ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೭೧ ಅಧ್ಯಾ, ೧೯.] ಏಕಾದಶಸ್ಕಂಧವು. ದು ತಿಳಿ! ಹೀಗೆ ದೇಹಾತ್ಮ ವಿವೇಚನೆಯಿಂದ ತಿಳಿವಳಿಕೆಯುಳ್ಳವನಿಗೆ, ಶ್ರುತಿ, ಪ್ರತ್ಯಕ್ಷ, ಐತಿಹ್ಯ, ಅನುಮಾನಗಳೆಂಬ ನಾಲ್ಕು ಬಗೆಯ ಪ್ರಮಾಣಗಳಿಂದ ನಿಷ್ಕರ್ಷಿಸಲ್ಪಟ್ಟ ಎಲ್ಲಾ ಕಮ್ಮ ಫಲಗಳಲ್ಲಿಯೂ ಜಹಾಸೆ ಹುಟ್ಟುವುದು. ಇದೇ ವೈರಾಗ್ಯವು. ಎಲ್ಲಾ ಕರಗಳಿಗೂ ಫಲವು ಒಂದೇ ರೂಪವಾಗಿರು ವುದಿಲ್ಲ. ಅವುಗಳಲ್ಲಿ ಎಷ್ಟೋ ತಾರತಮ್ಯವುಂಟು. ಮತ್ತು ಆಗಾಗ ಆದ ರಲ್ಲಿ ವಿಕಾರಗಳೂ ಉಂಟಾಗುತ್ತಿರುವುವು. ಕೊನೆಗೆ ಆವು ನಷ್ಟವಾಗಿಯೂ ಹೋಗುವುವು. ಆದುದರಿಂದ ಪ್ರತ್ಯಕ್ಷದಲ್ಲಿ ನಮಗೆ ಕಾಣುವ ಕೃತ್ಯಾದಿ ಫಲಗಳು ಹೇಗೋಹಾಗೆ, ಪರೋಕ್ಷದಲ್ಲಿ ಬ್ರಹ್ಮಾಧಿಪತ್ಯದವರೆಗೆ ಶ್ರುತ್ಯಾ ದಿಗಳಲ್ಲಿ ನಿರೂಪಿಸಲ್ಪಟ್ಟ ಕರ ಫಲಗಳೂ ನಶ್ವರಗಳೆಂದೇ ತಿಳಿ ! ಅದುದ ರಿಂದ ಜ್ಞಾನಿಯಾದವನು, ಈ ಕರ ಫಲಗಳೆಲ್ಲವೂ ಕೇವಲದುಃಖಗರ್ಭಗ ಳಾಗಿಯೇ ಇರುವುದರಿಂದ ತನಗೆ ಅಶ್ರೇಯಸ್ಕರಗಳೆಂದೇ ತಿಳಿಯಬೇಕು. ಉದ್ವಾ ! ಭಕ್ತಿಯೋಗದ ಸ್ವರೂಪವನ್ನು ವಿವರಿಸಿ ತಿಳಿಸಬೇಕೆಂದು ಕೇಳಿದೆಯಲ್ಲವೆ? ನಾನು ಹಿಂದೆಯೇ ಅದನ್ನು ನಿನಗೆ ಹೇಳಿರುವೆನು ಆದರೂ ಈಗ ಆಭಕ್ತಿಯೋಗಕ್ಕೆ ಉತ್ತಮಸಾಧನವೇನೆಂಬುದನ್ನು ಮಾತ್ರ ಹೇಳುವೆನು ಕೇಳು. ಅಮೃತಪ್ರಾಯವಾದ ನನ್ನ ಕಥೆಯನ್ನು ಆಗಾಗ ಕೇಳುವುದರಲ್ಲಿ ಅಕ್ಕರೆ, ಆಗಾಗ ನನ್ನ ಗುಣಗಳನ್ನು ಕೊಂಡಾಡುವುದು, ಆಗಾಗ ನನ್ನನ್ನು ಪೂಜಿಸುತ್ತಿರುವುದು, ನನ್ನ ಜನ್ಮ ಕರೆಗಳನ್ನು ಪ್ರತಿಪಾದಿಸುವ ಸ್ತುತಿ ವಾಕ್ಯಗಳಿಂದ ಆಗಾಗ ನನ್ನನ್ನು ಸ್ತುತಿಸುವುದು, ನನ್ನ ಮಂದಿರಗಳನ್ನು ಸಾರಿಸುವುದು, ಗುಡಿಸುವುದು ಮುಂತಾದ ಪಂಚತ್ಯೆಗಳಲ್ಲಿ ಶ್ರದ್ಧೆ, ನನಗೆ ಸಾಷ್ಟಾಂಗಪ್ರಣಾಮಮಾಡುವುದು, ನನ್ನ ಭಕ್ತರನ್ನು ವಿಶೇಷವಾಗಿ ಆದರಿ ಸುವುದು, ಸಮಸ್ತಭೂತಗಳೂ ಮದಾತ್ಮಕಗಳೆಂಬ ಬುದ್ಧಿ, ನನ್ನ ಆರಾಧ ನೆಗೆ ಬೇಕಾದ ತುಳಸಿ, ಹೂ, ಮೊದಲಾದುವುಗಳನ್ನು ಸಂಗ್ರಹಿಸುವುದ ರಲ್ಲಿ ದೇಹವ್ಯಾಪಾರವನ್ನೂ, ನನ್ನ ಗುಣಕೀರ್ತನದಲ್ಲಿ ವಾಕ್ಕನ್ನೂ, ನನ್ನ ಸ್ಮರಣೆಯಲ್ಲಿ ಮನಸ್ಸನ್ನೂ ಉಪಯೋಗಿಸುವುದು, ಇತರ ಕಾಮಗಳಲ್ಲಿ ಆಸೆಯನ್ನು ತೊರೆಯುವುದು, ನನ್ನ ವಿಷಯದಲ್ಲಿಯೇ ಧನವನ್ನು ವೆಚ್ಚ ಮಾಡುವುದು, ತನ್ನ ಭೋಗದಲ್ಲಿಯೂ ಸುಖದಲ್ಲಿಯೂ ಆಸೆಯನು