ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬೨ ಶ್ರೀಮದ್ಭಾಗವತವು [ಅಧ್ಯಾ, ೧೯, ತೊರೆಯುವುದು, ನನ್ನನ್ನು ದ್ವೇತಿಸಿಯೇ ಯಜ್ಞ, ದಾನ, ಜಪ, ತಪಸ್ಸು ಹೋಮವ್ರತಾದಿಗಳನ್ನು ನಡೆಸುವುದು, ತನ್ನ ಆತ್ಮವ ನ್ಯೂ ನನಗೇ ಆಧೀನವಾಗಿ ಒಪ್ಪಿಸಿಬಿಡುವುದು, ಇವೆಲ್ಲವೂ ನನ್ನಲ್ಲಿ ಭಕ್ತಿ ಯನ್ನು ಹುಟ್ಟಿಸತಕ್ಕ ಉತ್ತಮಧಗಳೆನಿಸುವುವು. ಇಂತಹ ಭಕ್ತಿಯೋ ಗವು ಹುಟ್ಟಿದಮೇಲೆ, ಬೇರೆ ಯಾವಪುರುಷಾರಕ್ಕೂ ಮನುಷ್ಯನು ಆಸೆ ಪಡುವಹಾಗಿಲ್ಲ ! ಅಂತವನಿಗೆ ಸಮಸ್ಯಪುರುಷಾರಗಳೂ ಸುಲಭಗಳೇ ಆಗು ವುವು. ಯಾವಾಗ ಪುರುಷನು, ರಾಗಾಹಿಗಳಿಂದ ಕಲುಷಿತವಾಗದ ಸತ್ವ ಪ್ರಧಾನವಾದ ತನ್ನ ಮನಸ್ಸನ್ನು ಅಂತರಾತ್ಮನಾದ ನನ್ನಲ್ಲಿ ಅರ್ಪಿಸು ವನೋ, ಆಗ ಅವನಿಗೆ, ಧರೆ, ಜ್ಞಾನ, ವೈರಾಗ್ಯ, ಐಶ್ವವ್ಯಗಳೆಂಬೀ ಪುರು ಷಾರಗಳೆಲ್ಲವೂ ಕೈಗೂಡಿದಂತೆಯೇ ತಿಳಿ ! ಹಾಗಿಲ್ಲದೆ, ರಜಸ್ತಮೋಗುಣಗ ಳಿಂದ ತುಂಬಿ ದೇಹಾದಿಗಳಲ್ಲಿ ಆಸಕ್ತವಾದ ಮನಸ್ಸು, ಇಂದ್ರಿಯಗಳಿಗೆ ವಶವಾಗಿ, ಶಬ್ಬಾದಿವಿಷಯಗಳಕಡೆಗೇ ಓಡುತ್ತಿರುವುದು. ಅಂತಹ ಮನಸ್ಸೇ, ಅಧರಕ್ಕೆ ಮೂಲವಾಗುವುದೆಂದು ತಿಳಿ' ಮುಖ್ಯವಾಗಿ ನನ್ನಲ್ಲಿ ಭಕ್ತಿಯನ್ನು ಹೆಚ್ಚಿಸತಕ್ಕದುಯಾವುದೋ ಅದೇದವು.ಸಮಸ್ತಜೀವಗಳಲ್ಲಿಯೂ ಪರ ಮಾತ್ಮನು ಅಂತರಾತ್ಮನಾಗಿರುವನೆಂದು ತಿಳಿಯುವುದೇ ಜ್ಞಾನವು. ಶಬ್ಬಾ ದಿವಿಷಯಗಳು ಅನರಹೇತುವೆಂಬುದನ್ನು ತಿಳಿದು, ಅವುಗಳಲ್ಲಿ ಅನಾದರ ವನ್ನು ತೋರುವುದೇ ವೈರಾಗ್ಯವು, ಉಪಾಸನಾಯೋಗಕ್ಕೆ ಸಾಧನಗಳಾದ ಅಣಿಮಾದಿಗಳೇ ಐಶ್ವಯ್ಯಗಳೆಂದು ತಿಳಿಯಬೇಕು” ಎಂದನು. ತಿರುಗಿ -ಉದ್ದವನು ಪ್ರಶ್ನೆ ಮಾಡುವನು. ಕೃಷ್ಣಾ ! ಮೋಕ್ಷಪ್ರಾ ಪಿಗೆ ಯಮನಿಯಮಾದ್ಯಂಗಗಳೊಡಗೂಡಿದ, ಶಮದಮಾರಿಗುಣಗಳು ಸಾಧಕಗಳೆಂದು ಹೇಳಿದೆಯಲ್ಲವೆ? ಯಮವೆಂದರೇನು? ನಿಯಮವೆಂದರೇನು ? ಅವುಗಳಲ್ಲಿ ಎಷ್ಟು ಭೇದಗಳುಂಟು ? ಶಮದಮಗಳೆಂಬವಾವುವು ? ತಿತಿಕ್ಷೆ, ಧೃತಿ, ದಾನ, ತಪಸ್ಸು, ಶಲ್ಯ, ಸತ್ಯ, ಮತ, ತ್ಯಾಗ, ಇವುಗಳ ಸ್ವರೂಪ ವೆಂತದು ? ಮನುಷ್ಯನಿಗೆ ಸುಖಸಾಧನವಾದ ಧನವಾವುದು ? ಯಜ್ಞ ವಾವುದು ? ದಕ್ಷಿಣೆಯೆಂದರೆ°ರು ? ಬಲವಾವುದು ? ಭಗ (ಮಹಿಮೆ) ಲಾಭ, ವಿದ್ಯೆ, ಹೀ, ಉತ್ತಮವಾದ ಭೂಷಣಗಳು, ಇವಾವುವು? ಸುಖದುಃಖಗ