ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬ ಅಧ್ಯಾ, ೧೮.] ಏಕಾದಶಸ್ಕಂಧವು. ಬ್ರಹ್ಮಚಯ್ಯಾದ್ಯಾಶ್ರಮಗಳಲ್ಲಿ ನಡೆಸಬೇಕಾದ ಪ್ರಧಾನಧರಗಳನ್ನು ಮಾತ್ರ ತಿಳಿಸುವೆನು ಕೇಳು. ಸನ್ಯಾಸಿಗೆ ಇಂದ್ರಿಯನಿಗ್ರಹವೂ, ಅಹಿಂಸೆಯ ಮುಖ್ಯಥರಗಳು. ವಾನಪ್ರಸ್ಥನಿಗೆ, ಕಾಯಕೇಶರೂಪವಾದ ತಪಸ್ಯ, ಆತ್ಮ ಪರಮಾತ್ಮವಿಮರ್ಶೆಯೂ ಪ್ರಧಾನಧರಗಳು. ಗೃಹಸ್ಥನಿಗೆ ಭೂತ ರಕ್ಷಣೆಯೂ, ಪಂಚಮಹಾಯಜ್ಞಗಳೂ ಮುಖ್ಯಥರಗಳು, ಬ್ರಹ್ಮಚಾರಿಗೆ ಆಚಾರಸೇವೆಯೇ ಪ್ರಧಾನಧರವು. ಗೃಹಸ್ಥನಾಗಿದ್ದಾಗಲೂ ಋತುಕಾಲ ಗಳಲ್ಲಿ ಮಾತ್ರ ಪತ್ನಿ ಸಮಾಗಮವನ್ನು ಮಾಡತಕ್ಕವನಿಗೆ ಬ್ರಹ್ಮಚಯ ಫಲವೂಂದು. ಹೀಗೆಯೇ ಗೃಹಸ್ಥನಿಗೆ ತಪಸ್ಸು, ಶೌಚ, ಸಂತೋಷ, ಭೂ ತಸೇವನೆ, ಮೊದಲಾದ ಕೆಲವು ಆಶ್ರಮಾಂತರಧಗಳೂ ವಿಧಿಸಲ್ಪಟ್ಟಿರುವು ವು. ಮೇಲೆ ಹೇಳಿದ ನಾಲ್ಕಾಶ್ರಮದವರೂ ನಡೆಸಬೇಕಾದ ಅತಿಪ್ರಧಾನ ಧರವಾದರೋ ನನ್ನ ಉಪಾಸನವೇ ! ಉದ್ದವಾ ! ಮೇಲೆ ಹೇಳಿದ ರೀತಿ ಯಾಗಿ ಯಾವನು ತನ್ನ ವರ್ಣಾಶ್ರಮಧುಗಳನ್ನು ಬೇರೆ ಫಲಾಪೇಕ್ಷೆಯ ಲ್ಲದೆ ನನ್ನ ಆರಾಧನರೂಪವಾಗಿಯೇ ನಡೆಸುತ್ತ, ಸಮಸ್ತಭೂತಗಳನ್ನೂ ನನ್ನ ಸ್ವರೂಪದಿಂದಲೇ ಭಾವಿಸುತ್ತ ಬರುವನೋ, ಅವನಿಗೆ ಶೀಘ್ರಕಾಲದ ಕ್ಲಿಯೇ ಭಕ್ತಿಯೋಗವು ಕೈಗೂಡಿಬರುವುದು. ಆ ದೃಢಭಕ್ತಿಯಿಂದ ಅವನು ಸೃಷ್ಟಿ ಸ್ಥಿತಿಲಯಕಾರಣನೂ, ಸರೇಶ್ವರನೂ; ಪರಬ್ರಹ್ಮವೂ ಆದ ನನ್ನನ್ನು ಹೊಂದಬಹುದು. ಮನುಷ್ಯನಿಗೆ ತನ್ನ ವರ್ಣಾಶ್ರಮಧಮ್ಮಗಳನ್ನು ಕ್ರಮ ವಾಗಿ ಅನುಸರಿಸುವುದರಿಂದ ಮನಸ್ಸು ಸಮಯವಾಗುವುದು. ಆದ ರಿಂದ ನನ್ನ ಯಾಥಾತ್ಮವನ್ನು ತಿಳಿಯಬಹುದು. ಶಾಸ್ತ್ರಜನ್ಯಜ್ಞಾನದಿಂದ ಲೂ, ನನ್ನ ಉಪಾಸನಾರೂಪವಾದ ಜ್ಞಾನದಿಂದಲೂ, ತತ್ವವನ್ನು ತಿಳಿ ದು ವಿರಕ್ತನಾದವನು, ಕೊನೆಗೆ ಭಕ್ತಿಪರಿಪಾಕವನ್ನು ಹೊಂದಿ, ಅದರ ಬಲ ದಿಂದ ನನ್ನ ಸಾನ್ನಿಧ್ಯವನ್ನು ಸೇರಬಹುದು. ವರ್ಣಾಶ್ರಮಗಳಿಗೆ ಬೇಕಾದ ಥರಗಳೆಲ್ಲವನ್ನೂ ನಿನಗೆ ಹೇಳಿದುದಾಯಿತು. ಈ ಧರಗಳೇ ನನ್ನಲ್ಲಿ ಭಕ್ತಿ ಪೂರೈಕವಾಗಿ ನಡೆಸಲ್ಪಡುವುದರಿಂದ ಮೋಕ್ಷ ಸಾಧನವಾಗುವುದು. ಮು ಸ್ತ್ರೀಗೆ ಭಕ್ತಿಗಿಂತಲೂ ಬೇರೆ ಉಪಾಯವಿಲ್ಲ. ಉದ್ಯವಾ! ಮುಖ್ಯವಾಗಿ ಮನುಷ್ಯನು, ತನ್ನ ವರ್ಣಾಶ್ರಮಥರಗಳನ್ನು ತಪ್ಪದೆ ನಡೆಸುತ್ತ, ನನ್ನಲ್ಲಿ,