ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬1 ಅಧ್ಯಾ, ೧೯.] ಏಕಾದಶಸ್ಕಂಧನು. ಳಾವುವು ? ಎಂತವನ ಪಂಡಿತನು ? ಎಂತವನು ಮೂರ್ಖನು ? ಸನ್ಮಾರ್ಗ ಗಳಾವುವು ? ಸ್ವರ್ಗನರಕಗಳ ಸ್ವರೂಪವೆಂತದು ? ಬಂಧುಗಳೆಂಬವರಾರು ? ಗೃಹವೆಂದರೆ ಯಾವುದು ? ಧನವಂತನಾರು ? ದರಿದ್ರನಾರು ? ಕೃಪಣ ನೆಂದರೆ ಎಂತವನು ? ಆಳತಕ್ಕ ಪ್ರಭುವಾರು ? ಸೇವಕನಾವನು ; ಓನಾ ಥಾ ! ಭಕ್ತಿಸಾಧಕಗಳಾದ ಈ ಯಮನಿಯಮಾದಿಗಳ ಸ್ವರೂಪವನ್ನೂ, ಇವುಗಳಿಗೆ ವಿರುದ್ಧ ಗುಣಗಳಾವುವೆಂಬುದನ್ನೂ ನನಗೆ ತಿಳಿಸಬೇಕು”ಎಂದನು. ಅದಕ್ಕಾ ಕೃಷ್ಣನು ಉದ್ಯವಾ ! ಕೇಳು ! ಇತರಭೂತಗಳಿಗೆ ದ್ರೋಹವನ್ನೆಣಿಸದಿರುವುದು. ಎಲ್ಲಾ ಭೂತಗಳ ವಿಷಯದಲ್ಲಿಯೂ ಹಿತ ವನ್ನೇ ನುಡಿಯುವುದು, ಮನಸ್ಸಿನಿಂದಾದರೂ ಪರಸ್ವತಿಗೆ ಆಸೆಪಡದಿರು ವುದು, ಯಾವುದರಲ್ಲಿಯೂ ಅಧಿಕಾಸಕ್ತಿಯಿಲ್ಲದಿರುವುದು, ನಿಷಿದ್ಧ ಕಾದ್ಯಗಳ ವಿಷಯದಲ್ಲಿ ನಾಚಿಕೆ, ಯಾವುದರಲ್ಲಿಯೂ ತನ್ನ ವೆಂಬ ಅಭಿಮಾನವನ್ನಿಡ ದಿರುವುದು, ವೇದಶಾಸ್ತ್ರಾಹಿಗಳಲ್ಲಿ ನಂಬಿಕೆ, ಪರಸಂಗವಿಲ್ಲದಿರುವುದು, ವೃಧಾಲಾಪಗಳಿಗೆ ಬಾಯಿಕ್ಕದಿರುವುದು. ಮನಶ್ಯಾಂಚಲ್ಯವಿಲ್ಲದಿರುವುದು, ತಾಳ್ಮೆ, ಪಾಪಭೀತಿ, ಇವು ಹನ್ನೆರಡೂ ಯಮಗಳೆನಿಸುವುವು. ಇವುಗಳನ್ನೆ ಕ್ರಮವಾಗಿ ಅಹಿಂಸೆ, ಸತ್ಯ, ಅಸ್ತೇಯ, ಅಸಂಗ, ಹೀ, ಅಸಂಚಯ, ಆಸ್ತಿಕ್ಯ, ಬ್ರಹ್ಮಚಯ್ಯ, ಮೌನ, ಸೈತ್ಯ, ಕ್ಷಮೆ, ಭಯವೆಂದು ಹೇಳುವರು. ಬಾಹ್ಯಶುದ್ಧಿ, ಅಂತರ ಶುದ್ಧಿ, ಜಪ, ತಪಸ್ಸು, ಹೋಮ, ಕಲ್ಮಶ್ರದ್ಧೆ, ಅತಿಥಿಸತ್ಕಾರ, ನನ್ನನ್ನು ಭಕ್ತಿಯಿಂದ ಪೂಜಿಸುವುದು ದೇವ ತಾಪೂಜೆ ತೀರ್ಥಯಾತ್ರೆ, ಪರೋಪಕಾರಚಿಂತೆ, ಇದ್ದುದರಲ್ಲಿ ತೃಪ್ತಿ, ಆಚಾರಸೇವೆ, ಇವು ಹನ್ನೆರಡೂ ನಿಯಮಗಳೆನಿಸುವುವು. ಇನ್ನು ಶಮದಮಾ ದಿಗಳ ನಿಷ್ಠಷ್ಣಲಕ್ಷಣಗಳನ್ನೂ ವಿವರಿಸುವೆನು ಕೇಳು. ಬುದ್ಧಿಯನ್ನು ಮದೇಕಧ್ಯಾನದಲ್ಲಿಡುವುದೇ ಶಮವು, ಬಾಂದ್ರಿಯಗಳನ್ನಡಗಿಸುವುದು ದಮವೆನಿಸುವುದು. ದುಃಖವನ್ನು ಸಹಿಸಿಕೊಳ್ಳುವುದೇ ತಿತಿಕ್ಷೆ. ನಾಲಗೆ ಯನ್ನೂ, ಕಾಮಚಾಪಲ್ಯವನ್ನೂ ತಡೆದಿಡುವುದೇ ಕೃತಿಯೆನಿಸುವುದು. ಭೂತದ್ರೋಹವಿಲ್ಲದಿರುವುದೇ ದಾನವು, ಭೋಗಗಳನ್ನ ಪೇಕ್ಷಿಸದಿರುವುದೇ ತಪಸ್ಸು, ಹಸಿವು, ಬಾಯಾರಿಕೆ, ಮುಂತಾದ ಸ್ವಭಾವಗಳಿಗೆ ಈಡಾಗದಿರುವ