಯುಬಿಟ್ಟು ಹೋಗುವುದು ಆದರೆ ದೇಹಾವಸಾನದೊಳಗಾಗಿ ಎಂದಾದರೂ ಒಮ್ಮೆ ಅಕಸ್ಮಾತ್ತಾಗಿ ಆ ಭೇದಭ್ರಾಂತಿಯು ತೋರಿದರೂ, ನನ್ನ ವಿಷಯವಾದ ದೃಢಧ್ಯಾನದಿಂದ, ಅವನಿಗೆ ದೇಹಾಂತದಲ್ಲಿ ಆ ಭ್ರಾಂತಿಯು ನಿಶೇಷವಾಗಿ ತೊಲಗಿ, ಅವನು ನನ್ನ ಸಾನ್ನಿಧ್ಯವನ್ನು ಹೊಂದುವುದರಲ್ಲಿ ಸಂದೇಹವಿಲ್ಲ. ಕಾಮೋಪಭೋಗಗಳಿಗೆಲ್ಲಾ ಕೊನೆಗೆ ದುಃಖವೇ ಫಲವೆಂಬುದನ್ನು ತಿಳಿದು, ಅವುಗಳನ್ನು ಹೇಯಭಾವದಿಂದ ಬಿಟ್ಟು ಬಿಟ್ಟವನು, ನನ್ನ ಪ್ರಾಪ್ತಿಗೆ ಸಾಧನ ವೇನೆಂದು ತಿಳಿಯದವನಾಗಿದ್ದರೆ, ಅವನು ಬ್ರಹ್ಮನಿಷ್ಠನಾದ ಆಚಾರ್ ನಲ್ಲಿಗೆ ಹೋಗಿ, ಭಕ್ತಿಯಿಂದಲೂ, ಶ್ರದ್ದೆಯಿಂದಲೂ, ನಿಷ್ಕಪಟಭಾವದಿಂ ದಲೂ ಅವನ ಸೇವೆಮಾಡುತ್ತ, ಬ್ರಹ್ಮ ಜ್ಞಾನವನ್ನು ಪಡೆಯುವವರೆಗೂ ಅಲ್ಲಿಯೇ ಇರಬೇಕು. ಆ ಗುರುವನ್ನು ನನ್ನ ಭಾವದಿಂದಲೇ ಗೌರವಿಸುತ್ತಿರ ಬೇಕು ಇಂದ್ರಿಯಗಳನ್ನು ಜಯಿಸಲಾರದೆ, ವಿಷಯಾಸಕ್ತವಾದ ಬುದ್ಧಿ ಯುಳ್ಳವನಾಗಿ, ಜ್ಞಾನವೈರಾಗ್ಯಗಳೆರಡೂ ಇಲ್ಲದವನು,ತ್ರಿದಂಡವೇ ಮೊದ ಲಾದ ಆಶ್ರಮಚಿಹ್ನೆಗಳನ್ನು ಧರಿಸುವುದು ಹೊಟ್ಟೆ ಹೊರೆಯುವುದಕ್ಕಾಗಿ ಯೆಹೊರತು ಬೇರೆಯಲ್ಲ. ಇಂತವನು, ತನಗೂ, ತನಗೆ ಅಂತರಾತ್ಮನಾದ ನನಗೂ ಇರುವ ಶೇಷಶೇಷಿಭಾವವನ್ನು ತಿಳಿಯದೆ, ತಾನೇ ಸ್ವತಂತ್ರನೆಂದು ತಿಳಿದಿರುವುದರಿಂದ,ತನ್ನ ಆತ್ಮವನ್ನೂ, ನನ್ನನ್ನೂ ವಂಚಿಸಿವವನಾಗುವನು. ಆಶ್ರಮಧರಗಳಿಗೂ ಲೋಪವನ್ನು ತರುವನು. ಅವನ ಪಾಪವೂ ನಿವೃತವಾಗಲಾರದು. ಇದರಿಂದ ಅವನು ಇಹಲೋಕಪರಲೋಕಗ ಳೆರಡರಿಂದಲೂ ಬಹಿಷ್ಕರಿಸಲ್ಪಡುವನು. ಉದ್ಯವಾ! ಮೇಲೆ ಹೇಳಿದ