ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೮ ಶ್ರೀಮದ್ಭಾಗವತವು [ಅಧ್ಯಾ, ೧೯ ಕೈಯುಕ್ತನಾಗಿದ್ದರೆ, ಅವನು ನನ್ನ ಸ್ಥಾನವನ್ನು ಹೊಂದುವನೆಂದು ತಿಳಿ ! ಇದು ಹದಿನೆಂಟನೆಯ ಅಧ್ಯಾಯವು. ಭಗವಂತನಲ್ಲಿ ಆತ್ಮ ಭರನ್ಯಾಸವು ಮೋಕ್ಷಕ್ಕೆ ಅತಿ ಸುಲಭೋಪಾಯವೆಂದು ಕೃಷ್ಣನು ( ಉದ ವನಿಗೆ ತಿಳಿಸಿದುದು," ) ಉದ್ದವಾ ! ಶಾಸಭ್ಯಾಸದಿಂದಲಾಗಲಿ, ಶಾಸ್ತ್ರಾಧಿಕಾರವಿಲ್ಲದಿ ದ್ದಾಗ ಗುರೂಪದೇಶದಿಂದಲಾಗಲಿ, ಸ್ವರೂಪಜ್ಞಾನವನ್ನು ಪಡೆದು, ಶಾ ಸವಿರುದ್ಧವಲ್ಲದ ಊಹಾಪೋಹಗಳಲ್ಲಿಯೂಚತುರನಾದವನು, ಈ ಶರೀರಾ ದಿಗಳನ್ನು ಭಗವಾ ಯೆಯಿಂದ ಕಲ್ಪಿತಗಳಾದ ಪ್ರಕೃತಿಯ ಪರಿಣಾಮರೂ ಪಗಳೆಂದೂ, ಕೇವಲಜ್ಞಾನಾತ್ಮಕವಾದ ತನ್ನ ಆತ್ಮ ವೂ ಭಗವಂತನಿಗೇ ಆ ಜೀವವೆಂಬ ಇಷ್ಟು ಮಾತ್ರ ತಿಳಿದು, ಆ ಆತ್ಮವನ್ನೂ ನನ್ನ ಕ್ಲಿಯೇ ಒಪ್ಪಿಸ ಬೇಕು ಹೀಗೆ ನನ್ನ ನೈ ಪರಮಪ್ರಾಪ್ಯವೆಂದು ತಿಳಿದವನಿಗೆ, ನಾನು ಹೊರತು ಬೇರೊಂದುವಸ್ತುವೂ ಅಭಿಮತವಾಗಲಾರದು. ಅಂತಹ ಜ್ಞಾನಿಗೆ ನಾ ನು ಅತ್ಯಂತ ಪ್ರಿಯತಮನೂ, ಪ್ರಾಪ್ಯನೂ, ಪ್ರಾಸಕ, ಸಮ್ಮತನೂ ಆಗಿರುವೆನು. ಅವನಿಗೆ ನಾನು ಹೊರತು ಸ್ವರ್ಗವಾಗಲಿ, ಕೈವಲ್ಯವಾಗಲಿ, ಬೇರೆ ಯಾವುದಾಗಲಿ ಇಷ್ಟವಾಗಲಾರದು. ಮೇಲೆ ಹೇಳಿದಂತೆ, ಶರವು ಪ್ರಕೃತಿಪುಣಾಮವೆಂದೂ, ಜ್ಞಾನಸ್ವರೂಪವಾದ - ತ್ಯವು ಪರಮಾತ್ಮ ನಿಗೆ ಶೇಷಭೂತವೆಂದೂ ತಿಳಿದ ಜ್ಞಾನಿಗಳಿಗೆ ಮಾತ್ರವೇ ಪ್ರಕೃತಿಪುರುಷ ರಿಗಿಂತಲೂ ಪರನಾಗಿ, ಸರೋತ್ತಮನೆನಿಸಿಕೊಂಡ ನನ್ನ ಸ್ವರೂಪಜ್ಞಾ ನವು ಸ್ಥಿರಪಡುವುದು. ಆದುದರಿಂದ ಅಂತಹ ಜ್ಞಾನಿಯು ನನಗೆ ಪ್ರಿ ಯತಮನಾಗುವನು. ಮತ್ತು ಅವನು ಅಂತಹ ಜ್ಞಾನದಿಂದ ನನಗೂ ಆತ್ಮದಂತೆ ಧಾರಕನೆನಿಸಿರುವನು. ಉದ್ದವಾ : ಮೇಲೆ ಹೇಳಿದ ಜ್ಞಾನ ಲೇಶಮಾತ್ರದಿಂದ ಎಂತಹ ಕಡ್ಡಿಯುಂಟಾಗುವುದೋ, ಅಂತಹ ಶುದ್ಧಿಯು, ತಪಸ್ಸು, ತೀರ್ಥಯಾತ್ರೆ, ಜಪ, 'ದಾನ, ಶಚ, ಆಚಮನ, ಮೊದಲಾದ ಬೇರೆ ಯಾವವಿಧದಿಂದಲೂ ಉಂಟಾಗಲಾರದು. ಆದುದ ರಿಂದ ನೀನೂ ಈಗ,ನಿರತಿಶಯ ಶುದ್ದಿಯನ್ನುಂಟುಮಾಡತಕ್ಕ ಆಜ್ಞಾನವನ್ನೇ