ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, ೧.] ಏಕಾದಶಸ್ಕಂಧವು. ೨೪೧೧ ಆ ಮಹರ್ಷಿಗಳನ್ನು ಕಂಡೊಡನೆ ಮುಂದೆ ಬಂದು,ಕಪಟವಿನಯವನ್ನು ತೋ ರಿಸುತ್ತ, ಅವರ ಪಾದಗಳನ್ನು ಹಿಡಿದು ನಮಸ್ಕರಿಸಿದರು. ಮತ್ತು ಆ ಋಷಿ ಗಳನ್ನು ಮೋಸಗೊಳಿಸಿ ಹಾಸ್ಯಮಾಡಬೇಕೆಂಬ ಉದ್ದೇಶದಿಂದ, ತಮ್ಮ ಗುಂಪಿನಲ್ಲಿ ಚಾಂಬವತೀಪುತ್ರನಾದ ಸಾಂಬನಿಗೆ, ಗರ್ಭಿಣಿಯಂತೆ ವೇಷ ವನ್ನು ಹಾಕಿ, ಅವನನ್ನು ಆ ಋಷಿಗಳಮುಂದೆ ನಿಲ್ಲಿಸಿ, ಹೀಗೆಂದು ಹೇಳು ವರು, “ಓ ಮಹಾತ್ಮರೆ ! ಇದೋ ! ಈಕೆಯು ಗರ್ಭಿಣಿ ! ಇವಳು ತನಗೆ ಗಂಡುಮಗುವೇ ಹುಟ್ಟಬೇಕೆಂದು ಬಹಳವಾಗಿ ಆಸೆಪಡುತ್ತಿರುವಳು. ಇವಳಿಗೆ ಪ್ರಸವಕಾಲವು ಸಮೀಪಿಸಿರುವುದು. ಮುಂದೆ ತನಗೆ ಯಾವ ಮಗುವು ಹುಟ್ಟಬಹುದೆಂಬುದನ್ನು ನಿಮ್ಮಿಂದ ತಿಳಿಯಬೇಕೆಂದಿರು ವಳು. ಈ ವಿಚಾರವನ್ನು ತಾನಾಗಿ ಬಾಯಿಬಿಟ್ಟು ಕೇಳುವುದಕ್ಕೆ ನಾಚಿಕೆ ಪಟ್ಟು, ನಮ್ಮೊಡನೆ ಹೇಳಿರುವಳು. ಓ ಮಹರ್ಷಿಗಳೆ ! ನಿಮ್ಮ ಜ್ಞಾನ ದೃಷಿಯೋ ಅಮೋಘವಾದುದು. ಆದುದರಿಂದ ಇವಳ ಉದ್ದೇಶವು ಸಫಲವಾಗಬಹುದೇ ಇಲ್ಲವೇ! ಮುಂದೆ ಇವಳಿಗೆ ಹುಟ್ಟಬಹುದಾದ ಮಗುವು ಗಂಡೇ ಅಥವಾ ಹೆಣ್ಣೆ ಎಂಬುದನ್ನು ನೀವು ಹೇಳಬೇಕು” ಎಂದರು. ತಮ್ಮ ಧ್ಯಾನದೃಷ್ಟಿಯಿಂದಲೇ ಸಮಸ್ತವನ್ನೂ ತಿಳಿಯಬಲ್ಲ ಆ ಮಹರ್ಷಿಗಳಿಗೆ, ಈ ಯಾದವಕುಮಾರರ ಮೋಸವು ತಿಳಿದುಹೋಯಿತು. ಆಗ ಅವರೆಲ್ಲರೂ ಅತ್ಯಾಕೋಶದಿಂದ ಆ ಯಾದವರನ್ನು ಕುರಿತು. ಎಲೈ ಮೂರ್ಖರೆ! ಈ ವ್ಯಕ್ತಿಯ ಗರ್ಭದಲ್ಲಿ ನಿಮ್ಮ ಕುಲವೆಲ್ಲವನ್ನೂ ನಿರ್ಮೂಲ ಮಾಡತಕ್ಕ ಒಂದಾನೊಂದು ಮುಸಲವು (ಒನಕೆಯು) ಹುಟ್ಟುವುದು. ಹೋಗಿರಿ!” ಎಂದರು. ಒಡನೆಯೇ ಆ ಯಾದವರೆಲ್ಲರೂ ಭಯಗ್ರಸ್ತರಾಗಿ, ಆ ಸಾಂಬನ ಹೊಟ್ಟೆಯನ್ನು ಬಿಚ್ಚಿ ನೋಡಿದಾಗ, ಅಲ್ಲಿ ಉಕ್ಕಿನ ಮುಳ್ಳುಗ ಳುಳ್ಳ ಒಂದಾನೊಂದು ಒನಕೆಯು ಕಾಣಿಸಿತು. ಅದನ್ನು ನೋಡಿ ಅವರ ಭಯವು ಮತ್ತಷ್ಟು ಹೆಚ್ಚಿತು. ( ಅಯ್ಯೋ ! ದುರ್ಭಾಗ್ಯರಾದ ನಾವು ಎಂತಹ ದುಷ್ಕಾರಕ್ಕೆ ಯತ್ನಿಸಿದೆವು. ನಮ್ಮ ಬಂಧುಮಿತ್ರರು ಇದನ್ನು ಕೇಳಿದರೆ ನಮ್ಮನ್ನು ಸುಮ್ಮನೆ ಬಿಡುವರೆ ? ಮುಂದೇನು ಗತಿ? ಎಂದು ಭಯದಿಂದ ನಡುಗುತ್ತ, ಆ ಒನಕೆಯನ್ನೂ ತೆಗೆದುಕೊಂಡು ಹಿಂತಿರುಗಿ